ವಿವೇಕವಾರ್ತೆ : ಕರ್ನಾಟಕದಲ್ಲಿ ಕೆಲವು ವಾರಗಳಿಂದ ಮಳೆ ಅಬ್ಬರಿಸಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿತ್ತು. ನಿರಂತರ ಮಳೆಗೆ ಬೇಸತ್ತಿನ ಜನರು, ನದಿ ತೀರದ ನಿವಾಸಿಗಳು ಇದೀಗ ನಿಟ್ಟುಸಿರುವ ಬಿಡುವಂತಾಗಿದೆ.
ಸದ್ಯ ಕರ್ನಾಟಕದಲ್ಲಿ ವರುಣ ಕೃಪೆ ತೋರಿದ್ದಾನೆ.
ಅರ್ಥಾತ್ ಬರಗಾಲದಲ್ಲಿ ವರುಣ ಕೃಪೆ ತೋರಿದರೆ, ಮಳೆ ಬರುವ ಹಾಗೆ, ವ್ಯಾಪಕ ಮಳೆ ಬಂದ ಪ್ರವಾಹ ಉಂಟಾದ ವೇಳೆ ಮಳೆ ಜನರ ಮೇಲೆ ಕೃಪೆ ತೋರಿದ್ದು, ರೌದ್ರಾವತಾರದಿಂದ ತಣ್ಣಗಾಗಿದ್ದಾನೆ ಎನ್ನಬಹುದಾಗಿದೆ.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ರಾಜ್ಯದಲ್ಲಿ ಮಳೆ ಆರ್ಭಟ ಕಡಿಮೆ ಆಗಿದ್ದು, ಪ್ರವಾಹ ಪೀಡಿತ ಜನರು, ನಿಟ್ಟುಸಿರು ಬಿಡುವಂತಾಗಿದೆ. ಭಾನುವಾರದಿಂದ ಮಳೆ ಇಳಿಕೆ ಆಗಲಿದೆ. ಒಂದೆರಡು ಜಿಲ್ಲೆಗಳಲ್ಲಿ ಮಾತ್ರವೇ ಸಾಧಾರಣದಿಂದ ಮಳೆ ಬರಲಿದೆ.
ಅತ್ಯಧಿಕ ಮಳೆಯ ಜಿಲ್ಲೆಗಳ ಜನರಲ್ಲಿ ಆತಂಕ ದೂರ
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀಯಿಂದ ಅತ್ಯಧಿಕ ಮಳೆ ದಾಖಲಾಗಿದ್ದು, ಇಲ್ಲಿ ವಾತಾವರಣ ಸಹಜ ಸ್ಥಿತಿಯತ್ತ ಮರಲಿದೆ. ಇನ್ನೂ ಒಳನಾಡಿನ ಬೆಳಗಾವಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಧಾರವಾಡ ಇನ್ನಿತರ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ಕಡಿಮೆ ಆಗಿದೆ. ಆಗಾಗ ತುಂತುತು ಮಳೆ ಬರುತ್ತಿದೆ. ಮುಂದಿನ ಮೂರು ದಿನ ಇದೇ ವಾತಾವರಣ ಮುಂದುವೆಯಲಿದೆ. ಭಾರೀ ಮಳೆಯ ಮುನ್ಸೂಚನೆ ಇಲ್ಲ ಎನ್ನಲಾಗಿದೆ.
ಮಳೆ ಇಳಿಕೆ, 3 ಜಿಲ್ಲೆಗಳಿಗೆ ಮಾತ್ರ ಮುನ್ಸೂಚನೆ
ರಾಜ್ಯದಲ್ಲಿ ಹಲವು ದಿವಸಗಳ ಕಾಲ ‘ರೆಡ್ ಅಲರ್ಟ್ ಪಡೆದಿದ್ದ’ ಜಿಲ್ಲೆಗಳಾದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಎರಡು ಜಿಲ್ಲೆಗಳಿಗೆ ಮಳೆ ಪೂರ್ತಿ ಕಡಿಮೆ ಆಗಿದೆ. ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಜುಲೈ 29, 30ರಂದು ಎರಡು ದಿನ ಭಾರೀ ಮಳೆ ಆಗಲಿದೆ. ಇನ್ನೂ ಜುಲೈ 29ರಂದು ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಮಾತ್ರವೇ ಭಾರೀ ಮಳೆ ಆಗಲಿದೆ. ಹೀಗಾಗಿ ಮೇಲಿನ ಈ ಮೂಲಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಹಗುರ ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ.
ಪಶ್ಚಿಮ ಘಟ್ಟಗಳ, ಕಣಿವೆ ಭಾಗದಲ್ಲಿ ಸುರಿದ ಮಳೆಯಿಂದಾಗಿ ಬತ್ತಿ ಹೋಗಿದ್ದ ನದಿಗಳು, ಜಲಾಶಯಗಳಿಗೆ ಮರು ಜೀವ ಬಂದಿವೆ. ಆದರೆ ಭಾರೀ ಮಳೆ ನಿರಂತರವಾಗಿ ಮುಂದುವರಿದ ಪರಿಣಾಮ, ಹೆಚ್ಚುವರಿ ನೀರನ್ನು ಹೊರ ಬಿಡಬೇಕಾಯಿತು. ಕೆಆರ್‌ಎಸ್, ಕಬಿನಿ, ಕೃಷ್ಣ, ಘಟಪ್ರಭ, ಹಾರಂಗಿ, ಹೇಮಾವತಿ, ಆಲಮಟ್ಟಿ ಹೀಗೆ ರಾಜ್ಯದ ಪ್ರಮುಖ ಡ್ಯಾಂಗಳ ಹೊರ ಹರಿವು ಹೆಚ್ಚಾಯಿತು.
ಒಂದು ವಾರದಲ್ಲಿ ಸಹಜ ಸ್ಥಿತಿಗೆ?
ಇದರಿಂದ ಆಯಾ ಭಾಗದಲ್ಲಿ ನದಿಗಳಲ್ಲಿ ನೀರಿನ ಸಂಗ್ರಹ ಏರಿಕೆ ಆಯಿತು. ಮತ್ತೊಂದು ನಿರಂತರ ಮಳೆಯಿಂದ ಪ್ರವಾಹ, ನೆರೆ ಸೃಷ್ಟಿಯಾಗಿತ್ತು. ಇದೀಗ ಮಳೆ ತಕ್ಕಮಟ್ಟಿಗೆ ಬಿಡುವು ನೀಡಿದೆ. ಇದೇ ವಾತಾವರಣ ಮುಂದುವರಿದರೆ, ಮುಂದಿನ ಒಂದು ವಾರದಲ್ಲಿ ಹವಾಮಾನ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ ಇದೆ.