13 ಎಟಿಎಂ ದೋಚಿದ್ದ ಖದೀಮನಿಗೆ ಪೊಲೀಸರಿಂದ ಗುಂಡೇಟು

WhatsApp Group Join Now
Telegram Group Join Now
Instagram Account Follow Now

ಬಳ್ಳಾರಿ: ಎರಡು ಕೊಲೆ ಹಾಗೂ 13 ಎಟಿಎಂ (ATM) ಕಳ್ಳತನ ಸೇರಿದಂತೆ ಸುಮಾರು 30 ಪ್ರಕರಣಗಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನಿಗೆ ಸಿರುಗುಪ್ಪ ಪೊಲೀಸರು (Police) ಗುಂಡೇಟು ನೀಡಿದ್ದಾರೆ.

ಆರೋಪಿ ಅಮರೇಶ್ ಗುಂಡೇಟು ತಿಂದ ಆರೋಪಿಯಾಗಿದ್ದಾನೆ. ಆರೋಪಿಯನ್ನು ಪ್ರಕರಣವೊಂದರ ಸ್ಥಳ ಮಹಜರಿಗೆ ಕರೆದೊಯ್ದಿದ್ದಾಗ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ, ಸಿರುಗುಪ್ಪ ಸಿಪಿಐ ಹನುಮಂತಪ್ಪ, ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಆರೋಪಿ ಇದನ್ನು ಲೆಕ್ಕಿಸದೇ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದ. ಆಗ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಸಿಂಧೂ ನದಿ ನೀರಿಗಾಗಿ ಮತ್ತೆ ಬೇಡಿದ್ದ ಪಾಕ್​ಗೆ ಖಡಕ್ ಉತ್ತರ.. ಏನಂದ್ರು ಜೈಶಂಕರ್​..?

ಆರೋಪಿ ಅಮರೇಶ್ ಕರ್ನಾಟಕ ಹಾಗೂ ಆಂದ್ರದ ಎರಡೂ ರಾಜ್ಯಗಳಲ್ಲಿ ಕಳ್ಳತನ ಮಾಡುವಾಗ ಕೊಲೆ ಮಾಡಿದ್ದ. ಈತನ ಮೇಲೆ ಎರಡು ಕೊಲೆ, 6 ಡಕಾಯಿತಿ, 13 ಎಟಿಎಂ ಕಳ್ಳತನದಲ್ಲಿ ಭಾಗಿಯಾದ ಆರೋಪಗಳಿವೆ.

ಘಟನೆಯಲ್ಲಿ ಪೇದೆ ವಿರೂಪಾಕ್ಷ ಗೌಡ ಹಾಗೂ ಮಾರುತಿಯವರಿಗೆ ಗಾಯಗಳಾಗಿದ್ದು, ಅವರಿಗೆ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment