ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜು ಮುಗಿದಿದೆ. ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ 2 ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾಗಿದ್ದಾರೆ.
ಮೆಗಾ ಆಕ್ಷನ್ಗೆ ಮುನ್ನ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹೊರ ಹಾಕಲಾಗಿತ್ತು. ಈಗ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿಗೆ ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ಖರೀದಿ ಮಾಡಿದೆ. ಇವರು 2025ರ ಮೆಗಾ ಹರಾಜಿನಲ್ಲೇ ಸೇಲಾದ ಅತ್ಯಂತ ದುಬಾರಿ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
27 ಕೋಟಿಯಲ್ಲಿ ಪಂತ್ ಅವರಿಗೆ ಎಷ್ಟು ಹಣ ಸೇರುತ್ತದೆ ಎಂಬುದು ಎಲ್ಲರ ಪ್ರಶ್ನೆ. ಕೆಲವು ವರದಿಗಳ ಪ್ರಕಾರ ಎಲ್‌ಎಸ್‌ಜಿ ಫ್ರಾಂಚೈಸಿ ರಿಷಬ್ ಪಂತ್ ಅವರನ್ನು 27 ಕೋಟಿಗೆ ಬಿಡ್ ಮಾಡಿದ್ರೂ ಸಂಪೂರ್ಣ ಮೊತ್ತ ಅವರಿಗೆ ಸಿಗುವುದಿಲ್ಲ. ಭಾರತ ಸರ್ಕಾರದ ಆದಾಯ ತೆರಿಗೆ ಕಾಯ್ದೆ ಪ್ರಕಾರ ರಿಷಬ್ ಪಂತ್ ಅವರು ಸರ್ಕಾರಕ್ಕೆ 8.1 ಕೋಟಿ ತೆರಿಗೆಯಾಗಿ ಪಾವತಿಸಬೇಕು. ಹಾಗಾಗಿ ಪಂತ್ ಅವರಿಗೆ 18.9 ಕೋಟಿ ಮಾತ್ರ ಸಿಗಲಿದೆ.
ಪಂತ್ ಒಳ್ಳೆ ಕ್ಯಾಪ್ಟನ್. ಅಲ್ಲದೆ ಇವರು ವಿಕೆಟ್ ಕೀಪಿಂಗ್ ಮಿಡಲ್ ಆರ್ಡರ್ ಬ್ಯಾಟರ್ ಆಗಿ ನ್ಯಾಯ ಒದಗಿಸಬಲ್ಲರು. ಹೀಗಾಗಿ ಲಕ್ನೋ ತಂಡ ಒಂದೇ ಕಲ್ಲಿಗೆ ಮೂರು ಸ್ಲಾಟ್‌ಗಳನ್ನು ಫಿಲ್ ಮಾಡಿಕೊಳ್ಳು ಪ್ಲ್ಯಾನ್ ಮಾಡಿಕೊಂಡಿದೆ. ಹಾಗಾಗಿ ಪಂತ್ ಅವರನ್ನು ಖರೀದಿಸಿದೆ. ಪಂತ್ಗಾಗಿ ಆರ್ಸಿಬಿ, ಲಕ್ನೋ, ಸನ್ರೈಸರ್ಸ್ ಹೈದರಾಬಾದ್ ಮಧ್ಯೆ ಭಾರೀ ಪೈಪೋಟಿ ನಡೆದಿತ್ತು.