ಜಸ್ಟ್ 10th ಪಾಸ್​ ಆದ ಯುವಕ, ಯುವತಿಯರಿಗೆ ಉದ್ಯೋಗ.. ಆದ್ರೆ ಕಂಡೀಷನ್ಸ್ ಅಪ್ಲೈ..!

WhatsApp Group Join Now
Telegram Group Join Now
Instagram Account Follow Now

ಉದ್ಯೋಗ ವಾರ್ತೆ : ಸ್ಪೋರ್ಟ್ಸ್​ ಕೋಟಾದಡಿ ಖಾಲಿ ಇರುವಂತ ಹುದ್ದೆಗಳನ್ನು ನೇಮಕ ಮಾಡಲು ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ (ಬಿಎಸ್​​ಎಫ್​) ಅಧಿಕೃತವಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಭಾರತದ ಪ್ರಧಾನ ಅರೆಸೇನಾ ಪಡೆಗಳಲ್ಲಿ ಒಂದಾಗಿರುವ ಈ ಬಿಎಸ್​ಎಫ್​ಗೆ ಸೇರಲು ಪ್ರತಿಭಾವಂತ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿದೆ. ಹೀಗಾಗಿ ಆಸಕ್ತರು ಈ ಕೆಲಸಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ಈ ಉದ್ಯೋಗಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ ಇದಕ್ಕೆ ಅವಕಾಶ ಇಲ್ಲ. ಕೇವಲ ಸ್ಪೋರ್ಟ್ಸ್​ನಲ್ಲಿ ಪ್ರಾವೀಣ್ಯತೆ ಹೊಂದಿರುವ ಸ್ಪರ್ಧಿಗಳಿಗೆ ಇದು ಗೋಲ್ಡನ್ ಚಾನ್ಸ್ ಆಗಿದೆ. ಅರ್ಹ ಎನಿಸಿರುವ ಅಭ್ಯರ್ಥಿಗಳು ಬಿಎಸ್​ಎಫ್​ನ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಇನ್ನುಳಿದಂತೆ ಈ ಉದ್ಯೋಗಗಳಿಗೆ ಬೇಕಾದ ಅರ್ಹತೆ, ಶುಲ್ಕ, ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ, ಎಷ್ಟು ಉದ್ಯೋಗಗಳು ಎನ್ನುವ ಎಲ್ಲ ಮಾಹಿತಿ ಇಲ್ಲಿದೆ. ಹೀಗಾಗಿ ಅಭ್ಯರ್ಥಿಗಳು ಇದನ್ನು ಗಮನವಿಟ್ಟು ಓದಿಕೊಳ್ಳಬೇಕು.

ಇದನ್ನು ಓದಿ : ಮೇಷ ರಾಶಿ ವರ್ಷ ಭವಿಷ್ಯ 2025 | ಪ್ರೀತಿ ಪ್ರೇಮ, ಉದ್ಯೋಗ, ವ್ಯಾಪಾರ, ಹಣಕಾಸು, ಶಿಕ್ಷಣ, ಆರೋಗ್ಯ ಹಾಗೂ ಶನಿ ಕಾಟದ ಬಗ್ಗೆ ಸಂಪೂರ್ಣ ವಿವರ, ಹಾಗು ಪರಿಹಾರಗಳು 

ಉದ್ಯೋಗ : ವಿದ್ಯಾರ್ಹತೆ ಏನು ಕೇಳಿದ್ದಾರೆ?

10ನೇ ತರಗತಿ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಇದಕ್ಕೆ ಸಮವಾದ ವಿದ್ಯಾರ್ಹತೆ
ಕಳೆದ ಎರಡು ವರ್ಷಗಳಲ್ಲಿ ಅಂತರಾಷ್ಟ್ರೀಯ ಅಥವಾ ರಾಷ್ಟ್ರೀಯ ಸ್ಪೋರ್ಟ್ಸ್​ ಇವೆಂಟ್​ಗಳಲ್ಲಿ ಅಭ್ಯರ್ಥಿಗಳು ಭಾಗವಹಿಸಿರಬೇಕು ಅಥವಾ ಪದಕಗಳನ್ನು ಗೆದ್ದಿರಬೇಕು.

ಉದ್ಯೋಗದ ಹೆಸರು– ಕಾನ್​ಸ್ಟೆಬಲ್ (ಸಾಮಾನ್ಯ ಕರ್ತವ್ಯ)

ಒಟ್ಟು ಕೆಲಸಗಳು– 275

ವಯಸ್ಸಿನ ಮಿತಿ
18 ರಿಂದ 23

ಇದನ್ನು ಓದಿ : 27 ಕೋಟಿಗೆ ಸೇಲಾದ ರಿಷಬ್​ ಪಂತ್​​ಗೆ ಸರ್ಕಾರದಿಂದ ಬಿಗ್​ ಶಾಕ್​​; ಕೈಗೆ ಸಿಗೋ ಹಣ ಇಷ್ಟೇನಾ?

ವಯೋಮಿತಿ ಸಡಿಲಿಕೆ
ಎಸ್​​ಸಿ ಎಸ್​​ಟಿ- 5 ವರ್ಷಗಳು
ಒಬಿಸಿ ಅಭ್ಯರ್ಥಿಗಳು–3 ವರ್ಷಗಳು

ಅರ್ಜಿ ಶುಲ್ಕ
ಎಸ್​​ಸಿ, ಎಸ್​ಟಿ, ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿತಿ ಇದೆ
ಜನರಲ್, ಒಬಿಸಿ, ಇಡಬ್ಲುಎಸ್ ಅಭ್ಯರ್ಥಿಗಳು- 147 ರೂಪಾಯಿ

ಇಂಪಾರ್ಟೆಂಟ್ ದಿನಾಂಕ
ನೋಟಿಫಿಕೇಶನ್ ರಿಲೀಸ್ ದಿನಾಂಕ- 21 ನವೆಂಬರ್ 2024
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 01 ಡಿಸೆಂಬರ್ 2024
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನ- 31 ಡಿಸೆಂಬರ್ 2024

ಆಯ್ಕೆ ಪ್ರಕ್ರಿಯೆ:

ದಾಖಲೆ ಮತ್ತು ಬಯೋಮೆಟ್ರಿಕ್ ಪರಿಶೀಲನೆ
ದೈಹಿಕ ದಕ್ಷತೆಯ ಪರೀಕ್ಷೆ (ಪಿಇಟಿ)
ವೈದ್ಯಕೀಯ ಪರೀಕ್ಷೆ
ಕ್ರೀಡಾ ಕಾರ್ಯಕ್ಷಮತೆಯ ಮೌಲ್ಯಮಾಪನ
ದಾಖಲೆಗಳ ಪರಿಶೀಲನೆ
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು. ಹೋಮ್​ ಪೇಜ್​ ಓಪನ್ ಆದ ಮೇಲೆ ನೇಮಕಾತಿ ವಿಭಾಗವನ್ನ ಕ್ಲಿಕ್ ಮಾಡಬೇಕು. ಬಳಿಕ ಸ್ವವಿವರ ನಮೂದಿಸಿ ಅಪ್ಲೇ ಲಿಂಕ್ ಅನ್ನು ಕ್ಲಿನ್ ಮಾಡಬೇಕು. ಬೇಕಾದ ಎಲ್ಲ ಮಾಹಿತಿ ಸಂಪೂರ್ಣವಾಗಿ ಭರ್ತಿ ಮಾಡಬೇಕು. ನಂತರ ಸಬ್​ಮೀಟ್ ಮಾಡಬೇಕು. ಪ್ರಿಂಟ್​ಔಟ್ ಅನ್ನು ತೆಗೆದುಕೊಂಡಿರಿ.

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment