ಅಜ್ಮೀರ್ ದರ್ಗಾವೂ ಹಿಂದೂ ದೇವಸ್ಥಾನದ ಮೇಲೆ ಕಟ್ಟಲಾಗಿದೆ -ಕೋರ್ಟ್​ ಕಟಕಟೆಯಲ್ಲಿ ಮತ್ತೊಂದು ವಿವಾದ

WhatsApp Group Join Now
Telegram Group Join Now
Instagram Account Follow Now

ಉತ್ತರ ಪ್ರದೇಶದ ಸಂಭಾಲ್‌ ಜಾಮಾ ಮಸೀದಿ ನಂತರ, ರಾಜಸ್ಥಾನದ ಅಜ್ಮೀರ್‌ ಷರೀಫ್ ದರ್ಗಾ (Ajmer Sharif Dargah) ವಿವಾದ ಮುನ್ನಲೆಗೆ ಬಂದಿದೆ. ಅಜ್ಮೀರ್ ದರ್ಗಾವೂ ಹಿಂದೂ ದೇವಸ್ಥಾನದ ಮೇಲೆ ಕಟ್ಟಲಾಗಿದೆ ಎಂದು ವಾದಿಸಿ ಹಿಂದೂಪರ ವಕೀಲರು ಅಜ್ಮೀರ ಸಿಟಿ ಸಿವಿಲ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನು ಓದಿ : ಜಸ್ಟ್ 10th ಪಾಸ್​ ಆದ ಯುವಕ, ಯುವತಿಯರಿಗೆ ಉದ್ಯೋಗ.. ಆದ್ರೆ ಕಂಡೀಷನ್ಸ್ ಅಪ್ಲೈ..!

ಅಜ್ಮೀರ್ ಷರೀಫ್ ದರ್ಗಾವನ್ನು ಹಿಂದೂ ದೇವಾಲಯ ಎಂದು ವಿವರಿಸಿರುವ ಹಿಂದೂ ಕಡೆಯ ಅರ್ಜಿ ವಿಚಾರಣೆ ನಡೆಸಲು ಕೆಳ ನ್ಯಾಯಾಲಯ ಒಪ್ಪಿಕೊಂಡಿದೆ. ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಪರವಾಗಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಸ್ವೀಕರಿಸಿರುವ ಕೋರ್ಟ್​, ದರ್ಗಾ ಕಮೀಟಿಗೆ ನೋಟಿಸ್ ಜಾರಿ ಮಾಡಿದೆ.

ಇನ್ನು, ಅರ್ಜಿಯ ಜೊತೆಗೆ ಹಿಂದೂಗಳ ಪರ ವಕೀಲರು ಕೋರ್ಟ್​ಗೆ ಕೆಲವು ಸಾಕ್ಷ್ಯವನ್ನು ವಿವರಿಸಿದ್ದಾರೆ. ಜೊತೆಗೆ ದರ್ಗಾದ ಒಳಗಿರುವ ಹಿಂದೂ ದೇವರುಗಳಿಗೆ ಪೂಜೆ ಮಾಡಲು ಅನುಮನತಿ ನೀಡಬೇಕು. ಪುರಾತತ್ವ ಇಲಾಖೆಯಿಂದ ಸಮೀಕ್ಷೆ ಆಗಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನು ಓದಿ : 27 ಕೋಟಿಗೆ ಸೇಲಾದ ರಿಷಬ್​ ಪಂತ್​​ಗೆ ಸರ್ಕಾರದಿಂದ ಬಿಗ್​ ಶಾಕ್​​; ಕೈಗೆ ಸಿಗೋ ಹಣ ಇಷ್ಟೇನಾ?

ಹಿಂದೂಗಳ ಮಾಡಿರುವ ಹಕ್ಕು ಏನು?

ಈ ಹಿಂದೆ ದರ್ಗಾ ಭೂಮಿಯಲ್ಲಿ ಶಿವನ ದೇವಾಲಯವಿತ್ತು
ದೇವಸ್ಥಾನದಲ್ಲಿ ಪೂಜೆ, ಜಲಾಭಿಷೇಕ ನಡೆಯುತ್ತಿತ್ತು
ಅರ್ಜಿಯಲ್ಲಿ ಅಜ್ಮೀರ್ ನಿವಾಸಿ ಹರ್ ವಿಲಾಸ್ ಶಾರದಾ ಅವರು 1911 ರಲ್ಲಿ ಬರೆದ ಪುಸ್ತಕವನ್ನು ಉಲ್ಲೇಖಿಸಿದ್ದಾರೆ
ಪುಸ್ತಕದಲ್ಲಿ ದರ್ಗಾ ಬದಲು ದೇವಸ್ಥಾನದ ಪ್ರಸ್ತಾಪ
ದೇವಾಲಯದ ಅವಶೇಷಗಳ ಭಾಗಗಳನ್ನು ದರ್ಗಾ ಸಂಕೀರ್ಣದಲ್ಲಿ ಇರುವ 75 ಅಡಿ ಉದ್ದದ ಬಾಗಿಲಿನ ನಿರ್ಮಾಣದಲ್ಲಿ ಬಳಸಲಾಗಿದೆ
ನೆಲಮಾಳಿಗೆಯ ಗರ್ಭಗುಡಿಯ ಸಾಕ್ಷಿ ಆಗಿದೆ
ದರ್ಗಾ ಕಮೀಟಿಗೆ ನೋಟಿಸ್ ನೀಡಿ ಜಾರಿ ಮಾಡಿರುವ ಕೋರ್ಟ್ ಡಿಸೆಂಬರ್ 2ಕ್ಕೆ ವಿಚಾರಣೆ ನಡೆಸೋದಾಗಿ ತಿಳಿಸಿದೆ.

WhatsApp Group Join Now
Telegram Group Join Now
Instagram Account Follow Now

Vivek Kudarimath, Journalist With a Work Experience of 8 years in media Field, Working with vivekvarthe since 15-08-2015

Leave a Comment