ಪುಟ್ಟ ಪುಟ್ಟ ಮಕ್ಕಳ ಕೆನ್ನೆ ಮೇಲೆ ಹಾಗೂ ಹಣೆ ಮೇಲೆ ಕಪ್ಪು ಕಾಡಿಗೆಯ ಬೊಟ್ಟು ಇಟ್ಟಿರುವುದನ್ನು ನೋಡಿದ್ದೀರಾ. ಕೈ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ. ಮಕ್ಕಳಷ್ಟೇ ಅಲ್ಲ ದೊಡ್ಡವರು ಕೂಡ ಸಣ್ಣದಾಗಿ ಕೈಗೆ ಇಲ್ಲ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಿರುತ್ತಾರೆ. ಹೀಗೆಲ್ಲ ಮಾಡೋದು ಯಾಕೆ? ಹೀಗೆಲ್ಲ ಮಾಡುವುದು ಚಂದ ಕಾಣಿಸಿಕೊಳ್ಳ ಬೇಕು ಅಂತೂ ಅಲ್ಲ. ಬದಲಾಗಿ ಹೀಗೆ ಕಪ್ಪು ಚುಕ್ಕೆ ಹಚ್ಚಿಕೊಳ್ಳುವು ದಕ್ಕೂ ಹಾಗೂ ಕಪ್ಪು ದಾರವನ್ನು ಕಟ್ಟಿಕೊಳ್ಳುವುದಕ್ಕೂ ಒಂದು ಬಲವಾದ ಕಾರಣ ಇದೆ.
ಅದರಲ್ಲೂ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುವುದು ಇತ್ತೀಚೆಗೆ ಒಂದು ಟ್ರೆಂಡ್ ಆಗಿ ಹೋಗುತ್ತಿದೆ. ಅಸಲಿಗೆ ಹೀಗೆ ಕಪ್ಪು ದಾರ, ಕಪ್ಪು ಚುಕ್ಕೆ ಹಚ್ಚಿಕೊಳ್ಳುವುದಕ್ಕೆ ಅಸಲಿ ಕಾರಣ ಏನು ಎನ್ನುವುದನ್ನು ಈಗ ತಿಳಿಯೋಣ. ಹಾಗೂ ನಾವು ಕೂಡ ಅದನ್ನು ಪಾಲಿಸಬೇಕು, ಆಗ ನೋಡಿ ನಿಮ್ಮ ಜೀವನದಲ್ಲಿ ಹೇಗೆ ಕೆಲವೊಂದು ಬದಲಾವಣೆಗಳು ಆಗುತ್ತಾ ಹೋಗುತ್ತದೆ ಎಂದು ಹಾಗಾದರೆ ಈ ಕಪ್ಪು ಬಣ್ಣದ ಹಿಂದಿನ ರಹಸ್ಯ ಏನು ಎನ್ನುವುದನ್ನು ತಿಳಿಯೋಣ.
ಕಪ್ಪು ಬಣ್ಣ ಎಂದರೆ ಕೆಲವೊಂದಷ್ಟು ಜನರಿಗೆ ಎಷ್ಟು ಇಷ್ಟ ಎಂದರೆ ಯಾವುದೇ ವಸ್ತು ಖರೀದಿಸಿದರು ಯಾವುದೇ ಬಟ್ಟೆ ಖರೀದಿ ಮಾಡಿದರು ಕೂಡ ಮೊದಲು ಅವರಿಗೆ ಕಪ್ಪು ಬಣ್ಣಕ್ಕೆ ಕಣ್ಣು ವಾಲುತ್ತದೆ. ಇನ್ನು ಕೆಲವೊಂದಷ್ಟು ಜನ ಕಪ್ಪು ಬಣ್ಣ ಎಂದರೆ ಬೇಡಪ್ಪ ಬೇಡ ಎಂದು ಹೇಳುತ್ತಾರೆ ಅದು ಒಳ್ಳೆಯದಲ್ಲ ದಾರಿದ್ರ್ಯಕ್ಕೆ ದಾರಿ ಮಾಡಿಕೊಡುತ್ತದೆ ಅಂತೆಲ್ಲ ಹೇಳುತ್ತಿರುತ್ತಾರೆ. ಹಾಗಾಗಿ ಇವರು ಕಪ್ಪು ಬಣ್ಣವನ್ನು ದೂರ ಇಟ್ಟಿರುತ್ತಾರೆ.
ಅವರ ಪ್ರಕಾರ ಕಪ್ಪು ಬಣ್ಣ ನೆಗೆಟಿವ್ ಎನರ್ಜಿಯನ್ನು ಹಿಡಿದಿಟ್ಟುಕೊಳ್ಳು ವಂತಹ ಬಣ್ಣ. ಆದರೆ ಒಮ್ಮೆ ಇತಿಹಾಸ ಅಥವಾ ಹಿಂದೆ ಘಟಿಸಿರು ವಂತಹ ಕೆಲವೊಂದಷ್ಟು ಘಟನೆಗಳನ್ನು ಮೆಲುಕು ಹಾಕಿ ನೋಡಿ. ಕಪ್ಪು ಮಾಟ ಮಂತ್ರ ದಂತಹ ಭಯಾನಕ ಶಕ್ತಿಯಂತೆ ಬಿಂಬಿಸಲಾಗಿದೆ. ಅದಕ್ಕೆ ಈ ಶಕ್ತಿಗಳ ಪ್ರಯೋಗ ರಾತ್ರಿ ಸಮಯದಲ್ಲಿ ಮಾತ್ರ ಮಾಡಲಾಗುತ್ತದೆ. ಈ ವಿಷಯದಲ್ಲಿ ಎಷ್ಟು ಸತ್ಯ ಸತ್ಯತೆ ಇದೆಯೋ ಗೊತ್ತಿಲ್ಲ ಆದರೆ ಒಂದಂತೂ ಸತ್ಯ ಕಪ್ಪು ಅಥವಾ ಕತ್ತಲೆ ಇದು ವಿನಾಶದ ಶಕುನ ಎನ್ನುವ ನಂಬಿಕೆಯೇ ಹೆಚ್ಚಾಗಿದೆ.
ನಮ್ಮ ಹಿಂದೂ ಧರ್ಮದಲ್ಲಿ ಉಲ್ಲೇಖ ಆಗಿರುವ ಅದೆಷ್ಟೋ ವಿಷಯಗಳನ್ನು ನಾವು ಕಡೆಗಣಿಸಿದ್ದೀವಿ. ಆದರೆ ಈಗ ಇದೆ ಕಪ್ಪು ಬಣ್ಣದ ಮಹತ್ವದ ವಿಷಯವನ್ನು ತಿಳಿಯೋಣ ಸಾಮಾನ್ಯವಾಗಿ ಎಲ್ಲರೂ ಕೂಡ ಕಪ್ಪು ಬಣ್ಣ ಎಂದಾ ಕ್ಷಣ ನೆಗೆಟಿವ್ ಎನರ್ಜಿ ಎಂದುಕೊಳ್ಳುವುದೇ ಹೆಚ್ಚು. ಆದರೆ ಇದೇ ಕಪ್ಪು ಬಣ್ಣ ನಮ್ಮನ್ನು ದುಷ್ಟ ಶಕ್ತಿ ಹಾಗೂ ಕೆಟ್ಟ ದೃಷ್ಟಿಯಿಂದ ನಮ್ಮನ್ನು ಶ್ರೀರಕ್ಷೆಯಂತೆ ಸುತ್ತುವರೆದು ಕಾಪಾಡುತ್ತದೆ.
ಇದೇ ಕಾರಣಕ್ಕೆ ಹಿಂದಿನ ಕಾಲದಲ್ಲಿ ಹಿರಿಯರು ಕಿರಿಯರು ಎಲ್ಲರೂ ಕೂಡ ಕಾಲಿಗೆ ಕಪ್ಪು ದಾರ ವನ್ನು ಕಟ್ಟಿಕೊಳ್ಳುತ್ತಿದ್ದರು. ಇಂದಿಗೂ ಕೂಡ ಅನೇಕರು ತಮ್ಮ ಕಾಲಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಇದು ಟ್ರೆಂಡ್ ಅನ್ನೋ ಲೆಕ್ಕಾಚಾರದಲ್ಲಿ ಮಾತ್ರ ಕಟ್ಟಿಕೊಳ್ಳುತ್ತಾರೆ.
ಈ ಸುದ್ದಿ ಓದಿ:- ಗಂಡು ಮಗುವಿಗೆ ಜನ್ಮ ನೀಡಿದ ರೇಣುಕಾಸ್ವಾಮಿ ಪತ್ನಿ
ಅಷ್ಟೇ ವೈದಿಕ ಜ್ಯೋತಿಷ್ಯ ದಲ್ಲಿ ಕಪ್ಪು ಬಣ್ಣವು ಶನಿ ಗ್ರಹವನ್ನು ಸೂಚಿಸುತ್ತದೆ ಅನ್ನೋ ನಂಬಿಕೆ ಕೂಡ ಇದೆ. ಆದ್ದರಿಂದ ಪಾದದ ಸುತ್ತಲೂ ಕಪ್ಪು ದಾರವನ್ನು ಧರಿಸಿದಾಗ ಶನಿದೇವನು ದಾರವನ್ನು ಧರಿಸಿದ ವ್ಯಕ್ತಿಯ ರಕ್ಷಕನಾಗುತ್ತಾನೆ ಅನ್ನೋ ನಂಬಿಕೆ ಕೂಡ ಇದೆ.