ನಿಮ್ಮ ಬಳಿ 10 ರೂ. ನಾಣ್ಯ ಇದ್ಯಾ? ಇಲ್ಲಿದೆ ನೋಡಿ ಗುಡ್​ ನ್ಯೂಸ್​!

WhatsApp Group Join Now
Telegram Group Join Now
Instagram Account Follow Now

ವಿವೇಕವಾರ್ತೆ : ಚಿನ್ನ ಹಾಗೂ ಬೆಳ್ಳಿಯ ಲೇಪನ ಹೊಂದಿರುವಂತೆ ಕಾಣಿಸುವ 10 ರೂಪಾಯಿ ನಾಣ್ಯ (Ten Rupee Coin) ಇಂದು ಅನೇಕರ ಬಳಿಯಿದೆ. ಒಂದು ಕಾಲಘಟ್ಟದಲ್ಲಿ ಇದು ಚಲಾವಣೆಯಲಿಲ್ಲ, ಇದನ್ನು ಯಾರು ಸಹ ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದರು. ಹಣ್ಣು-ತರಕಾರಿ ವ್ಯಾಪಾರಸ್ಥರು, ಬಸ್​ ನಿರ್ವಾಹಕರು ಮತ್ತು ಕಿರಾಣಿ ಅಂಗಡಿಯವರು ಇಂತಹ ನಾಣ್ಯಗಳನ್ನು ಪಡೆದುಕೊಳ್ಳಲು ಸುತಾರಾಮ್ ಒಪ್ಪುತ್ತಿರಲಿಲ್ಲ.

ಅವರಿಂದ ಬರುತ್ತಿದ್ದ ಮಾತು ಮಾತ್ರ ಒಂದೇ, ಈ ಕಾಯಿನ್​​ಗಳು ನಡೆಯುತ್ತಿಲ್ಲ, ನಾವು ಸ್ವೀಕರಿಸಲ್ಲ. ಈ ಕೂಡಲೇ ಬ್ಯಾಂಕ್​ಗಳಿಗೆ ಹೋಗಿ ಆ ನಾಣ್ಯಗಳನ್ನು ಹಿಂತಿರುಗಿಸಿ ಎಂದು ಹೇಳುತ್ತಿದ್ದರು. ಆದ್ರೆ, ಆ ಸಮಯ ಇದೀಗ ಮತ್ತೊಮ್ಮೆ ಮರುಕಳಿಸಿದಂತಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಇದೇ ಸಮಸ್ಯೆ ಮತ್ತೆ ಸದ್ದು ಮಾಡುತ್ತಿದ್ದು, ಅನೇಕರು ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ ಮುದ್ರಿಸಿರುವ ಹೊಸ 10 ರೂ. ನಾಣ್ಯಗಳನ್ನು ಹಾಗೂ ಹಳೆಯ ಕಾಯಿನ್​ಗಳನ್ನು ಬಸ್​ ನಿರ್ವಾಹಕರು ಮತ್ತು ಸಣ್ಣ ವ್ಯಾಪಾರಿಗಳಿಗೆ ಕೊಟ್ಟರೆ, ನಾವು ಸ್ವೀಕರಿಸಲ್ಲ. ಈಗ ಇದರ ಅಸ್ತಿತ್ವವಿಲ್ಲ, ಚಲಾವಣೆಯೂ ಆಗ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ತೀವ್ರ ಕಂಗಾಲಾಗಿರುವ ಕೆಲವರು, ತಮ್ಮ ಸುತ್ತಮುತ್ತಲಿನ ಬ್ಯಾಂಕ್​ಗಳಿಗೆ ಭೇಟಿ ನೀಡಿ, ಇದರ ಚಲಾವಣೆ ಇದೆಯೋ? ಇಲ್ಲವೋ? ಎಂದು ಸಿಬ್ಬಂದಿಗಳ ಬಳಿಯೇ ನೇರವಾಗಿ ಸ್ಪಷ್ಟನೆ ಕೇಳಿರುವುದು ಉಂಟು.

10 ರೂ. ಕಾಯಿನ್​ ಬಗ್ಗೆ RBI ಹೇಳೋದೇನು?

10 ರೂಪಾಯಿ ನಾಣ್ಯಗಳು ರದ್ದಾಗಿದೆ, ಚಲಾವಣೆಯಲಿಲ್ಲ ಎಂಬ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದಿರುವ ಆರ್​ಬಿಐ, ಇದೀಗ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಗ್ರಾಹಕರಿಗೆ ಇಂತಹ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು ಬ್ಯಾಂಕ್​ ಅಧಿಕಾರಿಗಳು ಆಯಾ ವರ್ತಕರಲ್ಲಿ ಜಾಗೃತಿ ತರುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಅದರಲ್ಲೂ ಈ ರೀತಿಯ ಕಿರಿಕಿರಿಗಳು ಪದೇ ಪದೇ ಉಂಟಾಗುವುದನ್ನು ತಡೆಗಟ್ಟಬೇಕೆಂದು ಸ್ವತಃ ಆರ್​ಬಿಐ, ಇತ್ತೀಚೆಗಷ್ಟೇ ಅ.14 ಮತ್ತು 15ರಂದು ಆಯ್ದ ಬ್ಯಾಂಕ್​ಗಳ ಸಮನ್ವಯದಲ್ಲಿ 10 ರೂ. ಕಾಯಿನ್​ಗಳು ಇಂದಿಗೂ ಕಾರ್ಯರೂಪದಲ್ಲಿದೆ ಎಂಬುದನ್ನು ತಿಳಿಹೇಳಲು ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಆರಂಭಿಸಿದೆ.

10 ರೂ. ನಾಣ್ಯ ವಿನಿಮಯ ಮಾಡಿಕೊಳ್ಳಬಹುದು

ಹತ್ತು ರೂ. ನಾಣ್ಯಗಳ ವಿನ್ಯಾಸಗಳು ಆಗಾಗ್ಗೆ ಬದಲಾಗುತ್ತಿರುತ್ತದೆ. ಕಾಲಕ್ಕೆ ತಕ್ಕಂತೆ ಹೊಸ ಡಿಸೈನ್​ನೊಂದಿಗೆ ಮುದ್ರಿತವಾಗಿ, ಚಲಾವಣೆಗೆ ಬರುತ್ತದೆ. ಈ ಕಾಯಿನ್​ಗಳು ಕಾನೂನುಬದ್ಧವಾಗಿದ್ದು, ವಹಿವಾಟುಗಳಿಗೆ ಮುಕ್ತವಾಗಿವೆ. ಇಂತಹ ನಾಣ್ಯಗಳನ್ನು ವ್ಯಾಪಾರಸ್ಥರು ಸ್ವೀಕರಿಸುವಂತದ್ದು. ಸಾರ್ವಜನಿಕರು ತಮ್ಮ ಬಳಿಯಿರುವ ನಾಣ್ಯಗಳನ್ನು ಆರ್​ಬಿಐ ಅಡಿಯಲ್ಲಿರುವ ಎಲ್ಲಾ ಶಾಖೆಗಳಲ್ಲಿಯೂ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದೆ. ಈ ಕುರಿತಂತೆ ಬ್ಯಾಂಕ್​ಗಳಿಗೂ ಆರ್​ಬಿಐ ನಿರ್ದೇಶನ ಕೊಟ್ಟಿದೆ ಎಂಬುದು ಗಮನಾರ್ಹ.

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment