ಬೆಂಗಳೂರಿನ ಲಾಡ್ಜ್‌ ಕೊಠಡಿಯಲ್ಲಿ ತೀರ್ಥಹಳ್ಳಿ ತಹಶೀಲ್ದಾರ್ ಶವಪತ್ತೆ

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಹಶೀಲ್ದಾರ್ ಜಿ.ಬಿ. ಜಕ್ಕನಗೌಡರ್ (54) ಅವರ ಮೃತದೇಹವು ನಗರದ ಲಾಡ್ಜ್‌ವೊಂದರ ಕೊಠಡಿಯಲ್ಲಿ ಪತ್ತೆಯಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ವೈಭವ್ ಲಾಡ್ಜ್‌ನ ಕೊಠಡಿಯಲ್ಲಿ ಬುಧವಾರ ರಾತ್ರಿ ‌ಮೃತದೇಹ ಪತ್ತೆಯಾಗಿದೆ.

ನ್ಯಾಯಾಲಯದ ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು ವೈಭವ್ ಲಾಡ್ಜ್‌ನಲ್ಲಿ ಉಳಿದಿದ್ದರು. ಮಂಗಳವಾರ ಸಂಜೆಯಿಂದಲೂ ಯಾರ ಸಂಪರ್ಕಕ್ಕೂ ಅವರು ಸಿಕ್ಕಿರಲಿಲ್ಲ.

ನಂತರ ಮೊಬೈಲ್ ಲೊಕೇಶನ್ ಪರಿಶೀಲನೆ ನಡೆಸಿದಾಗ ಮೆಜೆಸ್ಟಿಕ್ ಸಮೀಪ ತೋರಿಸುತ್ತಿತ್ತು.‌ ಅದನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ವೈಭವ್ ಲಾಡ್ಜ್ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಠಡಿ ಬಾಗಿಲು ಹಾಕಿತ್ತು. ಪೊಲೀಸರು ಬಾಗಿಲು ತೆರೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ‌ತಿಳಿಸಿದರು.

ಜಕ್ಕನಗೌಡರ್ ಮೂಲತಃ ಗದಗ ಜಿಲ್ಲೆಯವರು. ಕಳೆದೊಂದು ವರ್ಷದಿಂದ ತೀರ್ಥಹಳ್ಳಿ ತಹಶಿಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು.

WhatsApp Group Join Now
Telegram Group Join Now
Instagram Account Follow Now

Vivek Kudarimath, Chief Editor Vivekvarthe, Journalist, Video Editor, Content Writer, CEO Of VPG Digital Private Limited

Leave a Comment