ವಿವೇಕವಾರ್ತೆ : ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಅಚ್ಚರಿದಾಯಕ ಸುದ್ದಿ ಹೊರಬಿದ್ದಿದೆ. ಮೈಸೂರಿನ (Mysuru) ಮುಡಾ ಕಚೇರಿಯಲ್ಲಿ ಇ.ಡಿ ಅಧಿಕಾರಿಗಳ ದಾಳಿ ವೇಳೆ 1992ರ ಪ್ರಮುಖ ದಾಖಲೆಯೇ (Documents) ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ನಿಮ್ಮ ಬಳಿ 10 ರೂ. ನಾಣ್ಯ ಇದ್ಯಾ? ಇಲ್ಲಿದೆ ನೋಡಿ ಗುಡ್ ನ್ಯೂಸ್!
CM ಸಿದ್ದರಾಮಯ್ಯ ವಿರುದ್ಧದ ಮುಡಾ ಬಹುಕೋಟಿ ಹಗರಣ ಪ್ರಕರಣದಲ್ಲಿ ಶುಕ್ರವಾರ ಮುಡಾ ಕಚೇರಿ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಕಾದು ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಅಚ್ಚರಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ : ಖ್ಯಾತ ನಟಿಯ ಮೇಲೆ ಸಾಮೂಹಿಕ ಅ*ತ್ಯಾಚಾರ.. ನಿರ್ದೇಶಕರಿಂದ ಶಾಕಿಂಗ್ ಸಂಗತಿ ರಿವೀಲ್
ಡಿನೋಟಿಫೈ (DE notify) ಮಾಡಿ ನೋಟಿಫೈ ಮಾಡಲು ತೆಗೆದುಕೊಂಡ ನಿರ್ಧಾರದ ದಾಖಲೆಗಳೇ (Documents) ನಾಪತ್ತೆಯಾಗಿವೆ. 1992 ರ ಫೆಬ್ರವರಿ ತಿಂಗಳಿನ ಕೆಲ ದಾಖಲೆಗಳು ಮಿಸ್ಸಿಂಗ್ ಆಗಿವೆ. ಅದೇ ಸಂದರ್ಭದಲ್ಲಿ ಡಿನೋಟಿಫೈ ಆಗಿದ್ದ ಭೂಮಿಯ ಪರಭಾರೆಯಾಗಿತ್ತು.
ಇದನ್ನೂ ಓದಿ : ಹಿಂದೂ ಧರ್ಮದ ಒಂದು ಸಮಾಜದ ಹೆಣ್ಣುಮಕ್ಕಳನ್ನು ವೇಶ್ಯೆಯರು ಎಂದ ಸರ್ಕಾರಿ ಅಧಿಕಾರಿ: ಆಕ್ರೋಶ
ಮುಡಾದ ತೆಕ್ಕೆಯಲ್ಲಿದ್ದ ಜಮೀನು ಮತ್ತೆ ಕೃಷಿ ಭೂಮಿ ಅಂತಾ ಮಾಡಲು ತೆಗೆದುಕೊಂಡ ಕ್ರಮ, ತಹಶೀಲ್ದಾರ್ ಮತ್ತು ಆಗಿನ ಜಿಲ್ಲಾಧಿಕಾರಿಗಳು (DC) ಮಾಡಿದ ಶಿಫಾರಸ್ಸಿನ ಪತ್ರಗಳು, ಈ ದಾಖಲೆಯ ಪ್ರಮುಖ ಶಿಫಾರಸಿನ ಪತ್ರಗಳು, ಕೃಷಿ ಭೂಮಿ (agriculture land ) ಮಾಡಲು ತೆಗೆದುಕೊಂಡ ತೀರ್ಮಾನ ನಡಾವಳಿಯ ಪತ್ರಗಳು ನಾಪತ್ತೆಯಾಗಿವೆ.
ಈ ಪ್ರಮುಖ ದಾಖಲೆಗಳನ್ನೇ ವಶಕ್ಕೆ ಪಡೆಯಲು ಇಡಿ ಸಂಪೂರ್ಣ ಪ್ರಯತ್ನ ಮಾಡುತ್ತಿದೆ. 16 ಗಂಟೆಗಳ ನಿರಂತರ ದಾಳಿಯಲ್ಲಿ ಪ್ರಮುಖ ದಾಖಲೆಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.