ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಇವುಗಳ ಪೈಕಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗಿದೆಯಾದರೂ ಕೃಷಿಗೆ ಹೊಂದಿಕೊಂಡಂತಿರುವ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಪಶುಪಾಲನೆ, ಕುರಿ ಕೋಳಿ ಸಾಕಾಣಿಕೆ ಇತ್ಯಾದಿಗಳಿಗೂ ಕೂಡ ವಿಶೇಷ ಯೋಜನೆಗಳ ಮೂಲಕ ಅನುಕೂಲತೆ ಮಾಡಿಕೊಡಲಾಗುತ್ತಿದೆ.
ನಮ್ಮ ದೇಶದಲ್ಲಿ ಕೃಷಿ ಭೂಮಿ ರಹಿತ ರೈತರು ಕೂಡ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಹೈನುಗಾರಿಕೆ ನಂಬಿ ಬದುಕುತ್ತಿದ್ದಾರೆ. ರೈತರಿಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದ ನರೇಗಾ ಯೋಜನೆಯಡಿ ಸರ್ಕಾರವು ರೂ. 2 ಲಕ್ಷದವರೆಗೆ ಪಶುಗಳಿಗೆ ಶೆಡ್ ನಿರ್ಮಿಸಿಕೊಳ್ಳಲು ಸಹಾಯಧನ ನೀಡುತ್ತಿದೆ.
ಇದನ್ನು ಪಡೆದುಕೊಳ್ಳಲು ಯಾರು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು ಏನು? ಪಶು ಶೆಡ್ ನಿರ್ಮಾಣದಿಂದ ಏನೆಲ್ಲಾ ಅನುಕೂಲ ಇದೆ ಇತ್ಯಾದಿ ವಿವರಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿ ಹೆಚ್ಚಿನ ರೈತರೊಡನೆ ಶೇರ್ ಮಾಡಿ.
ಯೋಜನೆ ಹೆಸರು:- ನೆರೇಗಾ ಯೋಜನೆಯಡಿ ಪಶು ಶೆಡ್ ನಿರ್ಮಾಣ(MNREGA)
ಉದ್ದೇಶ:-
* ರೈತರು ಸಾಕುವ ಜಾನುವಾರುಗಳಿಗೆ ಸುರಕ್ಷಿತ ಮತ್ತು ಆರಾಮದಾಯಕವಾದ ಆಶ್ರಯ ಒದಗಿಸಿ,
ಜಾನುವಾರುಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುವುದು.
* ಇದರಿಂದ ರೈತನಿಗೆ ಹಾಲಿನ ಇಳುವರಿ ಹೆಚ್ಚಾಗಿ ಹಾಲು ಮತ್ತು ಡೈರಿ ಉತ್ಪನ್ನಗಳ ಮೂಲದಿಂದ ಆದಾಯ ಹೆಚ್ಚಾಗುತ್ತದೆ ಮತ್ತು ಹಳ್ಳಿಗಾಡಿನಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯವಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
* ರೈತರು ತಮ್ಮ ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿಯೇ ಈ ಯೋಜನೆಯಡಿ ಸಹಾಯ ಪಡೆಯಲು ಅರ್ಜಿ ಸಲ್ಲಿಸಬೇಕು.
* ಅರ್ಜಿ ಸಲ್ಲಿಸುವಾಗ ತಪ್ಪದೆ ಕೇಳಲಾಗಿರುವುದು ಎಲ್ಲಾ ಅಗತ್ಯ ದಾಖಲೆಗಳನ್ನು ಜೊತೆಗೆ ಸಲ್ಲಿಸಬೇಕು.
* ಅರ್ಜಿಗಳನ್ನು ಪರಿಶೀಲಿಸಿದ ನಂತರ ಅರ್ಹ ಅರ್ಜಿದಾರರ ಪಟ್ಟಿ ತಯಾರಿಸಿ ಆಯ್ಕೆ ಮಾಡಿ DBT ಮೂಲಕ ಸಹಾಯಧನವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಜಾತಿ ಪ್ರಮಾಣ ಪತ್ರ
* ಭೂಮಿಯ ದಾಖಲೆಗಳು
* ತಮ್ಮ ಬಳಿ ಇರುವ ಪಶುಗಳ ಜನಸಂಖ್ಯೆ ಮತ್ತು ಪಶು ವೈದ್ಯರಿಂದ ಪಶುಗಳ ಬಗ್ಗೆ ಪಡೆದ ಸರ್ಟಿಫಿಕೇಟ್
* ವಿಳಾಸ ಪುರಾವೆ
* mgnrega ಜಾಬ್ ಕಾರ್ಡ್
* ಪಾಸ್ಪೋರ್ಟ್ ಅಳತೆಯ ಭಾವಚಿತ್ರ
* ಬ್ಯಾಂಕ್ ಖಾತೆ ವಿವರಗಳು
* ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
* ಇನ್ನಿತರ ಪ್ರಮುಖ ದಾಖಲೆಗಳು
ಸಿಗುವ ಸಹಾಯಧನ:-
* ಪಶು ಶೆಡ್ ನಿರ್ಮಾಣಕ್ಕೆ ಒಟ್ಟು ರೂ.2 ಲಕ್ಷ ಸಹಾಯಧನ ನೀಡಲಾಗುವುದು.
* ಕಾರ್ಮಿಕರ ವೆಚ್ಚ, ವಸ್ತುಗಳ ಖರೀದಿ ಮತ್ತು ಶೆಡ್ ನಿರ್ಮಾಣಕ್ಕೆ ಸಂಬಂಧಿಸಿದ ಇತರ ಖರ್ಚುಗಳಿಗೆ ಈ ಹಣ ವಿನಿಯೋಗಿಸಿಕೊಳ್ಳಬಹುದು
ಅನುಮೋದನೆ ಪ್ರಕ್ರಿಯೆ:-
* ಪಂಚಾಯಿತಿಯಲ್ಲಿ ಫಲಾನುಭವಿಯು ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪರಿಶೀಲನೆ ನಡೆಯುತ್ತದೆ
* ಅಧಿಕಾರಿಗಳಿಂದ ಅನುಮೋದನೆಯಾದರೆ ರೈತರ ಬ್ಯಾಂಕ್ ಖಾತೆಗೆ ಮೊದಲ ಹಂತದಲ್ಲಿ ಸ್ವಲ್ಪ ಹಣವು DBT ಮೂಲಕ ಹಣ ತಲುಪುತ್ತದೆ.
* ರೈತರು MNREGA ಕಾರ್ಮಿಕರನ್ನು ಬಳಸಿಕೊಂಡು ಪಶು ಶೆಡ್ ಅನ್ನು ನಿರ್ಮಿಸಬೇಕು.
* ನಿರ್ಮಾಣವು ಪೂರ್ಣಗೊಂಡ ನಂತರ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ.
* ಆದರೆ ಪಶು ಶೆಡ್ ನಿರ್ಮಾಣಕ್ಕೆ MNREGA ಅಡಿಯಲ್ಲಿ ನಿರ್ಧರಿಸಲಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.
* ಶೆಡ್ ನಿರ್ಮಾಣಕ್ಕೆ ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಬೇಕು.
* ಶೆಡ್ ಸ್ವಚ್ಛ ಮತ್ತು ಗಾಳಿ ಚೆನ್ನಾಗಿ ಬೀಸುವಂತೆ ನಿರ್ಮಿಸಬೇಕು.
* ಪ್ರತಿ ಪ್ರಾಣಿಗೆ ಸಾಕಷ್ಟು ಜಾಗವಿರಬೇಕು.
* ಇದು ಪೂರ್ತಿಗೊಂಡ ಬಳಿಕ ಪೂರ್ತಿ ಹಣವನ್ನು ಜಮೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿ ಕಛೇರಿ ಅಥವಾ ಕೃಷಿ ಇಲಾಖೆ ಕಛೇರಿಯಲ್ಲಿ ಹೆಚ್ಚಿನ ಮಾಹಿತಿ ಪಡೆಯಿರಿ
* ವೆಬ್ಸೈಟ್ ವಿಳಾಸ:-
https://raitamitra.karnataka.gov.in/english https://nrega.nic.in/