ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರಿಗೆ ಅಪಘಾತವಾಗಿದೆ. ಕಿತ್ತೂರು ತಾಲೂಕಿನ ಅಂಬರಗಟ್ಟಿ ಬಳಿ ಅಪಘಾತ ಸಂಭವಿಸಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತವರ ಸಹೋದರ ಚನ್ನರಾಜ್ ಹಟ್ಟಿಹೊಳಿ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇವರ ಕಾರು ಅಂಬಡಗಟ್ಟಿ ಬಳಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು, ಆಸ್ಪತ್ರೆಗೆ ಬೆಳಗಾವಿ ಎಸ್.ಪಿ ಆಗಮಿಸಿದ್ದು, ಹೆಬ್ಬಾಳ್ಕರ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಇನ್ನೂ ಅಪಘಾತದ ಸುದ್ದಿ ತಿಳಿದು ಲಕ್ಷ್ಮೀ ಹೆಬ್ಬಾಳ್ಕರ್ ತಾಯಿ ಕೂಡ ಆಸ್ಪತ್ರೆಗೆ ಆಗಮಿಸಿ ಆರೋಗ್ಯ ವಿಚಾರಿಸಿದ್ದಾರೆ. ಇಷ್ಟೇ ಅಲ್ಲ ಸಿಎಂ ಸಿದ್ದರಾಮಯ್ಯ ಕೂಡ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆನ್ನಿಗೆ ಬಲವಾದ ಪೆಟ್ಟಾಗಿದೆ. ಇವರ ಬೆನ್ನಿನ ಎಲ್1 ಮತ್ತು ಎಲ್4 ಫ್ರಾಕ್ಚರ್ ಆಗಿರುವುದು ಧೃಡವಾಗಿದೆ. ಪೇನ್ ಕಿಲ್ಲರ್ ಕೊಟ್ಟ ಟ್ರೀಟ್ಮೆಂಟ್ ಮುಂದುವರಿಸಿದ್ದೇವೆ. ಈಗ ಸುಧಾರಿಸಿದ್ದು, ಇನ್ನೂ 2 ದಿನ ಚಿಕಿತ್ಸೆ ನೀಡಿ ಡಿಶ್ಚಾರ್ಜ್ ಮಾಡುತ್ತೇವೆ. ಹೆಬ್ಬಾಳ್ಕರ್ ಅವರು ಕನಿಷ್ಠ 1 ತಿಂಗಳು ಬೆಡ್ ರೆಸ್ಟ್ ಮಾಡಬೇಕು ಎಂದರು ಡಾ. ರವಿ ಪಾಟೀಲ.