ಮಹಿಳೆಯರ ಸ್ವಾವಲಂಬನೆ ಹಾಗೂ ಅವರ ಸಾಮರ್ಥ್ಯವನ್ನು ನಿರೂಪಿ ಸಲು ಒತ್ತು ನೀಡುವ ಸಲುವಾಗಿ ಸರ್ಕಾರವು ಸಾಕಷ್ಟು ಯೋಜನೆಗ ಳನ್ನು ರೂಪಿಸುತ್ತಿದೆ. ಹೆಣ್ಣು ಮಕ್ಕಳ ಸ್ವಾವಲಂಬನೆಗೆ ಒತ್ತು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದ್ದು ಆ ಹಲವು ಯೋಜನೆ ಗಳಲ್ಲಿಯೇ ಕೆಲವು ಪ್ರಮುಖವಾದ ಯೋಜನೆಯಾದ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಇದೀಗ ಮಹಿಳೆಯರು ಸುಲಭವಾಗಿ ಮೂರು ಲಕ್ಷದವರೆಗೆ ಹಣವನ್ನು ಸಹಾಯಧನವನ್ನು ಪಡೆಯಬಹುದು.
ಈ ಮೂರು ಲಕ್ಷ ರೂಪಾಯಿಯಲ್ಲಿ ಶೇಕಡ 50ರಷ್ಟು ಹಣ ಸಬ್ಸಿಡಿ ಆಗಿರು ತ್ತದೆ. ಹೌದು, ಈ ಒಂದು ಯೋಜನೆ ಬಹಳ ಮುಖ್ಯವಾದಂತಹ ಉದ್ದೇಶ ಏನು ಎಂದರೆ ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವುದು ಅಷ್ಟೇ ಅಲ್ಲದೆ ಸ್ವಂತ ಉದ್ಯಮಕ್ಕೆ ಬೆಂಬಲ ನೀಡುವುದು ಮುಖ್ಯ ಉದ್ದೇಶವಾಗಿದೆ.
ಅಂದರೆ ಮಹಿಳೆಯರು ಮನೆಯಲ್ಲಿ ಇರುವಂತಹ ಬೇರೆ ಯಾರಿಗೂ ಕೂಡ ಸ್ವಾವಲಂಬಿಯಾಗಿರದೆ ತಾನು ಮಾಡುವಂತಹ ಕೆಲಸದಲ್ಲಿಯೇ ಇಂತಿಷ್ಟು ಪ್ರಮಾಣದ ಹಣವನ್ನು ಅವಳೇ ಸಂಪಾದನೆ ಮಾಡಿ ಅವಳ ಖರ್ಚಿಗಾದರು ಸಹ ಅವಳ ಹಣವನ್ನು ಸಂಪಾದನೆ ಮಾಡಬೇಕು ಎನ್ನುವುದು ಇದರ ಮೂಲ ಉದ್ದೇಶ.
ಬಹಳ ಹಿಂದಿನ ದಿನದಲ್ಲಿ ಇಂತಹ ಯಾವುದೇ ರೀತಿಯಾದಂತಹ ಕಾನೂನಿನಿಂದ ಸಹಾಯವಾಗುವಂತಹ ಯೋಜನೆಗಳು ಇರಲಿಲ್ಲ. ಬದಲಿಗೆ ಗಂಡು ಮಕ್ಕಳು ಹಣವನ್ನು ಸಂಪಾದನೆ ಮಾಡುತ್ತಿದ್ದರು ಮನೆಯಲ್ಲಿರುವಂತಹ ಹೆಣ್ಣು ಮಕ್ಕಳು ಮನೆಯ ಕೆಲಸಗಳನ್ನು ಮಾಡಿಕೊಂಡು ಮನೆಯನ್ನು ನಡೆಸಿಕೊಂಡು ಹೋಗುವುದು ಅವರ ಕೆಲಸವಾಗಿತ್ತು.
ಆದರೆ ಇತ್ತೀಚಿನ ದಿನದಲ್ಲಿ ಮನೆಯಲ್ಲಿರುವಂತಹ ಮಹಿಳೆಯರು ಕೂಡ ಸ್ವಾವಲಂಬಿಯಾಗಿ ಬದುಕಬೇಕು ಅವರು ಕೂಡ ತಮ್ಮ ಕೈಲಾದಷ್ಟು ತಮಗೆ ತಿಳಿದಿರುವಂತಹ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಹಣವನ್ನು ಸಂಪಾದನೆ ಮಾಡಿರುವಂತಹ ಕಾಲ ಇದಾಗಿದ್ದು ಈ ಒಂದು ಸಂದರ್ಭದಲ್ಲಿ ಮಹಿಳೆಯರು ಕೂಡ ಕೆಲವೊಂದು ಕೆಲಸ ಕಾರ್ಯಗ ಳನ್ನು ಮನೆಯಲ್ಲಿಯೇ ಕುಳಿತು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಬೇಕು ಎನ್ನುವುದು ಈ ಒಂದು ಯೋಜನೆಯ ಉದ್ದೇಶವಾಗಿದೆ.
ಈ ಒಂದು ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಜಾರಿಗೆ ಮಾಡಲಾಗಿದ್ದು 2024 ಹಾಗೂ 25ನೇ ವಾರ್ಷಿಕ ಯೋಜನೆಯ ಅಡಿಯಲ್ಲಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರು ಹಾಗೂ ಹಿಂದುಳಿದ ವರ್ಗಕ್ಕೆ ಸೇರುವಂತಹ ಮಹಿಳೆಯರು ಓಬಿಸಿ ವರ್ಗದವರು ಹಾಗೂ ಸಾಮಾನ್ಯ ವರ್ಗದವರು ಹಾಗೂ ಅಲ್ಪಸಂಖ್ಯಾತರು ಹೀಗೆ ಪ್ರತಿಯೊಬ್ಬ ಮಹಿಳೆಯು ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಇನ್ನು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಮಹಿಳೆ ಯ ಆದಾಯದ ಮಿತಿಯು 2 ಲಕ್ಷ ರೂಪಾಯಿಯ ಒಳಗಡೆ ಇರಬೇಕು.
ಯಾರೆಲ್ಲ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಯಾವುದೆಲ್ಲ ದಾಖಲಾತಿ ಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
* ನೀವು ಯಾವ ಒಂದು ವ್ಯಾಪಾರ ಅಥವಾ ಉದ್ಯಮವನ್ನು ಪ್ರಾರಂಭ ಮಾಡುತ್ತಿರೋ ಅದರ ಒಂದು ಕೊಟೇಶನ್ ಪ್ರಮಾಣ ಪತ್ರ ಬೇಕು.
* 18 ವರ್ಷದಿಂದ 55 ವರ್ಷದ ಒಳಗಿನ ಮಹಿಳೆಯರು ಇದಕ್ಕೆ ಅರ್ಜಿ ಯನ್ನು ಸಲ್ಲಿಸಬಹುದು.
ಇನ್ನು ಈ ಒಂದು ಯೋಜನೆಯಲ್ಲಿ ಯಾವ ಯಾವ ಒಂದು ವ್ಯಾಪಾರ ವ್ಯವಹಾರ ಮಾಡುವಂತಹ ಮಹಿಳೆಯರಿಗೆ ಇಲ್ಲಿ ಹಣಕಾಸಿನ ಸೌಲಭ್ಯ ಸಿಗುತ್ತದೆ ಎಂದು ನೋಡುವುದಾದರೆ.
* ನರ್ಸರಿ ತೆರೆಯಲು
* ಮಸಾಲೆ ಪದಾರ್ಥ ಮಾಡಲು
* ಬೆಡ್ ಶೀಟ್ ಹಾಗು ಹೊದಿಕೆಯನ್ನು ತಯಾರಿಸಲು
* ಪಡಿತರ ಅಂಗಡಿ ತೆರೆಯಲು ಇನ್ನೂ ಹಲವಾರು ಕೆಲಸ ಕಾರ್ಯಗಳಿಗೆ ಇಲ್ಲಿ ಇವರು ಹಣವನ್ನು ಪಡೆಯಬಹುದು.