spot_img
spot_img
spot_img
spot_img
spot_img

ನಿನ್ನ ಬೆತ್ತಲೆ ಫೋಟೋ ಲೀಕ್ ಮಾಡ್ತೀನಿ : 65 ಲಕ್ಷ ಪೀಕಿದ ಖದೀಮ

Published on

spot_img

ಬೆಂಗಳೂರು: ಸಾಫ್ಟ್‌ವೇರ್‌ ಎಂಜಿನಿಯರೊಬ್ಬರ (Software Engineering) ಬೆತ್ತಲೆ ಫೋಟೋ ಲೀಕ್ ಮಾಡುವ ಬೆದರಿಕೆ ಹಾಕಿ ಸ್ನೇಹಿತನಿಂದಲೇ ಬರೋಬ್ಬರಿ 65 ಲಕ್ಷ ರೂ. ಹಣ ಪೀಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಂಪನಿಯಲ್ಲಿ (Private Company) ಶಿವಮೊಗ್ಗ ಮೂಲದ ಯುವಕ ಸಾಫ್ಟ್‌ವೇರ್‌ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ 18 ವರ್ಷಗಳಿಂದ ಟೆಕ್ಕಿಗೆ ಸ್ನೇಹಿತನಾಗಿದ್ದ ಆರೋಪಿ ಅಕ್ಷಯ್‌ಕುಮಾರ್, ಒಂದು ವರ್ಷದ ಹಿಂದೆ ಟೆಕ್ಕಿ ಬಳಿ ಬಂದು, ನಿನ್ನ ಖಾಸಗಿ ವಿಡಿಯೋ ಮತ್ತು ಫೋಟೋ ವ್ಯಕ್ತಿಯೊಬ್ಬರಿಗೆ ಸಿಕ್ಕಿವೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕದೇ ಇರೋಕೆ ಹನ್ನೆರಡು ಲಕ್ಷ ಹಣ ಕೇಳ್ತಿದ್ದಾನೆ ಅಂದಿದ್ದ.

ಆ ಮಾತನ್ನು ನಂಬಿದ್ದ ಟೆಕ್ಕಿ ಭಯಗೊಂಡು 12 ಲಕ್ಷ ಹಣ ಕೊಟ್ಟಿದ್ದ. ಇದಾದ ನಂತರವೂ ಕಳೆದ ಒಂದು ವರ್ಷದಿಂದ ಇದೇ ಫೋಟೋ, ವಿಡಿಯೋ ವಿಚಾರ ಸಂಬಂಧ ಪದೇ ಪದೇ ಹಣ ಪಡೆದುಕೊಂಡು, ಒಟ್ಟು 65 ಲಕ್ಷ ರೂ. ಪೀಕಿದ್ದಾನೆ.


ಕೊನೆಗೆ ಎಂಜಿನಿಯರಿಂಗ್ ಸ್ನೇಹಿತ ಅಕ್ಷಯ್ ಕುಮಾರ್ ಮೇಲೆ ಅನುಮಾನಗೊಂಡು ಪೊಲೀಸ್ ಠಾಣೆಗೆ (VidhanaSoudha Police Station) ದೂರು ನೀಡಿದ್ದಾನೆ. ವಿಚಾರಣೆ ನಡೆಸಿದ ವೇಳೆ ಸ್ನೇಹಿತನಾದ ಅಕ್ಷಯ್ ಕುಮಾರ್ ಮತ್ತು ಭರತ್ ಅನ್ನುವವರೇ ಪ್ಲ್ಯಾನ್‌ ಮಾಡಿ ಮಾಡಿ ಈ ರೀತಿ ಹಣ ವಸೂಲಿ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಸದ್ಯ ಇಬ್ಬರನ್ನ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕೃಪೆ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್

ವಿವೇಕವಾರ್ತೆ : ನಮ್ಮ ದೇಶದಲ್ಲಿ ಆಸ್ತಿಯ ವಿಚಾರಕ್ಕೆ ಬಂದರೆ ಅಲ್ಲಿ ಭಿನ್ನ ಭಿನ್ನವಾದ ವಿಭಾಗಗಳು ಇರುತ್ತವೆ ಹಾಗೂ ಸಾಕಷ್ಟು...

ಅಪ್ಪಿಕೊಳ್ಳೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್ – ಇಲ್ಲಿದೆ ಮಾಹಿತಿ!

ಪ್ರೀತಿ, ಸ್ನೇಹ, ಭರವಸೆ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ದೇಹ ಭಾಷೆಯೇ ಅಪ್ಪುಗೆ. ಬನ್ನಿ ಇಂದು ಅಪ್ಪುಗೆಯ ಆರೋಗ್ಯ ಪ್ರಯೋಜನಗಳೇನು ಎಂದು...

ಬೆಡ್ ರೂಂನಲ್ಲಿ ಅತ್ತಿಗೆಯ ಪ್ರಿಯಕರನನ್ನ ಹೊಡೆದು ಕೊಂದ ಮೈದುನ!

ವಿವೇಕವಾರ್ತೆ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ...

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...
error: Content is protected !!