ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಬಾಡಿಗೆ ”ಗರ್ಲ್ ಫ್ರೆಂಡ್” ಅಥವಾ ಬಾಡಿಗೆ ಬಾಯ್ ಫ್ರೆಂಡ್ ಸಂಸ್ಕೃತಿ ಇದೀಗ ರಾಜ್ಯಕ್ಕೂ ಕಾಲಿಟ್ಟಿದ್ದು, ಕೇವಲ 389/- ಕೊಟ್ರೆ ಸಾಕು ಒಂದು ದಿನದ ಪ್ರಿಯತಮ ಸಿಗ್ತಾನಂತೆ! ಹೀಗೆಂದು ಇದೀಗ ಜಯನಗರ ಭಾಗದಲ್ಲಿ ಪೋಸ್ಟರ್ ವೈರಲ್ ಆಗಿದೆ.
ಗೋಡೆಗೆ ಈ ರೀತಿಯಾಗ ಪೋಸ್ಟರ್ ಅಂಟಿಸಿರುವ ಕೆಲ ಕಿಡಿಗೇಡಿಗಳು, ಬಾಯ್ ಫ್ರೆಂಡ್ ಸಿಗ್ತಾನೆ ಸ್ಕ್ಯಾನ್ ಮಾಡಿ ಎಂದು ಪೋಸ್ಟರ್ ಅಂಟಿಸಿದ್ದಾರೆ. “RENT A BOY FRIEND ONLY 389/ SCAN ME” ಹೀಗೆಂದು ಪೋಸ್ಟರ್ ಅಂಟಿಸಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಈ ರೀತಿಯ ಪೋಸ್ಟರ್ಗಳು ಕಂಡು ಬಂದಿದ್ದು.
ಜಯನಗರ, ಬನಶಂಕರಿ, ಬಿಡಿಎ ಕಾಂಪ್ಲೇಕ್ಸ್ಗಳ ಬಳಿ ‘ವ್ಯಾಲೆಂಟೆನ್ಸ್ ಡೇಗೆ ಹುಡುಗ ಬೇಕಾದ್ರೆ ಕೇವಲ ರೂ 389/- ಕೊಟ್ರೆ ಸಾಕು ಒಂದು ದಿನದ ಬಾಯ್ ಫ್ರೆಂಡ್ ಸಿಗಲಿದ್ದಾನೆ ಎಂದು ಬರೆದಿರುವ ಪೋಸ್ಟರ್ಗಳು ಕಂಡು ಬಂದಿವೆ. ಈ ವಿಚಿತ್ರ ಪೋಸ್ಟರ್ಗಳನ್ನು ಕಂಡು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.