ಇಂದು ದೇಶದ 79ನೇ ಸ್ವಾತಂತ್ರೋತ್ಸವವನ್ನು ಭಾರತದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ವಿಮೋಚನೆ ಪಡೆಯಲು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತೆತ್ತ, ಬಲಿದಾನ ಮಾಡಿದ ಎಲ್ಲಾ ವೀರರನ್ನು ನೆನೆದು, ಅವರಿಗೆ ನಮನ ಸಲ್ಲಿಸಲು ಪ್ರತಿ ವರ್ಷ ಕೂಡ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗಿದೆ.
1857ರಿಂದ ಅಧಿಕೃತ ಆರಂಭವಾಗಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು 90 ವರ್ಷಗಳ ನಿರಂತರ ಹೋರಾಟದ ಫಲವೇ 1947ರ ಆಗಸ್ಟ್ 15ರಂದು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತು. ಆ ಮೂಲಕ 200 ವರ್ಷಗಳ ಬ್ರಿಟಿಷರ ಆಡಳಿತ ಅಂತ್ಯವಾಯಿತು. ಸ್ವಾತಂತ್ರ್ಯಕ್ಕಾಗಿ 1857 ರಿಂದ 1947 ರವರೆಗೂ ನಿರಂತರ ಹೋರಾಟ ಮಾಡಲಾಗಿದೆ. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಅವಿರತ ಸಾಧನೆಯನ್ನು ಇಂದು ನಾವು ಸ್ಮರಿಸಲಾಗುತ್ತದೆ.
ಅಸಂಖ್ಯಾತ ಹೋರಾಟಗಾರರ ತ್ಯಾಗ ಬಲಿದಾನಗಳ ಫಲವಾಗಿ ಇಂದು ನಾವು ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವ ಆ ಮಹಾನ್ ಹೋರಾಟಗಾರರಿಗೆ ನೀಡುವ ಬಹುದೊಡ್ಡ ಗೌರವ.
ಇಂದು 12ನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. 1947ರಿಂದ ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಈಗಿನ ಮೋದಿವರೆಗೂ ಎಲ್ಲ ಪ್ರಧಾನಿಗಳೂ ಕೆಂಪುಕೋಟೆಯಲ್ಲಿಯೇ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಪರಂಪರೆ ಹೀಗೆಯೇ ಮುಂದುವರಿಯಲಿದೆ. ಹಾಗಿದ್ದರೆ ಕೆಂಪುಕೋಟೆಯಲ್ಲಿಯೇ ಏಕೆ ಧ್ವಜಾರೋಹಣ ಮಾಡುವುದು. ಅದಕ್ಕೂ ಭಾರತಕ್ಕೂ ಇರುವ ನಂಟೇನು ಅನ್ನೋದರ ವಿಚಾರದ ಬಗ್ಗೆ ತಿಳಿದುಕೊಳ್ಳೋಣ!
ಇಂದು ನಿಮ್ಮ ಜೀವನದಲ್ಲಿ ಏನಿದೆ? ರಾಶಿಫಲ ನೋಡಿ
1206 ರಿಂದ 1506ರವರೆಗೆ ಸುಲ್ತಾನದರ ಕಾಲದಲ್ಲಿ ದೆಹಲಿ ಪ್ರಮುಖ ರಾಜಧಾನಿಯಾಗಿ ಗುರುತಿಸಿಕೊಂಡಿತು.
16ನೇ ಶತಮಾನದಲ್ಲಿ ಅಂದಿನ ಮೊಘಲ ರಾಜ ಶಹಾಜಹಾನ್ ದೆಹಲಿಯಲ್ಲಿ ಈ ಕೆಂಪುಕೋಟೆಯನ್ನು ನಿರ್ಮಿಸಿದ (1638)
18ನೇ ಶತಮಾನದಲ್ಲಿ ಮೊಘಲರ ಆಳ್ವಿಕೆಯ ಅಂತ್ಯ ಶುರುವಾಗುತ್ತದೆ
1857ರಲ್ಲಿ ಕೆಲವು ಬಂಡಾಯಗಾರರು ದೆಹಲಿಯತ್ತ ತೆರಳಿ ಅಂದಿನ ವೃದ್ಧ ಬಾಹದ್ದೂರ್ ಶಾಹ್ ಜಫರ್ನನ್ನು ತಮ್ಮ ನಾಯಕನೆಂದು ಘೋಷಣೆ ಮಾಡುತ್ತಾರೆ.
1857ರಲ್ಲಿ ಬ್ರಿಟಿಷರು ಕೆಂಪುಕೋಟೆಯನ್ನು ವಶಪಡಿಸಿಕೊಳ್ಳುವ ಮೂಲಕ ಮೊಘಲರ ಅಧಿಪತ್ಯವನ್ನು ಅಂತ್ಯಗೊಳಿಸುತ್ತಾರೆ.
1911ರಲ್ಲಿ ಬ್ರಿಟಿಷರು ಕೊಲ್ಕತ್ತಾ ಬಿಟ್ಟು ದೆಹಲಿಯನ್ನು ಮೊದಲ ಬಾರಿಗೆ ದೇಶದ ರಾಜಧಾನಿ ಎಂದು ಘೋಷಿಸುತ್ತಾರೆ.
1940ರಲ್ಲಿ ಭಾರತೀಯ ಸೇನೆ ದೇಶದ ಐತಿಹಾಸಿಕ ಸಂಕೇತವಾದ ಕೆಂಪುಕೋಟೆಯ ಗೌರವವನ್ನು ಎತ್ತರಿಸಲು ಅಲ್ಲಿ ಸಮರಾಭ್ಯಾಸ ಮಾಡುತ್ತದೆ. ಅಂದಿನಿಂದ ಈ ಕೆಂಪುಕೋಟೆಗೂ ಹಾಗೂ ಭಾರತೀಯ ಸೇನೆಗೂ ಒಂದು ಭಾವನಾತ್ಮಕ ನಂಟು ಬೆಸೆದುಕೊಳ್ಳುತ್ತದೆ.
1947 ಆಗಸ್ಟ್ 15 ರಂದು ಭಾರತದ ಮೊಟ್ಟ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಕೆಂಪುಕೋಟೆಯಲ್ಲಿಯೇ ಧ್ವಜಾರೋಹಣ ಮಾಡುವುದಾಗಿ ನಿರ್ಧರಿಸುತ್ತಾರೆ
15 ಆಗಸ್ಟ್ 1947ರಂದು ನೆಹರು ಧ್ವಜಾರೋಹಣವನ್ನು ಪ್ರಿನ್ಸಿಸ್ ಪಾರ್ಕ್ನಲ್ಲಿ ಮಾಡಿದರೆ, ದೇಶವನ್ನುದ್ದೇಶಿಸಿ ಆಗಸ್ಟ್ 16ರಂದು ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತಾರೆ.
ಅಂದಿನಿಂದಲೂ ಈ ಒಂದು ಪರಂಪರೆಯ ಮೂಲಕ ಕೆಂಪುಕೋಟೆ ಬ್ರಿಟಿಷ್ ವಶಾತುಶಾಹಿಯ ಅಂತ್ಯದ ಹಾಗೂ ಭಾರತದ ಸಾರ್ವಭೌಮತ್ವದ ಹೆಗ್ಗುರುತಾಗಿ ನಿಲ್ಲುತ್ತದೆ. ಅಂದಿನಿಂದ ಇಂದಿನವರೆಗೂ ಅದೇ ಪರಂಪರೆಯನ್ನು ದೇಶದ ಎಲ್ಲಾ ಪ್ರಧಾನಿಗಳು ಮುಂದುವರಿಸಿಕೊಂಡು ಬಂದಿದ್ದಾರೆ. ಕೆಂಪುಕೋಟೆ ಕೇವಲ ಮೊಘಲರ ಕಾಲದ ಪಳೆಯುಳಿಕೆಯಾಗಿ ಉಳಿಯುವ ಬದಲು. ಈ ದೇಶದ ಸಾರ್ವಭೌಮತ್ವದ ಹೆಗ್ಗುರುತಾಗಿ ಸುಮಾರು 400 ವರ್ಷಗಳಿಂದ ಸಾಗಿ ಬಂದಿದೆ.