spot_img
spot_img
spot_img
spot_img
spot_img
spot_img

ಕಾಲುಂಗುರ ಧರಿಸುವುದರ ಮಹತ್ವವೇನು?

Published on

spot_img

ವಿವೇಕವಾರ್ತೆ – ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಮುತ್ತೈದೆ ಎಂದರೆ ಹಣೆಗೆ, ಕೈಗೆ, ಕಾಲುಂಗುರ, ಮೂಗುತಿ ಹಾಗೂ ಕಿವಿಯೋಲೆ ಧರಿಸುವ ಸಂಪ್ರದಾಯವಿದೆ. ಹಿರಿಯರು ಯಾವುದೇ ಸಂಪ್ರದಾಯವನ್ನು ಮಾಡುವಾಗ ಅದು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆಯೂ ಚಿಂತಿಸುತ್ತಿದ್ದರು ಎನಿಸುತ್ತೆ. ಕಾಲುಂಗುರ ತೊಡುವ ಹಿಂದೆಯೂ ಇದೆ ವೈಜ್ಞಾನಿಕ ಸತ್ಯ. ಏನದು?

ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮದುವೆಯಾದ ಮಹಿಳೆ ಧರಿಸಲೇಬೇಕಾದ ಒಂದು ಮುಖ್ಯವಾದ ಮಂಗಳಕರ ವಸ್ತು ಇದಾಗಿದೆ. ಆದರೆ ಇಂದು ಫ್ಯಾಷನ್ ಗಾಗಿ, ಡೆಕೋರೇಟಿವ್ ಜ್ಯುವೆಲ್ಲರಿ ಆಗಿ ಅಥವಾ ಹೀಲಿಂಗ್ ಪವರ್ ಹೊಂದಿದ ಸ್ಟೋನ್ ಜೊತೆ ಇದನ್ನು ಧರಿಸುತ್ತಾರೆ.

ಪೌರಾಣಿಕ ಕಾಲದಲ್ಲೂ ನಾವು ಗಮನಿಸಿದಾಗ ರಾಮಾಯಣದಲ್ಲಿ ಕಾಲುಂಗುರದ ಉಲ್ಲೇಖ ಇದೆ. ರಾವಣ ಸೀತೆಯನ್ನು ಅಪಹರಿಸಿದಾಗ ಸೀತೆ ರಾಮನಿಗೆ ಪತ್ತೆ ಹಚ್ಚಲು ಸುಲಭವಾಗಲೆಂದು ತನ್ನ ಕಾಲುಂಗುರವನ್ನು ಎಸೆದಿದ್ದಳಂತೆ. ಅಂದರೆ ಆ ಕಾಲದಿಂದಲೂ ಕಾಲುಂಗುರ ಬಳಕೆಯಲ್ಲಿತ್ತು ಎಂದು ಹೇಳಲಾಗುತ್ತದೆ.

ಕಾಲುಂಗುರ ಸಾಮಾನ್ಯವಾಗಿ ಬೆಳ್ಳಿಯಿಂದ ಮಾಡಿರುತ್ತಾರೆ. ಇದನ್ನು ಚಿನ್ನದಿಂದಲೇ ಮಾಡಬಹುದಿತ್ತು. ಆದರೆ ಹಿಂದೂ ಸಂಪ್ರದಾಯದಲ್ಲಿ ಸೊಂಟಕ್ಕಿಂತ ಕೆಳಗೆ ಚಿನ್ನ ಧರಿಸಬಾರದೆಂಬ ನಂಬಿಕೆ ಇದೆ. ಚಿನ್ನ ಲಕ್ಷ್ಮಿ ದೇವಿಯ ಸಂಕೇತ. ಆದುದರಿಂದ ಚಿನ್ನವನ್ನು ಕಾಲಿಗೆ ಹಾಕಲು ಜನರು ಇಷ್ಟ ಪಡೋದಿಲ್ಲ.

ಕಾಲುಂಗುರ ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?
– ಎರಡನೇ ಬೆರಳಿಗೆ ಕಾಲುಂಗುರ ಧರಿಸುವುದರಿಂದ ಲೈಂಗಿಕ ಜೀವನ ತೃಪ್ತಿಕರವಾಗಿರುತ್ತದೆ.
– ಕಾಲುಂಗುರ ಹಾಕುವುದರ ಹಿಂದೆ ವೈಜ್ಞಾನಿಕ ಕಾರಣ ಇದೆ. ಕಾಲಿನ ಎರಡನೇ ಬೆರಳಿನಲ್ಲಿ ಪ್ರೆಷರ್ ಪಾಯಿಂಟ್ ಇದೆ. ಈ ಬೆರಳುಗಳಿಗೆ ಬೆಳ್ಳಿಯ ಉಂಗುರ ಹಾಕುವುದರಿಂದ ಋುತು ಚಕ್ರ ಸಮರ್ಪಕವಾಗಿ ಆಗುತ್ತದೆ.
– ನೀವು ನಡೆಯುತ್ತಿದ್ದರೆ ಎರಡನೇ ಬೆರಳಿಗೆ ಪ್ರೆಷರ್ ಬೀಳುತ್ತದೆ. ಅವಾಗ ಬೆರಳಿನಲ್ಲಿರುವ ನರ ಗರ್ಭಕೋಶದ ಮೂಲಕ ಹೃದಯದಕ್ಕೆ ಕನೆಕ್ಟ್ ಆಗುತ್ತದೆ. ಇದರಿಂದ ಉತ್ಪಾದಕ ಅಂಗಗಳ ಅರೋಗ್ಯ ಹೆಚ್ಚುತ್ತದೆ.
– ರಕ್ತದ ಪರಿಚಲನೆ ಉತ್ತಮವಾಗುತ್ತದೆ. ಇದರಿಂದ ಗರ್ಭಕೋಶ ಆರೋಗ್ಯದಿಂದ ಇರಲು ಸಾಧ್ಯ.
– ಕಾಲಿನ ಎರಡನೇ ಬೆರಳಿಗೆ ಮಸಾಜ್ ಮಾಡುವುದರಿಂದ ಮಹಿಳಾ ಸಂಬಂಧೀ ಸಮಸ್ಯೆಗಳು ನಿವಾರಣೆಯಾಗುತ್ತದೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!