ಬೆಂಗಳೂರು ಮತ್ತು ಧಾರವಾಡ ನಡುವೆ ಮಾರ್ಚ್- ಏಪ್ರಿಲ್ ನಲ್ಲಿ ಸಂಚಾರ ಆರಂಭಿಸಲಿರುವ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೂ ವಿಸ್ತರಣೆ ಆಗಲಿದೆ.
ನೈಋತ್ಯ ವಲಯದ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಹುಬ್ಬಳ್ಳಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
22 ಹೊಸತು ಸೇರಿದಂತೆ 210 ಕಿ.ಮೀ. ರೈಲು ಜೋಡಿ ಮಾರ್ಗ ಸಂಪೂರ್ಣಗೊಂಡಿದೆ. ಬೆಳಗಾವಿ ನಡುವಿನ ರೈಲು ಜೋಡಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡ ಕೂಡಲೇ ವಂದೇ ಭಾರತ್ ರೈಲನ್ನು ಬೆಳಗಾವಿ ವರೆಗೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಸ್ತುತ ನೈರುತ್ಯ ವಲಯದಲ್ಲಿ 252 ರೈಲುಗಳು ಸಂಚರಿಸುತ್ತಿದ್ದು, ಹಬ್ಬ, ರಜಾದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಮನಿಸಿ ಬೋಗಿಗಳ ಸಂಖ್ಯೆ 224ರವರೆಗೂ ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಒಂದು ವರ್ಷದಲ್ಲಿ 712 ಕಿ.ಮೀ.ದೂರದವರೆಗೆ ರೈಲ್ವೆ ಮಾರ್ಗದಲ್ಲಿ ಎಲೆಕ್ಟ್ರಿಕ್ ಕೆಲಸಗಳು ಪೂರ್ಣಗೊಂಡಿವೆ. ಶೇ.94ರಷ್ಟು ರೈಲುಗಳು ಸಮಯ ಪಾಲನೆ ಮಾಡುತ್ತಿದ್ದು, ದೇಶದಲ್ಲಿ ಮೂರನೇ ಸ್ಥಾನ ಪಡೆದಿದೆ. ರೈಲುಗಳ ಸಂಚಾರದ ವೇಗ ಶೇ.58ರಷ್ಟು ವೃದ್ಧಿಸಿದೆ. ಈ ಭಾಗದಲ್ಲಿ 2534 ಕೋಟಿ ರೂ. ಆದಾಯ ಗಳಿಸಿದೆ ಎಂದು ಅವರು ಹೇಳಿದರು.