spot_img
spot_img
spot_img
spot_img
spot_img
spot_img

ಅಂಕಲ್ ಜೊತೆ ‘ಪ್ರೇಮದ ರೊಟ್ಟಿ’ ತಟ್ಟಿದ ಆಂಟಿ; ವಿಮಾನ ಹತ್ತಿ ದೇಶ ಸುತ್ತಿದ ಮೇಲೆ ಕೈಕೊಟ್ಟ ಕಹಾನಿ..!

Published on

spot_img

ಬೆಳಗಾವಿ: ಒಬ್ಬರಿಗೆ ಮನಸ್ಸು ಕೊಡುವ ಮೊದಲು ಹಿಂದೆ, ಮುಂದೆ ಯೋಚನೆ ಮಾಡಿ ಆಗು-ಹೋಗುಗಳನ್ನು ಅರಿತು ಹೆಜ್ಜೆಯನ್ನಿಡಬೇಕು ಅನ್ನೋ ಮಾತಿದೆ. ಇಲ್ಲಿ ಗಂಡು-ಹೆಣ್ಣಿನ ಅಕ್ರಮ ಸಂಬಂಧವನ್ನು ಸಮಾಜ ಒಪ್ಪಿಕೊಂಡಿಲ್ಲ. ಆದರೂ ಖುಲ್ಲಂ ಖುಲ್ಲಾ! ಹೀಗೊಂದು ಪ್ರಕರಣದಲ್ಲಿ ಲಾರಿ ಡ್ರೈವರ್​ ಒಬ್ಬರು ರೊಟ್ಟಿ ಮಾರುವ ಆಂಟಿ ಮೇಲೆ ಮನಸ್ಸಾಗಿ, ಪರಿತಪಿಸುತ್ತಿದ್ದಾರೆ.

ಆಂಟಿ ಮೇಲೆ ಅಂಕಲ್​​ಗೆ ಲವ್

ಅಂಕಲ್

ಅಂದ್ಹಾಗೆ ಇದು ರೊಟ್ಟಿ ತರಲು ಹೋದ ಅಂಕಲ್‌ಗೆ ಆಂಟಿ ಮೇಲೆ LOVE ಆದ ಕತೆ! ಮಹಾರಾಷ್ಟ್ರದ ಸಾಂಗ್ಲಿಯ ಜತ್ತ ತಾಲೂಕಿನ ಮುಚ್ಚಂಡಿ ಗ್ರಾಮದ (ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹತ್ತಿರದ ಗ್ರಾಮ) ಸಿದ್ದಗೊಂಡ ಸೌದತ್ತಿ ಲಾರಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದಾನೆ. ಈತನಿಗೆ ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ. ಒಮ್ಮೆ ಸಿದ್ದಗೊಂಡ ಸೌದತ್ತಿ, ಮನೆಯಿಂದ ಆಚೆ ಹೋಗಿದ್ದಾಗ ರೊಟ್ಟಿ ಮಾರುತ್ತಿದ್ದ ಸುಜಾತಳ ಪರಿಚಯ ಆಗುತ್ತದೆ.‌

ಈ ಸುಜಾತಗೂ ಸಹ ಮದುವೆ ಆಗಿದ್ದು, ಒಂದು ಮಗು ಇದೆ. ಹಸಿವು ನೀಗಿಸಿಕೊಳ್ಳಲು ಸುಜಾತ ಮಾಡಿದ್ದ ರೊಟ್ಟಿಗಾಗಿ ಸೌದತ್ತಿ ಆಗಾಗ ಬರುತ್ತಿದ್ದ. ಇಬ್ಬರ ನಡುವಿನ ಸ್ನೇಹ ಸಲುಗೆಗೆ ತಿರುಗಿತ್ತು. ಮುಂದೊಂದು ದಿನ ಅದು ಪ್ರೇಮಾಂಕುರವಾಗಿ ಚಿಗುರಿತ್ತು. ಅದು ಯಾವ ಮಟ್ಟಿಗೆ ಅಂದರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು! ಇಬ್ಬರಿಗೂ ಮದುವೆ ಆಗಿರೋದ್ರಿಂದ ಸಂದಿಸೋದು ತುಂಬಾ ಕಷ್ಟ ಆಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿದ ಸುಜಾತ ಪತಿ ಹಾಗೂ ಮಗುವನ್ನು ಬಿಟ್ಟು ಓಡಿ ಬಂದಿದ್ದಳು.

ಸುಜಾತಾ ಅಂಟಿ ಲವ್‌ ಕಹಾನಿ

ಮಹಾರಾಷ್ಟ್ರ ಟು ಬಳ್ಳಾರಿ

ಸೌದತ್ತಿ ಜೊತೆ ಬಳ್ಳಾರಿಗೆ ಬಂದಿದ್ದ ಸುಜಾತ 6 ತಿಂಗಳ ಕಾಲ ಯಾರಿಗೂ ಗೊತ್ತಾಗದೇ ಸಂಸಾರ ಮಾಡಿದ್ದಳು. ಪ್ರೇಯಸಿಗೆ ಸಂಪೂರ್ಣವಾಗಿ ತನ್ನನ್ನು ಅರ್ಪಿಸಿಕೊಂಡಿದ್ದ ಸೌದತ್ತಿ, ಆಕೆ ಹೇಳಿದಂತೆಯೇ ಕೇಳಲು ಶುರುಮಾಡಿದ್ದ. ಪ್ರೇಯಸಿಯನ್ನು ಕರೆದುಕೊಂಡು ಸಾಲು ಸಾಲು ಟ್ರಿಪ್ ಹೊಡೆಯುತ್ತಿದ್ದ. ಆಕೆಯನ್ನು ಖುಷಿ ಪಡಿಸೋದೇ ನನ್ನ ಧರ್ಮ ಅಂದ್ಕೊಂಡ ಪುಣ್ಯಾತ್ಮ ವಿಮಾನದಲ್ಲೂ ಸುತ್ತಾಡಿಸಿದ್ದ. ವಿಮಾನಗಳ ಮೂಲಕ ಹೊರ ರಾಜ್ಯಗಳಿಗೂ ಹೋಗಿ ಕೈಕೈ ಹಿಡಿದು ಸುತ್ತಿ ಬಂದಿದ್ದರು. ಕನ್ಯಾಕುಮಾರಿ, ತಿರುಪತಿ, ಮಧುರೈ, ಕೊಚ್ಚಿ ಸೇರಿದಂತೆ ನೂರಾರು ಧಾರ್ಮಿಕ ಕ್ಷೇತ್ರಗಳಿಗೆ ಹೋಗಿ ಎಂಜಾಯ್ ಮಾಡಿಕೊಂಡು ಬಂದಿತ್ತು ಈ ಜೋಡಿ.

ಇತ್ತ, ಪತಿ ಹಾಗು ಮಗುವಿಗೆ ಕೈಕೊಟ್ಟು ಹೋಗಿದ್ದರಿಂದ ಸುಜಾತ ಗಂಡ ಕಂಗಾಲಾಗಿದ್ದ. ಪತ್ನಿ ಕಾಣೆಯಾಗಿದ್ದಾಳೆ ಹುಡುಕಿ ಕೊಡಿ ಎಂದು ಮಹಾರಾಷ್ಟ್ರ ಸಾಂಗ್ಲಿ ಠಾಣೆಯಲ್ಲಿ ಕೇಸ್ ದಾಖಲಿಸಿದ್ದ. ಕೊನೆಗೆ ಒಂದಿನ ಸುಜಾತ ಸೌದತ್ತಿ ಜೊತೆ ಇರೋದನ್ನು ಸಾಂಗ್ಲಿಯ ಪೊಲೀಸರು ಪತ್ತೆ ಹಚ್ಚುತ್ತಾರೆ. ಮೂವರನ್ನು ಕರೆಸಿ ರಾಜಿ ಮಾಡಿಸುವ ಪ್ರಯತ್ನ ಮಾಡಿದ್ದರು. ಈ ವೇಳೆ ಸುಜಾತ, ನಾನು ಪತಿ ಜೊತೆ ವಾಸ ಮಾಡಲ್ಲ. ಸಿದ್ದಗೊಂಡ ಸೌದತ್ತಿ ಜೊತೆ ಹೋಗ್ತೇನೆ ಎಂದಿದ್ದಾಳೆ. ಅದರಂತೆ ಪೊಲೀಸರು ಆಕೆಯಿಂದ ಮುಚ್ಚಳಿಕೆ ಬರೆಸಿಕೊಂಡು ಹೋಗಿದ್ದಳು.

ಕೈಕೊಟ್ಟ ಸುಜಾತ, ಅಂಕಲ್ ಕಂಗಾಲ್
ಸೌದತ್ತಿ ಜೊತೆ ಬಂದರೂ ಸುಜಾತ ತನ್ನ ಗಂಡನಿಗೆ ಆಗಾಗ ಫೋನ್ ಮಾಡ್ತಿದ್ದಳಂತೆ. ಇದೀಗ ಸಿದ್ದಗೊಂಡನಿಗೆ ಕೈಕೊಟ್ಟಿರುವ ಆಕೆ, ಗೊತ್ತಿಲ್ಲದೇ ಬಳ್ಳಾರಿಯಿಂದ ಪರಾರಿ ಆಗಿದ್ದಾಳಂತೆ. ಕಂಗಾಲ್ ಆಗಿರುವ ಸಿದ್ದನಗೊಂಡ ಸೌದತ್ತಿ ಪ್ರೇಯಸಿಗಾಗಿ ಕಣ್ಣೀರು ಇಡುತ್ತಿದ್ದಾನೆ. ನಾನು ಆಕೆಗಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಮದುವೆ ಆಗುವ ಯೋಜನೆಯಲ್ಲಿ ನಾನಿದ್ದೆ. ಇದೀಗ ನನ್ನ ಬಿಟ್ಟು ಹೋಗಿದ್ದಾಳೆ. ದಯಮಾಡಿ ಆಕೆಯನ್ನು ಹುಡುಕಿಕೊಡಿ, ಆಕೆಯೇ ನನ್ನ ಜೀವ ಎಂದು ಠಾಣೆ ಮೆಟ್ಟಿಲೇರಿದ್ದಾನೆ. ಬಳ್ಳಾರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಲೆಯುತ್ತಿದ್ದಾನೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!