spot_img
spot_img
spot_img
spot_img
spot_img
spot_img

ತಾಯಿ-ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಟ್ವಿಸ್ಟ್- ಹೊಸ ವರ್ಷದ ಪಾರ್ಟಿಗೆ ಪ್ರಿಯಕರನನ್ನು ಕರೆಸಿ ತಾನೇ ಬಲಿಯಾದ್ಳು!

Published on

spot_img

ಹಾಸನ: ಇಲ್ಲಿನ ದಾಸರಕೊಪ್ಪಲಿನಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೊಸ ವರ್ಷದ ಆಚರಣೆಗೆ ಪ್ರಿಯಕರನನ್ನು ಮನೆಗೆ ಕರೆಸಿ ಆತನಿಂದಲೇ ಮಹಿಳೆ ಹತ್ಯೆಯಾಗಿರುವುದು ಪೊಲೀಸರ (Police) ತನಿಖೆಯಲ್ಲಿ ಬಯಲಾಗಿದೆ.

ದಾಸರಕೊಪ್ಪಲಿನ ಶಿವಮ್ಮ ಹಾಗೂ ಆಕೆಯ ಮಕ್ಕಳಾದ ಪವನ್ (10) ಹಾಗೂ ಸಿಂಚನ (7) ಜ.2 ರಂದು ಹಾಸನ (Hassan) ನಗರದಲ್ಲಿದ್ದ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈಗ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಆಕೆಯ ಪ್ರಿಯಕರನೇ ಹತ್ಯೆಗೈದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಿಜಯಪುರ ಮೂಲದ ಆರೋಪಿ ನಿಂಗಪ್ಪ ಕಾಗವಾಡಿ (36) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ತಿಂಗಳ ಹಿಂದೆ ಬಿಜಾಪುರದಲ್ಲಿ (Bijapur) ಶಿವಮ್ಮಳ ಪತಿ ತೀರ್ಥಪ್ರಸಾದ್ ಬೇಕರಿ ನಡೆಸುತ್ತಿದ್ದರು. ಈ ಸಮಯದಲ್ಲಿ ಶಿವಮ್ಮಳಿಗೆ ನಿಂಗಪ್ಪ ಪರಿಚಯವಾಗಿದ್ದ. ಬಳಿಕ ಶಿವಮ್ಮಳ ಪತಿ ತುಮಕೂರಿನಲ್ಲಿ ಬೇಕರಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಾಗಿದ್ದ. ಈ ವೇಳೆ ನಿಂಗಪ್ಪ ಮಹಿಳೆಯ ಜೊತೆ ಸಲುಗೆ ಬೆಳೆಸಿದ್ದು, ಮನೆಗೆ ಬಂದು ಉಳಿದು ಹೋಗುತ್ತಿದ್ದ. ಅಲ್ಲದೇ ಮನೆಯಲ್ಲಿ ನಿಂಗಪ್ಪನನ್ನು ಕಾರು ಚಾಲಕ ಎಂದು ಮಹಿಳೆ ಪರಿಚಯ ಮಾಡಿಕೊಟ್ಟಿದ್ದಳು ಎಂದು ತಿಳಿದು ಬಂದಿದೆ.


ಹೊಸ ವರ್ಷದ ಆಚರಣೆಗೆ ಮಹಿಳೆ ನಿಂಗಪ್ಪನನ್ನು ತನ್ನ ಮನೆಗೆ ಕರೆಸಿದ್ದಳು. ಇದಕ್ಕಾಗಿ ಬಂದಿದ್ದ ಆರೋಪಿ ಡಿ.31ರ ರಾತ್ರಿ ಮಹಿಳೆಯ ಮನೆಯಲ್ಲೇ ಕಾಲಕಳೆದಿದ್ದ. ಅಲ್ಲದೇ ಜ.1ರ ಸಂಜೆ ಮನೆಗೆ ಬರುವುದಾಗಿ ಪತ್ನಿ ಶಿವಮ್ಮಗೆ ಪತಿ ತೀರ್ಥಪ್ರಸಾದ್ ಫೋನ್ ಮಾಡಿ ಹೇಳಿದ್ದ. ಈ ವಿಚಾರ ತಿಳಿದಿದ್ದ ನಿಂಗಪ್ಪ, ಶಿವಮ್ಮನನ್ನು ಕತ್ತುಹಿಸುಕಿ ಕೊಂದು ನಂತರ ಇಬ್ಬರು ಮಕ್ಕಳನ್ನು ಕತ್ತುಹಿಸುಕಿ ಕೊಲೆಗೈದಿದ್ದ. ಬಳಿಕ ಸಿಲಿಂಡರ್ ಪೈಪ್ ಕಿತ್ತು ಅನಿಲ ಸೋರಿಕೆಯಿಂದ ಸಾವು ಸಂಭವಿಸಿದೆ ಎಂಬಂತೆ ಬಿಂಬಿಸಿದ್ದ. ಅಲ್ಲದೇ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ, ತಾಳಿ, ಕಾಲು ಚೈನು ಹಾಗೂ ಮೊಬೈಲ್‍ನ್ನು ದೋಚಿಕೊಂಡು ಹೊರಗಡೆಯಿಂದ ಡೋರ್ ಲಾಕ್ ಮಾಡಿ ಪರಾರಿಯಾಗಿದ್ದ.

ಆ ದಿನ ಸಂಜೆ ಮನೆಗೆ ಬಂದಾಗ ಪತಿಗೆ ಶಿವಮ್ಮ ಹಾಗೂ ಮಕ್ಕಳಿಲ್ಲದ ಬಗ್ಗೆ ಅನುಮಾನ ಬಂದು, ಮರುದಿನ ಬೇರೆ ಕೀ ಬಳಸಿ ಬೀಗ ತೆಗೆದಾಗ ಕೃತ್ಯ ಬಯಲಾಗಿತ್ತು. ಮೂವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಶಿವಮ್ಮಳ ತಾಯಿ ಹುಲಿಯಮ್ಮ ಹಾಗೂ ಪತಿ ತೀರ್ಥ ಪ್ರಸಾದ್ ಪೆನ್‍ಷನ್‍ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಲಿಂಗಪ್ಪ ಚಿನ್ನಾಭರಣದ ಆಸೆಗೆ ಕೊಲೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕೃಪೆ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!