spot_img
spot_img
spot_img
spot_img
spot_img
spot_img

ಹುಬ್ಬಳ್ಳಿಯಲ್ಲಿ ಹರಿದ ನೆತ್ತರು.. ಅನೈತಿಕ ಸಂಬಂಧ ಹಿನ್ನೆಲೆ ಯುವಕನ ಹತ್ಯೆ

Published on

spot_img

ಹುಬ್ಬಳ್ಳಿ : ಅನೈತಿಕ ಸಂಬಂಧ ಹಿನ್ನೆಲೆ ಹುಬ್ಬಳ್ಳಿಯಲ್ಲಿ ನೆತ್ತರು ಹರಿದಿದೆ. ಯುವಕನ ತಲೆ ಮೇಲೆ ಕಲ್ಲು ಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಲ್ಲದೇ ಮೃತದೇಹವನ್ನು ಸುಟ್ಟು ಹಾಕಿದ್ದಾರೆ.

ಹುಬ್ಬಳ್ಳಿಯ ಕಾರವಾರ ರಸ್ತೆಯ ಎಂಟಿಎಸ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮೃತನನ್ನು ವಿಜಯ ಬಸವ (25) ಎಂದು ಗುರುತಿಸಲಾಗಿದೆ. ಎಂಟಿಎಸ್ ಕಾಲೋನಿಯ ಪಾಳುಬಿದ್ದ ಜಾಗದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್, ಡಿಸಿಪಿ ರಾಜೀವ್ ಎಂ., ಎಸಿಪಿ ವಿಜಯಕುಮಾರ ವಿ.ಟಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮದ್ಯದ ಬಾಟಲಿ, ಕಲ್ಲುಗಳು ಪತ್ತೆ

ಮೃತದೇಹದ ಪಕ್ಕ ಮದ್ಯದ ಬಾಟಲಿ ಹಾಗೂ ರಕ್ತ ಅಂಟಿದ ಎರಡು ಕಲ್ಲುಗಳು ಪತ್ತೆಯಾಗಿವೆ. ಮುಖದ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿರುವ ಗುರುತುಗಳಿವೆ. ಸ್ನೇಹಿತ ರಾಘವೇಂದ್ರ ಅವರಿಗೆ ಕರೆ ಮಾಡಿ, ಏನೋ ಮಾತನಾಡಬೇಕು ಎಂದಿದ್ದರಂತೆ. ಯಾವ ಕಾರಣಕ್ಕೆ ಕೊಲೆಯಾಗಿದೆ? ಯಾರು ಮಾಡಿದ್ದು? ಎನ್ನುವ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಆಧಾರ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್ – ಮಾರ್ಚ್ 14ರ ಒಳಗಾಗಿ ಈ ಕೆಲಸ ಕಡ್ಡಾಯ – ಇಲ್ಲಾಂದ್ರೆ ಆಧಾರ್ ಕಾರ್ಡ್ ಬಂದ್!

ಆಧಾರ್ ಕಾರ್ಡ್ ಇರುವ ದೇಶದ ಎಲ್ಲ ನಾಗರಿಕರಿಗೆ ಕೇಂದ್ರದ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಬಿಗ್ ಶಾಕ್ ಇದೆ. ಮಾರ್ಚ್...

PUC ಪಾಸಾಗಿದ್ರೆ ಈ ಹುದ್ದೆಗಳಿಗೆ ಅಪ್ಲೈ ಮಾಡಿ..! ತಿಂಗಳಿಗೆ 63,000 ಸಂಬಳ

12ನೇ ತರಗತಿಯನ್ನು (PUC) ಮತ್ತು ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕ್ಲರ್ಕ್ ಹುದ್ದೆಗಳಿಗೆ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ...

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...
error: Content is protected !!