spot_img
spot_img
spot_img
spot_img
spot_img
spot_img

ಸ್ನೇಹಿತರ ಜೊತೆ ಕುಡಿಯುತ್ತ ಕುಳಿತಿದ್ದ ಕುಡುಕನ ಹೊತ್ತೊಯ್ದ ಹುಲಿ

Published on

spot_img

ಸ್ನೇಹಿತರ ಜೊತೆ ಕುಡಿಯುತ್ತಾ ಕುಳಿತಿದ್ದ ವ್ಯಕ್ತಿಯನ್ನು ಹುಲಿಯೊಂದು ಹೊತ್ತೊಯ್ದ ಆಘಾತಕಾರಿ ಘಟನೆ ಉತ್ತರಾಖಂಡ್‌ನ, ಜಿಮ್ ಕೊರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸಮೀಪ ನಡೆದಿದೆ. ಶನಿವಾರ ಡಿಸೆಂಬರ್ 24 ರಂದು ರಾತ್ರಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಬಳಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಸ್ನೇಹಿತರೊಂದಿಗೆ ಮದ್ಯಪಾನ ಮಾಡುತ್ತಿದ್ದಾಗ ಮೇಲೆರಗಿದ ಹುಲಿ ಆತನನ್ನು ಸಮೀಪದ ಕಾಡಿಗೆ ಎಳೆದೊಯ್ದಿದೆ.

ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ (Jim Corbett National Park) ವ್ಯಾಪ್ತಿಗೆ ಒಳಪಡುವ ಧನಗರ್ಹಿಯಿಂದ (Dhangarhi) ಮೋಹನ್ ಪ್ರದೇಶದ(Mohan area)ನಡುವೆ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಆಗಾಗ ಮನುಷ್ಯರ ಮೇಲೆ ವ್ಯಾಘ್ರಗಳು ದಾಳಿ ನಡೆಸುವ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರಾಮನಗರ ಆಡಳಿತವು (Ramnagar administration) ಇಲ್ಲಿ ಸೆಕ್ಷನ್ 144 ಅನ್ನು ವಿಧಿಸಿದೆ. ಇದರ ಪ್ರಕಾರ ಇಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ, ಮೂವರು ಸ್ನೇಹಿತರು ಈ ಭಾಗದಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದಾಗ ಹುಲಿ ಅವರಲ್ಲಿ ಒಬ್ಬನ ಮೇಲೆ ದಾಳಿ ಮಾಡಿ ಕಾಡಿಗೆ ಎಳೆದೊಯ್ದಿದೆ.

ವ್ಯಕ್ತಿಯನ್ನು ಹುಲಿ ಹೊತ್ತೊಯ್ದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸ್ ಠಾಣೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ವ್ಯಕ್ತಿಗಾಗಿ ಶೋಧ ಕಾರ್ಯ ಆರಂಭಿಸಿದರಾದರೂ ಆರಂಭದಲ್ಲಿ ಆತ ಪತ್ತೆಯಾಗಿರಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಗಂಟೆಗಟ್ಟಲೆ ಹುಡುಕಾಟ ನಡೆಸಿದ ಬಳಿಕ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ರಾಮನಗರ (Ramnagar) ನಿವಾಸಿ ನಫೀಸ್ (Nafees) ಎಂದು ಗುರುತಿಸಲಾಗಿದೆ. ಅರಣ್ಯ ಇಲಾಖೆಯ ವರದಿಯ ಪ್ರಕಾರ ಈ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಜನರು ಹುಲಿ ದಾಳಿಯಿಂದ ಇದುವರೆಗೆ ಸಾವನ್ನಪ್ಪಿದ್ದಾರೆ. ರಾಮನಗರ ಅರಣ್ಯ ವಿಭಾಗದಲ್ಲಿ (Ramnagar Forest Division) ಬರುವ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ನಿಷೇಧಿತ ಪ್ರದೇಶದಲ್ಲಿ ಈ ನರಭಕ್ಷಕ ಹುಲಿಗಾಗಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಈ ನರಭಕ್ಷಕ ಹುಲಿಗಾಗಿ ಅರಣ್ಯ ಇಲಾಖೆ ಹಲವು ತಂಡಗಳನ್ನು ರಚಿಸಿದ್ದು ಆನೆಗಳನ್ನು (elephant) ಕೂಡ ನಿಯೋಜಿಸಿದೆ. ಜೊತೆಗೆ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಕೂಡ ಅಳವಡಿಸಲಾಗಿದೆ ಮತ್ತು ಹುಲಿಯನ್ನು ಪತ್ತೆ ಮಾಡಲು ಡ್ರೋನ್ ಕ್ಯಾಮೆರಾಗಳನ್ನು ಸಹ ಬಳಸಲಾಗುತ್ತಿದೆ. ಅರಣ್ಯ ಇಲಾಖೆ ಮತ್ತು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳೊಂದಿಗೆ ವೈದ್ಯರ ತಂಡವು ಕೂಡ ಕಾರ್ಯಾಚರಿಸುತ್ತಿದ್ದು, ಹುಲಿ ಈ ಪ್ರದೇಶಕ್ಕೆ ಬಂದಲ್ಲಿ ಅದನ್ನು ಹಿಡಿಯಬಹುದು ಎಂಬ ಭರವಸೆಯೊಂದಿಗೆ ಮುಖ್ಯ ರಸ್ತೆ ಮತ್ತು ಅರಣ್ಯ ಪ್ರದೇಶವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಈಗಾಗಲೇ ಹುಲಿ ಹಿಡಿಯಲು ಅರಣ್ಯ ಇಲಾಖೆ (forest department) ಹಲವೆಡೆ ಬೋನುಗಳನ್ನು (cages) ಅಳವಡಿಸಿದ್ದರೂ ಯಾವುದೂ ಫಲ ನೀಡಿಲ್ಲ. ಅರಣ್ಯ ಇಲಾಖೆ ಕೈಗೆ ಸಿಗದೇ ತಲೆಮರೆಸಿಕೊಂಡಿರುವ ಹುಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ (national highway) ಜನರ ಮೇಲೆ ದಾಳಿ ನಡೆಸುತ್ತಿದೆ. ರಾಮನಗರ ಆಡಳಿತ ಮತ್ತು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹೊರತಾಗಿ, ಅರಣ್ಯ ಇಲಾಖೆಯು ಸುತ್ತಮುತ್ತಲಿನ ನಿವಾಸಿಗಳಿಗೆ ನಿಷೇಧಿತ ಪ್ರದೇಶಕ್ಕೆ ಹೋಗದಂತೆ ಮನವಿ ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಸಂಜೆಯ ಸಮಯದಲ್ಲಿ ಗರಿಷ್ಠ ಹುಲಿ ದಾಳಿಗಳು ವರದಿಯಾಗಿವೆ. ಅಧಿಕಾರಿಗಳು ಅಲ್ಲಿ ಪೋಸ್ಟರ್‌ಗಳು, ಬ್ಯಾನರ್‌ಗಳನ್ನು ಹಾಕಿದ್ದಾರೆ ಮತ್ತು ನಿರ್ಬಂಧಿತ ವಲಯಕ್ಕೆ ಹೋಗಬೇಡಿ ಎಂಬ ಸಂದೇಶವನ್ನು ಜನರಿಗೆ ತಿಳಿಸಲು ಮಾಧ್ಯಮಗಳ ಸಹಾಯವನ್ನು ಸಹ ತೆಗೆದುಕೊಂಡಿದ್ದಾರ. ಇಷ್ಟೆಲ್ಲಾ ಮಾಡಿದ ನಂತರವೂ ಕೆಲವರು ನಿಯಮಗಳನ್ನು ಉಲ್ಲಂಘಿಸಿ ಪ್ರದೇಶಕ್ಕೆ ಹೋಗಿ ತಮ್ಮ ಪ್ರಾಣವನ್ನೇ ಅಪಾಯಕ್ಕೆ ತಳ್ಳುತ್ತಿದ್ದಾರೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಶೇಕಡಾ 99 ರಷ್ಟು ಜನರಿಗೆ ಗೊತ್ತಿರದ ಉಪಯೋಗ- ರೇಷನ್ ಕಾರ್ಡ್ ಅಂದ್ರೆ ರೇಷನ್ ಅಷ್ಟೇ ಅಲ್ಲ, ಸಾವಿರಾರು ಲಾಭ.! ಹೇಗೆ ಗೊತ್ತೇ?

ವಿವೇಕವಾರ್ತೆ : ರೇಷನ್ ಕಾರ್ಡ್ಗಳನ್ನು ಸರ್ಕಾರ ಜನರಿಗೆ ನಾವು ನೀಡುವಂತಹ ಯೋಜನೆಗಳು ನೇರವಾಗಿ ತಲುಪಲು ಸಾಧ್ಯವಾಗಲಿ ಹಾಗೂ ಉದಾಹರಣೆಗೆ...

QR Code ಮೂಲಕ ಭಿಕ್ಷೆ ಬೇಡುತ್ತಿರುವ ಭಿಕ್ಷುಕ, ಒಂದೇ ದಿನದಲ್ಲಿ ಎಷ್ಟು ಲಕ್ಷ ಸಂಪಾದನೆ ಗೊತ್ತಾ..?

ವಿವೇಕವಾರ್ತೆ : ಅಪಡೆಟ್ ಆಗಿದ್ದಾರೆ ಈಗಿನ ಭಿಕ್ಷುಕರು.ಸಾಮಾನ್ಯವಾಗಿ ಈ ದೇವಸ್ಥಾನಗಳ ಬಳಿ, ರೈಲ್ವೇ ಸ್ಟೇಷನ್, ಬಸ್ ನಿಲ್ದಾಣಗಳ ಬಳಿ...

ಕರುನಾಡಿಗೆ ಭರ್ಜರಿ ಸಿಹಿಸುದ್ದಿ ಕೊಟ್ಟ ವರ್ತೂರ್ ಹಾಗೂ ತನಿಷಾ, ಇದೇ ತಿಂಗಳು ಬೆಂಗಳೂರಲ್ಲಿ ಸಂಭ್ರಮ

ವಿವೇಕವಾರ್ತೆ :ವರ್ತೂರು ಸಂತೋಷ್ ಮನೆಯ ಕಾರ್ಯಕ್ರಮದಲ್ಲಿ ತನಿಷಾ ಕುಪ್ಪಂಡ, ತುಕಾಲಿ ಸಂತೋಷ್ ಸೇರಿ ಅನೇಕರು ಬಿಡುವು ಮಾಡಿಕೊಂಡು ಆಗಮಿಸಿದ್ದರು....

ಕೋಳಿ ಸಾಕಾಣಿಕೆ ಮಾಡಲು 25 ಲಕ್ಷ ಸಹಾಯಧನ ರೈತರಿಗೆ ನಿರುದ್ಯೋಗಿಗೆ ಗೃಹಿಣಿಯರಿಗೆ.!!

ವಿವೇಕವಾರ್ತೆ :ನಮಸ್ಕಾರ ಸ್ನೇಹಿತರೇ, ನಿರುದ್ಯೋಗಿಗಳನ್ನ ಉದ್ಯೋಗಿಗಳನ್ನಾಗಿ ಮಾಡಲು ಹಾಗು ರೈತರನ್ನ ಆರ್ಥಿಕವಾಗಿ ಸದೃಢರನ್ನಾಗಿಸಲು ಮತ್ತು ಮನೆಯಲ್ಲಿರುವ ಗೃಹಿಣಿಯರು ಸೇರಿದಂತೆ...
error: Content is protected !!