IPL2025; ಮೆಗಾ ಆಕ್ಷನ್​ಗೆ ಭಾರತದ ಮೂವರು ವಿಕೆಟ್​ ಕೀಪರ್​ಗಳು ಎಂಟ್ರಿ.. ಕ್ಯಾಪ್ಟನ್​ ಆಗಿದ್ರೂ ಕೈ ಬಿಟ್ಟ ಫ್ರಾಂಚೈಸಿ​

WhatsApp Group Join Now
Telegram Group Join Now
Instagram Account Follow Now

2025ರ ಐಪಿಎಲ್ IPL2025​ ಟೂರ್ನಿಗಾಗಿ ಎಲ್ಲಾ 10 ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಮೆಗಾ ಆಕ್ಷನ್​ಗೆ ರೆಡಿಯಾಗಲಿದೆ. 2025ರ ಮೆಗಾ ಆಕ್ಷನ್​ನಲ್ಲಿ ಭಾರತದ ಮೂವರು ಸ್ಟಾರ್ ವಿಕೆಟ್​ ಕೀಪರ್​​ಗಳು​ ಇರುವುದು ಕನ್​ಫರ್ಮ್ ಆಗಿದೆ. ಆದರೆ ಆಕ್ಷನ್​ನಲ್ಲಿ ಯಾವ ಟೀಮ್ ಪಾಲಾಗುತ್ತಾರೆ ಎಂಬುದು ಕುತೂಹಲ ಮೂಡಿದೆ.

ಕನ್ನಡಿಗ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಆಗಿದ್ದ ಕೆ.ಎಲ್ ರಾಹುಲ್ ಅವರನ್ನು ಫ್ರಾಂಚೈಸಿ ಕೈ ಬಿಟ್ಟಿದೆ. ಹೀಗಾಗಿ ರಾಹುಲ್ 2025ರ ಮೆಗಾ ಆಕ್ಷನ್​ಗೆ ಹೋಗಲಿದ್ದಾರೆ. ವಿಕೆಟ್​ ಕೀಪರ್, ಬ್ಯಾಟ್ಸ್​​ಮನ್ ಆಗಿರುವ ರಾಹುಲ್​ 2024ರ ಟೂರ್ನಿಯ ಪಂದ್ಯವೊಂದು ನಡೆಯುವ ವೇಳೆ ಲಕ್ನೋ ಓನರ್ ಜೊತೆ ಕಹಿ ಘಟನೆ ನಡೆಯಿತು. ಅಂದಿನಿಂದ ಫ್ರಾಂಚೈಸಿ- ರಾಹುಲ್ ಮಧ್ಯೆ ಸಂಬಂಧ ಅಷ್ಟೇನೂ ಚೆನ್ನಾಗಿ ಇರಲಿಲ್ಲ. ರಾಹುಲ್ ಹೊರ ಬರುತ್ತಾರೆ ಎಂದು ವರದಿಗಳು ಬರುತ್ತಲೇ ಇದ್ದವು. ಅದರಂತೆ ರಾಹುಲ್ ಲಕ್ನೋ ತಂಡವನ್ನ ಬಿಟ್ಟು ಹೊರ ಬಂದಿದ್ದು 2025ರ ಮೆಗಾ ಆಕ್ಷನ್​ಗೆ ಹೋಗಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಕ್ಯಾಪ್ಟನ್ ಹಾಗೂ ವಿಕೆಟ್​ ಕೀಪರ್ ಆಗಿದ್ದ​ ರಿಷಬ್ ಪಂತ್ ಕೂಡ ಮೆಗಾ ಆಕ್ಷನ್​ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲಿನ ಊಹಾಪೋಹಗಳಂತೆ ಡೆಲ್ಲಿ ರಿಟೈನ್​ ಲಿಸ್ಟ್​ನಲ್ಲಿ ಪಂತ್ ಹೆಸರು ಇಲ್ಲ, ಗಂಭೀರವಾದ ಅಪಘಾತವಾದ ಬಳಿಕ ಚೇರಿಸಿಕೊಂಡು ಬಂದಿದ್ದ ಪಂತ್​ರನ್ನ ಡೆಲ್ಲಿ ಮತ್ತೆ ತಂಡದಲ್ಲಿ ಆಡಿಸಿತ್ತು. ಆದರೆ ಈಗ ತಂಡದಿಂದ ಅವರನ್ನು ಕೈ ಬಿಡಲಾಗಿದ್ದು ಮೆಗಾ ಆಕ್ಷನ್​ನಲ್ಲಿ ಯಾವ ತಂಡದ ಪಾಲಾಗುತ್ತಾರೆ ಎಂಬುದು ಫ್ಯಾನ್ಸ್​ಗೆ ಕುತೂಹಲ ಮೂಡಿಸಿದೆ.

ಇನ್ನು ಮುಂಬೈ ಇಂಡಿಯನ್ಸ್​ ತಂಡದ ವಿಕೆಟ್​ ಕೀಪರ್ ಆಗಿದ್ದ ಇಶನ್ ಕಿಶನ್ ಅವರೂ ಆಕ್ಷನ್​ಗೆ ಆಗಮಿಸಿದ್ದಾರೆ. ಕಿಶನ್ ಆಕ್ಷನ್​ನಲ್ಲಿ ಬೇರೆ ತಂಡದ ಪಾಲಾಗಲಿದ್ದಾರೆ. ಮುಂಬೈ ಫ್ರಾಂಚೈಸಿ ಬೂಮ್ರಾ, ರೋಹಿತ್, ಸೂರ್ಯ, ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾರನ್ನ ತಂಡದಲ್ಲಿ ಉಳಿಸಿಕೊಂಡಿದೆ. ಕಿಶನ್ ಸೇರಿದಂತೆ ಇನ್ನು ಕೆಲ ಆಟಗಾರರನ್ನ ರಿಲೀಸ್ ಮಾಡಿದೆ.

WhatsApp Group Join Now
Telegram Group Join Now
Instagram Account Follow Now

Vivek Kudarimath, Journalist With a Work Experience of 8 years in media Field, Working with vivekvarthe since 15-08-2015

Leave a Comment