ವಿವೇಕವಾರ್ತೆ : ಹುಬ್ಬಳ್ಳಿ ನಗರದಲ್ಲಿ ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ವ್ಯಕ್ತಿಯೋರ್ವನಿಂದ 96 ಸಾವಿರ ರೂಪಾಯಿ ಪಡೆದು ವಂಚಿಸಿರುವ ಘಟನೆ ನಡೆದಿದೆ.
ರಂಜೀತನಾಥ ಎಂಬುವರು ವಂಚನೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಫೇಸ್‌ಬುಕ್ ಮೂಲಕ ಅಪರಿಚಿತರು ಅವರಿಗೆ ಕರೆ ಮಾಡಿ ಬೆತ್ತಲೆ ಇರುವ ದೃಶ್ಯವನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಬಳಿಕ ಈ ದುಷ್ಕರ್ಮಿಗಳು ಅಶ್ಲೀಲ ದೃಶ್ಯ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ಒಪ್ಪದಿದ್ದಾಗ ಅಶ್ಲೀಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಕುಟುಂಬದವರಿಗೂ ಸಹ ಈ ದೃಶ್ಯವನ್ನು ತೋರಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆ ರಂಜೀತನಾಥ 96 ಸಾವಿರ ರೂಪಾಯಿ ಕೊಟ್ಟಿದ್ದು, ಮತ್ತೆ ಹಣದ ಬೇಡಿಕೆ ಇಟ್ಟ ಹಿನ್ನೆಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.