spot_img
spot_img
spot_img
spot_img
spot_img
spot_img

ಹಸಿ ಈರುಳ್ಳಿ ತಿನ್ನುವವರು ಇದನ್ನೊಮ್ಮೆ ಓದಿ..

Published on

spot_img

ವಿವೇಕವಾರ್ತೆ :ನೀವು ಊಟದ ಜೊತೆಗೆ ಹಸಿ ಈರುಳ್ಳಿಯನ್ನು ಸೇವಿಸುತ್ತಿದ್ದರೆ, ಇತ್ತೀಚಿಗೆ ಮಾಡಿದ ಸಂಶೋಧನೆಯಲ್ಲಿ ಹಸಿ ಈರುಳ್ಳಿಯ ಯಾವ ಯಾವ ಲಾಭಗಳು ಮಾನವನ ದೇಹಕ್ಕೆ ಆಗುತ್ತದೆಂಬುದು ಇಲ್ಲಿ ಹೇಳಲಾಗಿದೆ.

ಪ್ರೀಯ ಓದುಗರೇ ಹಸಿ ಈರುಳ್ಳಿ ಇದು ಬೇಯಿಸಿದ ಅಥವಾ ಕುದಿಸಿದ ಮತ್ತು ಅಡುಗೆಯಲ್ಲಿ ಉಪಯೋಗಿಸಿದ ಈರುಳ್ಳಿಗಿಂತಲೂ ತುಂಬಾ ಜಾಸ್ತಿ ಲಾಭಕಾರಿ ಆಗಿರುತ್ತೆ. ಹಸಿ ಈರುಳ್ಳಿಯ ಸೇವನೆಯಿಂದ ದೇಹಕ್ಕೆ ಆಗುವ ಅನೇಕ ಲಾಭಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ಅವುಗಳು ಯಾವುವು ಇಲ್ಲಿ ಒಮ್ಮೆ ನೋಡಿ.

ಡಯಾಬಿಟಿಸ್:- ಹಸಿ ಈರುಳ್ಳಿಯ ಸೇವನೆಯಿಂದ ದೇಹವು ಡಯಾಬಿಟಿಸ್ ನಿಂದ ಸೌರಕ್ಷಣೆ ಪಡೆಯುತ್ತದೆ. ಯಾರು ಹಸಿ ಈರುಳ್ಳಿ ಸೇವನೆಯನ್ನು ಹೆಚ್ಚಾಗಿ ಮಾಡುತ್ತಾರೋ ಅವರಲ್ಲಿ ಇನ್ಸುಲಿನ್ ನ ಹರಿಯುವಿಕೆ ದೊಡ್ಡ ಪ್ರಮಾಣದಲ್ಲಿ ಆಗುತ್ತದೆ. ಹೀಗಾಗಿ ಈ ರೀತಿಯ ಜನರಿಗೆ ಡಯಾಬಿಟಿಸ್ ನಿಂದ ಸಂರಕ್ಷಣೆ ಸಿಗುತ್ತದೆ.

ಅಧಿಕ ರಕ್ತದೊತ್ತಡ:- ಯಾರಿಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇದೆಯೋ ಅಂಥವರು ತಮ್ಮ ಆಹಾರದಲ್ಲಿ ನಿಯಮಿತವಾಗಿ ಹಸಿ ಈರುಳ್ಳಿಯನ್ನು ಉಪಯೋಗಿಸಬೇಕು. ಇದರಿಂದ ರಕ್ತ ವಾಹಿನಿಗಳು ಚೆನ್ನಾಗಿದ್ದು ಅದರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗಿ ಹೃದಯವನ್ನು ನಿರೋಗಿಯಾಗಿಡುತ್ತದೆ. ಮತ್ತು ಹೈ ಬಿಪಿ ನಾರ್ಮಲ್ ಲೆವೆಲ್ ಗೆ ಇಡುತ್ತದೆ.

ಕೊಲೆಸ್ಟ್ರೋಲ್:- ನಮ್ಮ ಶರೀರದಲ್ಲಿ ಎರಡು ಪ್ರಕಾರದ ಕೊಲೆಸ್ಟ್ರಾಲ್ ಇರುತ್ತದೆ. ಒಂದು ಒಳ್ಳೆಯದು ಇನ್ನೊಂದು ಬ್ಯಾಡ್ ಕೊಲೆಸ್ಟ್ರಾಲ್. ಯಾರು ಹಸಿ ಈರುಳ್ಳಿಯ ಸೇವನೆಯನ್ನು ಮಾಡುತ್ತಾರೆಯೋ ಅವರ ದೇಹದಲ್ಲಿಯ ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆಯಾಗಿ ಗುಡ್ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ.

ಈರುಳ್ಳಿಯಲ್ಲಿ ಅಮಿನೋ ಏಸಿಡ್ಸ್ ಮತ್ತು ಮಿಥಿಲ್ ಸಲ್ಫಾಯಿಡ್ಸ್ ಘಟಕಗಳು ಪ್ರಾಮುಖ್ಯವಾಗಿ ಇರುತ್ತವೆ. ಇವೆರಡು ದೇಹದಲ್ಲಿ ಗುಡ್ ಕೊಲೆಸ್ಟ್ರಾಲ್ ಹೆಚ್ಚಿಸಿ ಬ್ಯಾಡ್ ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತವೆ.

ಅನೀಮಿಯಾ ಕಡಿಮೆಯಾಗಲು:– ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಅನಿಮಿಯದಿಂದ ರಕ್ಷಣೆಯಾಗುತ್ತದೆ. ಈ ಸಮಸ್ಯೆ ಸ್ತ್ರೀಯರಲ್ಲಿ ಹೆಚ್ಚು ಕಂಡುಬರುತ್ತದೆ. ನಿಯಮಿತವಾಗಿ ಹಸಿ ಈರುಳ್ಳಿಯ ಸೇವನೆ ಮಾಡುವುದರಿಂದ ಅನಿಮಿಯ ರೋಗವನ್ನು ದೂರವಿಡಬಹುದಾಗಿದೆ.

ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳು:- ಬೇಸಿಗೆಯಲ್ಲಿ ಸುಡು ಬಿಸಿಲಿನಿಂದಾಗಿ ಮೂತ್ರ ಮಾಡುವಾಗ ಉರಿಯುವ ಸಮಸ್ಯೆ ತಲೆದೋರುತ್ತದೆ. ಆಹಾರದಲ್ಲಿ ಹಸಿ ಈರುಳ್ಳಿ ತಿನ್ನುವುದರಿಂದ ಈ ಸಮಸ್ಯೆ ದೂರವಾಗುತ್ತದೆ.

ಗಂಟಲಿನಲ್ಲಿ ಕೆರೆತ ಮತ್ತು ಶೀತ:- ಗಂಟಲಿನಲ್ಲಿ ಶೀತದಿಂದಾಗಿ ಕೆರೆತ ಸಮಸ್ಯೆ ಉಂಟಾಗಿದ್ದರೆ ಅಥವಾ ಮೇಲಿಂದ ಮೇಲೆ ಶೀತ ಬಾಧೆಯಾಗುತ್ತಿದ್ದರೆ ಈರುಳ್ಳಿಯ 1 ಚಮಚ ರಸದಲ್ಲಿ 1 ಚಮಚ ಜೇನತುಪ್ಪಿನ ರಸವನ್ನು ಕೂಡಿಸಿ ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಸೇವಿಸಬೇಕು. ಹೀಗೆ ಒಂದು ವಾರ ಮಾಡುವುದರಿಂದ ಗಂಟಲಿನ ಸಮಸ್ಯೆ ನಿವಾರಣೆಯಾಗುತ್ತದೆ.

ಒಸಡಿನಿಂದ ರಕ್ತಸ್ರಾವ:– ಹಸಿ ಈರುಳ್ಳಿಯ ಸೇವನೆಯಿಂದ ವಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ ಕಡಿಮೆಯಾಗುವುದು. ಹೇಗೆಂದರೆ ಈರುಳ್ಳಿಯನ್ನು ಸ್ವಲ್ಪ ಬೆಚ್ಚಗೆ ಮಾಡಿ ರಕ್ತಸ್ರಾವವಾಗುವ ಜಾಗದ ಮೇಲೆ ನಾಲ್ಕರಿಂದ ಐದು ನಿಮಿಷ ಇಡಬೇಕು. ಇದರಿಂದ ರಕ್ತಸ್ರಾವ ನಿಲ್ಲುವುದು.

ಮೂಗಿನಿಂದ ರಕ್ತಸ್ರಾವ:– ಬೇಸಿಗೆಯಲ್ಲಿ ಬಿಸಿಲಿನ ಬೇಗೆಯಿಂದ ಅನೇಕರ ಮೂಗಿನಿಂದ ರಕ್ತಸ್ರಾವವಾಗಲು ಶುರುವಾಗುತ್ತದೆ. ಅಥವಾ ಮೂಗು ಒಡೆಯುತ್ತದೆ. ಯಾರು ದಿನಂಪ್ರತಿ ಹಸಿ ಈರುಳ್ಳಿಯನ್ನು ಸೇವಿಸುತ್ತಾರೆ ಅವರ ಮೂಗು ಒಡೆಯುವುದು ಕಡಿಮೆಯಾಗುತ್ತದೆ.

ಪಚನಕ್ಕೆ ಲಾಭಕಾರಿ:- ಮಲಬದ್ಧತೆಯ ಸಮಸ್ಯೆ ಇರುವವರು ಹಾಗೂ ಕಫ್ ಮತ್ತು ಎಸಿಡಿಟಿಯ ಸಮಸ್ಯೆ ಮೇಲಿಂದ ಮೇಲೆ ಆಗುತ್ತಿದ್ದರೆ ರಾತ್ರಿಯ ಊಟದಲ್ಲಿ ಈರುಳ್ಳಿಯನ್ನು ಸಲಾಡ್ ರೀತಿಯಲ್ಲಿ ಉಪಯೋಗಿಸಬೇಕು. ಇದರಿಂದ ಮಲಬದ್ಧತೆಯ ಸಮಸ್ಯೆ ದೂರಾಗುವುದು. ಏಕೆಂದರೆ ಈರುಳ್ಳಿಯಲ್ಲಿ ಫೈಬರ್ ಪ್ರಮಾಣ ಹೆಚ್ಚಾಗಿರುವುದರಿಂದ ಹೊಟ್ಟೆ ಹಗುರವಾಗಲು ಸಹಾಯವಾಗುತ್ತದೆ. ಅನ್ನ ನಳಿಕೆಯಲ್ಲಿ ಹತ್ತಿಕೊಂಡಿರುವ ಜಿಗುಟಾದ ಅನ್ನವನ್ನು ತೆಗೆದುಹಾಕುತ್ತದೆ. ಹಾಗೂ ಅನ್ನ ನಳಿಕೆಯು ಸ್ವಚ್ಛವಾಗುತ್ತದೆ. ಹಸಿ ಈರುಳ್ಳಿಯು ಅನ್ನ ನಳಿಕೆಯನ್ನು ಸ್ವಚ್ಛ ಮಾಡುವ ಕೆಲಸ ಮಾಡುತ್ತದೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!