Sunday, October 1, 2023

ನ್ಯಾಯ ಕೇಳಲು ಹೋದ ಗ್ರಾಮಸ್ಥರಿಗೆ ಇದೆಂಥಾ ಶಿಕ್ಷೆ..? ವೈರಲ್ ಆಯ್ತು ವಿಡಿಯೋ

ವಿವೇಕವಾರ್ತೆ : ಉತ್ತರ ಪ್ರದೇಶದ ಬರೇಲಿಯಲ್ಲಿರುವ ಮೀರ್​ಗಂಜ್​​ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಸರ್ಕಾರಿ ಅಧಿಕಾರಿಯು ದೂರದಾರನನ್ನು ಹುಂಜದಂತೆ ಮಂಡಿಯೂರಿ ಕುಳಿತುಕೊಳ್ಳುವ ಶಿಕ್ಷೆ ನೀಡಿದ್ದು, ಈ ಘಟನೆಯ ವಿಡಿಯೋ ಇದೀಗ ವೈರಲ್​ ಆಗಿದೆ. ವಿಡಿಯೋದಲ್ಲಿ ಎಸ್​ಡಿಎಂ ತನ್ನ ಖುರ್ಚಿಯಲ್ಲಿ ಕುಳಿತಿರೋದನ್ನ ಕಾಣಬಹುದಾಗಿದೆ. ಹಾಗೂ ದೂರದಾರನು ಮಂಡಿಯೂರಿದ್ದನ್ನು ಸಹ ನೋಡಬಹುದಾಗಿದೆ.

ಎಸ್​ಡಿಎಂನನ್ನು ಉದಿತ್​ ಪವಾರ್​ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸಿ ಎಂಬ ಬೇಡಿಕೆಯಿಟ್ಟುಕೊಂಡು ಎಸ್​ಡಿಎಂಗೆ ಬಂದಿದ್ದರು ಎನ್ನಲಾಗಿದೆ. ಅತಿಕ್ರಮಣವಾಗಿದೆ ಎನ್ನಲಾದ ಭೂಮಿಯು ಸದ್ಯ ಸ್ಮಶಾನವಾಗಿ ಬಳಕೆಯಾಗುತ್ತಿದೆ ಎನ್ನಲಾಗಿದೆ.

ಆದರೆ, ಎಸ್‌ಡಿಎಂ ಉದಿತ್ ಪವಾರ್ ಹೇಳಿಕೆಯಲ್ಲಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದೆಲ್ಲ ಕೇವಲ ಒಂದು ಕಟ್ಟುಕತೆಯಾಗಿದೆ. ನಮ್ಮ ಗ್ರಾಮದಲ್ಲಿ ಶವಸಂಸ್ಕಾರ ಭೂಮಿಯು ಅಕ್ರಮ ಒತ್ತುವರಿ ಮಾಡಿದ ಭೂಮಿಯಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಅವರೇ ಏಕಾಏಕಿ ನನ್ನ ಎದುರು ಮಂಡಿಯೂರಿ ಕುಳಿತಿದ್ದಾರೆ. ಒಂದು ವೇಳೆ ಆ ಭೂಮಿ ಒತ್ತುವರಿಯಾಗಿದ್ದು ಎಂಬುದು ಸಾಬೀತಾದರೆ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಅಲ್ಲಿಯವರೆಗೆ ಗ್ರಾಮಸ್ಥರು ತಾಳ್ಮೆಯಿಂದ ಕಾಯಬೇಕು ಎಂದು ಹೇಳಿದ್ದಾರೆ.

https://twitter.com/Benarasiyaa/status/1702724513425924116?ref_src=twsrc%5Etfw%7Ctwcamp%5Etweetembed%7Ctwterm%5E1702724513425924116%7Ctwgr%5E0384df95caa90a6b510c72946847c0b8d5b9e651%7Ctwcon%5Es1_c10&ref_url=http%3A%2F%2Fapi-news.dailyhunt.in%2F

RELATED ARTICLES

ಭಾರತದಲ್ಲಿ ಈ ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಹೆಚ್ಚು ʻಅಶ್ಲೀಲ ಚಿತ್ರʼ ವೀಕ್ಷಿಸುತ್ತಾರೆ : ತಜ್ಞರಿಂದ ಆತಂಕಕಾರಿ ಮಾಹಿತಿ.!

ವಿವೇಕ ವಾರ್ತೆ : ಭಾರತದಲ್ಲಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪೋರ್ನ್ ವೀಕ್ಷಿಸುತ್ತಿದ್ದಾರೆ. ಚಿಕ್ಕ ಮಕ್ಕಳು ಪೋರ್ನ್ ನೋಡುತ್ತಿದ್ದು, ಅಶ್ಲೀಲತೆಗೆ ಗುರಿಯಾಗುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಪೋರ್ನ್ ಸೈಟ್‌ಗಳನ್ನು ನಿರ್ಬಂಧಿಸುವ ನಿಯಮಗಳ ಹೊರತಾಗಿಯೂ,...

ಬುದ್ದಿಮಾತು ಹೇಳಿದ ಪೋಷಕರು ; ವಿಷ ಕುಡಿದು ಸಾವಿಗೀಡಾದ 19 ರ ಯುವತಿ.!

ವಿವೇಕವಾರ್ತೆ : ಪೋಷಕರು ಬುದ್ಧಿವಾದ ಹೇಳಿದ್ದರಿಂದ ನೊಂದ ಬಿ.ಎ ಪದವಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟನೆ ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರು ಗ್ರಾ.ಪಂ. ವ್ಯಾಪ್ತಿಯ ಹರಾವರಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು...

ಲೋಕಾಯುಕ್ತ ಬಲೆಗೆ ಬಿದ್ದ BBMP ಸಹಾಯಕ ಕಂದಾಯ ಅಧಿಕಾರಿ.!

ವಿವೇಕವಾರ್ತೆ : ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್...
- Advertisment -

Most Popular

ನೋಡ ನೋಡುತ್ತಿದ್ದಂತೆಯೇ ಹೂವು ನುಂಗುವ ಗಣೇಶ ಮೂರ್ತಿ ; ಅಚ್ಚರಿಯ ವಿಡಿಯೋ ವೈರಲ್.!

ವಿವೇಕವಾರ್ತೆ : ಗಣೇಶನ ಮೂರ್ತಿ ಹಾಲು ಕುಡಿಯೋದನ್ನ ಕೇಳಿದ್ದೇನೆ, ನೀರು ಕುಡಿಯೋದನ್ನು ಕೇಳಿದ್ದೇವೆ. ಆದರೆ ಇಲ್ಲೋಬ್ಬ ಗಣೇಶ ತನಗೆ ಇಡಿಸಿದ ಹೂವನ್ನೇ ನುಂಗುತ್ತಿದ್ದಾನೆ. ಹೌದು, ಇಂಥದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಲೋಕಾಯುಕ್ತ ಬಲೆಗೆ ಬಿದ್ದ BBMP ಸಹಾಯಕ ಕಂದಾಯ ಅಧಿಕಾರಿ.!

ವಿವೇಕವಾರ್ತೆ : ಬಿಬಿಎಂಪಿಯ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿಯ ಸಹಾಯಕ ಕಂದಾಯ ಅಧಿಕಾರಿ ಚಂದ್ರಪ್ಪ ಬೀರಜ್ಜನವರ್ ಮತ್ತು ಗೋಪಾಲ್...
error: Content is protected !!