ವಿವೇಕವಾರ್ತೆ : ಈ ಬಾರಿ ಲೋಕಸಭೆ ಚುನಾವಣೆಗೆ ತಮಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ.
ಅವರು ಇಂದು ಚಿಕ್ಕೋಡಿಯ ನಂದಗಾಂವ ಗ್ರಾಮದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಎಲೆಕ್ಷನ್ ಬಂದಾಗ ಆಕ್ಟೀವ್ ಆಗೋದು ಏನು ಪ್ರಶ್ನೆ ಇರುವುದಿಲ್ಲ.
ಮದುವೆ ಮಾಡಿಕೊಳ್ಳುವ ಟೈಮ್‌ನಲ್ಲಿ ಹುರುಪು ಏನೂ ಇರುವುದಿಲ್ಲ. 18 ರಿಂದ 20 ವಯಸ್ಸು ಆಯಿತೆಂದರೆ ಮದುವೆ ಆಗುತ್ತದೆ ಅಂತ ಸ್ವಾಭಾವಿಕವಾಗಿ ಗೊತ್ತಿರುತ್ತದೆ ಎಂದರು.
ಚುನಾವಣೆ ಬಂದಾಗ ಸ್ವಾಭಾವಿಕವಾಗಿ ಅಲ್ಲಿ ಇಲ್ಲಿ ಮಾತನಾಡುತ್ತಾರೆ. ಮಾಧ್ಯಮಗಳಲ್ಲಿ ಹಾಗೇ ಬರೀತಾರೆ, ನಾನಂತೂ ಎಲ್ಲಿಯೂ ಹೇಳಿಲ್ಲ. ಪಕ್ಷದವರು ಕಳೆದ ಬಾರಿ ವಂಚಿತ ಆಗಿದ್ದಾನೆ, ಬಳಿಕ ರಾಜ್ಯಸಭಾ ಸ್ಥಾನ ಕೊಡುತ್ತೇವೆ ಅಂತ ಹೇಳಿದ್ದರು. ಎಂಎಲ್ಸಿ ಸ್ಥಾನ ಕೊಡುತ್ತೇವೆ ಅಂತ ಹೇಳಿದ್ದರು. ಅದಕ್ಕೆ ವಂಚಿತ ಆಗಿದ್ದೇನೆ. ಎಲ್ಲಾ ಗಮನದಲ್ಲಿಟ್ಟುಕೊಂಡು ಪಕ್ಷ ನನಗೆ ಟಿಕೆಟ್ ನೀಡುವ ಆಸೆ ನನ್ನಲ್ಲಿದೆ. ಬಿಜೆಪಿಯವರು ಟಿಕೆಟ್ ಕೊಡುವ ನಂಬಿಕೆ ನನ್ನಲ್ಲಿ ಇದೆ. ಜಿಲ್ಲೆಯ ಜನ ಏನು ಹೇಳುತ್ತಾರೆ ಅದರಂತೆ ಅವರ ಸೇವೆಗೆ ಸನ್ನದ್ಧನಾಗುವೆ. ನಾನು ಭವಿಷ್ಯಕಾರನಲ್ಲ, ಆದರೆ ಆತ್ಮವಿಶ್ವಾಸ ಮಾತ್ರ ನನ್ನಲ್ಲಿ ಇದೆ ಎಂದರು.
ಕಳೆದ ಬಾರಿ ನನಗೆ ಟಿಕೆಟ್ ಸಿಗುವ ಆತ್ಮವಿಶ್ವಾಸ ಇತ್ತು, ಆದರೆ ಪಕ್ಷದ ವರಿಷ್ಠರು ಬೇರೆಯವರಿಗೆ ಕೊಡುತ್ತೇವೆ ಸುಮ್ಮನಿರು ಅಂದಿದ್ದರು. ಆ ಪ್ರಕಾರ ಸುಮ್ಮನಾದೆ, ಈಗ ಮತ್ತೆ ನನಗೆ ಟಿಕೆಟ್ ಕೊಡುತ್ತಾರೆ ಎಂಬ ಆತ್ಮವಿಶ್ವಾಸ ಇದೆ ತಿಳಿಸಿದರು.