ವಿವೇಕವಾರ್ತೆ : ಫಕುಲಿ ಔಟ್‌ಪೋಸ್ಟ್ ಪ್ರದೇಶದ ಧೋಧಿ ಕಾಲುವೆ ಸೇತುವೆಯ ಬಳಿ ಅಪಘಾತಕ್ಕೀಡಾದ ವ್ಯಕ್ತಿಯ ಅವಶೇಷಗಳನ್ನು ಕಾಲುವೆಗೆ ಎಸೆಯುವಾಗ ಕ್ಯಾಮರಾದಲ್ಲಿ ಸೆರೆಯಾದ ಮೂವರು ಪೊಲೀಸರನ್ನು ಅಮಾನತುಗೊಳಿಸಿದ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ವರದಿಯಾಗಿದೆ.
ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮೂವರು ಪೊಲೀಸರನ್ನು ಬಂಧಿಸುವಲ್ಲಿ ಬಿಹಾರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮುಜಾಫರ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಕಚೇರಿಯ ಹೇಳಿಕೆಯ ಪ್ರಕಾರ, “ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿದೆ ಮತ್ತು ಅದು ನಿಜವೆಂದು ಸ್ಪಷ್ಟವಾಗಿದೆ. ಇದು ದುರದೃಷ್ಟಕರ ಘಟನೆ ಮತ್ತು ಅಲ್ಲಿದ್ದ ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫಲರಾಗಿದ್ದಾರೆ. ಇವರೊಟ್ಟಿಗೆ ಭಾಗಿಯಾಗಿದ್ದ ಚಾಲಕ ಕಾನ್ಸ್‌ಟೇಬಲ್‌ನನ್ನು ಅಮಾಗೊಳಿಸಲಾಗಿದೆ.
ಇಬ್ಬರು ಗೃಹರಕ್ಷಕ ದಳದ ಜವಾನರ ಗುತ್ತಿಗೆಯನ್ನು ರದ್ದುಗೊಳಿಸಲಾಗಿದ್ದು, ರಕ್ಷಿಸಬಹುದಾದ ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಲಿಪಶುವಿನ ಗುರುತನ್ನು ಇಲ್ಲಿಯವರೆಗೂ ಖಚಿತಪಡಿಸಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).