ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳನ (CCTV) ಪ್ರಕರಣ ಬೆಳಕಿಗೆ ಬಂದಿದ್ದು,ಚಡ್ಡಿ ಗ್ಯಾಂಗ್,ಬೆಡ್ ಶೀಟ್ ಗ್ಯಾಂಗ್ ಆಯ್ತು ನಗರಕ್ಕೆ ಬೆತ್ತಲೆ ಗ್ಯಾಂಗ್ ಎಂಟ್ರಯಾಗಿಯಾ ಎಂಬ ಅನುಮಾನ ಕಾಡಿದೆ. ಐನಾತಿ ಕಳ್ಳನೊಬ್ಬ ಪೊಲೀಸರ ಯಾಮಾರಿಸಲು ಹೊಸ ದಾರಿ ಹುಡುಕಿದ್ದಾನೆ.
IPL 2025 ದ್ವಿತಿಯಾರ್ಧಕ್ಕೆ ಕೌಂಟ್ ಡೌನ್: ನಿಯಮ ಬದಲಿಸಿದ BCCI! ಏನದು??
ಹೌದು ನಗರದ ಬೊಮ್ಮನಹಳ್ಳಿಯಲ್ಲಿ ಕಳ್ಳನೊಬ್ಬ ಬೆತ್ತಲೆಯಾಗಿ ಬಂದು, ಗೋಡೆ ಕೊರೆದು ಕಳ್ಳತನ ಮಾಡಿರುವಂತ ಘಟನೆ ನಡೆದಿದೆ. ಮುಖಕ್ಕೆ ಮಾಸ್ಕ್ ಧರಿಸಿ ಬೆತ್ತಲೆಯಾಗಿ ಎಂಟ್ರಿ ಕೊಟ್ಟು ಕೃತ್ಯವೆಸಗಿ ಪರಾರಿಯಾಗಿದ್ದಾನೆ. ಮೊಬೈಲ್ ಶಾಪ್ ನುಗ್ಗಿ ಬರೋಬ್ಬರಿ 85 ಮೊಬೈಲ್ ಎಗರಿಸಿದ್ದಾನೆ.
SDA ಅಧಿಕಾರಿ ಮನೆ ಮೇಲೆ ಲೋಕಾ ದಾಳಿ: ಲಕ್ಷ, ಲಕ್ಷ ಕ್ಯಾಶ್ – ಕೆಜಿಗಟ್ಟಲೇ ಚಿನ್ನ, ಬೆಳ್ಳಿ ಪತ್ತೆ..!
ದಿನೇಶ್ ಎಂಬುವವರ ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್ನಲ್ಲಿ ಕೃತ್ಯವೆಸಗಲಾಗಿದೆ. ಅನೇಕ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳ ಬಟ್ಟೆಯ ಜಾಡು ಹಿಡಿಯುತ್ತಾರೆ. ಹಾಗಾಗಿ ಪೊಲೀಸರಿಗೆ ಯಾಮಾರಿಸಲು ಬೆತ್ತಲೆಯಾಗಿ ಕಳ್ಳತನಕ್ಕಿಳಿದಿದ್ದಾನೆ. ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.