spot_img
spot_img
spot_img
spot_img
spot_img
spot_img

ಪೊಲೀಸ್​ ಭದ್ರತೆ ಭೇದಿಸಿ ಸಿಎಂ ಕಡೆ ಧಾವಿಸಿದ ವ್ಯಕ್ತಿ ಪೊಲೀಸ್​ ವಶಕ್ಕೆ!

Published on

spot_img

ಬೆಂಗಳೂರು : ನಗರದ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರು ಪೊಲೀಸರ ಬಿಗಿ ಭದ್ರತೆಯನ್ನು ಭೇದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆ ನುಗ್ಗಿದ ಘಟನೆ ನಡೆದಿದೆ.

ಏಕಾಏಕಿಯಾಗಿ ಸಿಎಂ ಬಳಿಗೆ ನುಗ್ಗಲು ಯತ್ನಿಸಿದವರು ಮೈಸೂರು ಮೂಲದ ಪರಶು ರಾಮ್ ಎಂದು ತಿಳಿದುಬಂದಿದೆ. ಬಹಳ ದಿನಗಳಿಂದ ಅವರಿಗೆ ಸಿಎಂ ಬಳಿ ಒಂದು ವಿಷಯವನ್ನು ಹೇಳಿ ಸಹಾಯ ಮಾಡಿ ಎಂದು ಕೇಳಲು ಬಂದಿದ್ದರು.

ಪರಶುರಾಮ್‌ ಅವರು ಸಿಎಂ ಬಳಿ ಕೊಡಲುದ್ದೇಶಿಸಿದ್ದ ಮನವಿಯಲ್ಲಿ ಅವರ ಅಳಿಯನಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಾತಿ ಆಗಿದೆ. ಆದರೆ, ಇನ್ನೂ ನೇಮಕಾತಿ ಆದೇಶ ಬಂದಿಲ್ಲ. ಅದನ್ನು ಆದಷ್ಟು ಬೇಗನೆ ಮಾಡಬೇಕು ಎಂದು ಆಗ್ರಹಿಸುವುದಕ್ಕಾಗಿ ಅವರು ಅಲ್ಲಿ ಬಂದಿದ್ದರು.

ಕೆಪಿಎಸ್‌ಸಿ ನೇಮಕಾತಿ ಆದೇಶ ಮಾಡಲು ವಿಳಂಬ ಮಾಡುತ್ತಿರುವುದನ್ನು ಆಕ್ಷೇಪಿಸಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಅವರು ಬಂದಿದ್ದರು. ಆದರೆ ಸಿಎಂ ಬಳಿ ಪೊಲೀಸರು ಬಿಡದಿದ್ದಾಗ ಗಣರಾಜ್ಯೋತ್ಸವ ಪರೇಡ್ ಮಧ್ಯೆದಲ್ಲೇ ನುಗ್ಗಲು ಯತ್ನಿಸಿದರು. ಪೊಲೀಸರು ಈಗ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಿದ್ದಾರೆ.

ಕೂಡಲೇ ಪೊಲೀಸರು ಆತನನ್ನು ಪಡೆದು ವಿಚಾರಣೆ ನಡೆಸಿದರು. ಸಿಎಂ ಗಮನ ಸೆಳೆಯಲು ಈ ರೀತಿ ಮಾಡಿದ್ದಾನೆ. ತನ್ನ ಕೈಯಲ್ಲಿ ಪತ್ರವೊಂದನ್ನು ಹಿಡಿದಿದ್ದ ಆತ ಅದನ್ನು ಸಿಎಂ ಕಡೆಗೆ ಎಸೆಯಲು ಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿ ಕೂಡಲೇ ಅಪಾಯವನ್ನು ಗ್ರಹಿಸಿ ಅವನನ್ನು ಹಿಡಿದುಕೊಂಡರು.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಮಹಿಳೆ ಅರೆಬೆತ್ತಲೆಗೊಳಿಸಿ ಹಲ್ಲೆ ಆರೋಪ

ವಿವೇಕವಾರ್ತೆ, ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬಹಿರಂಗವಾಗಿದೆ. ಒತ್ತುವರಿ ಪ್ರಶ್ನಿಸಿದ್ದಕ್ಕೆ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ...

Goat milk: ಮೇಕೆ ಹಾಲು ತಾಯಿ ಹಾಲಿನಷ್ಟೇ ಶ್ರೇಷ್ಠ: ನಾನಾ ಆರೋಗ್ಯ ಸಮಸ್ಯೆಗಳಿಗೆ ಇದರಲ್ಲಿದೆ ಪರಿಹಾರ..!

ಮಾರುಕಟ್ಟೆಯಲ್ಲಿ ಮೇಕೆ ಹಾಲಿಗೆ (Goat Milk) ಭಾರೀ ಡಿಮ್ಯಾಂಡ್ ಬಂದು ಬಹಳ ವರ್ಷಗಳೇ ಕಳೆಯಿತು. ಆದರೂ ಈ ಹಾಲಿನ...

ನಿಮ್ಮ ದೇಹದಲ್ಲಿ ಈ ಬದಲಾವಣೆ ಕಂಡು ಬಂದರೆ ಲಿವರ್ ಡ್ಯಾಮೇಜ್ ಎಂದರ್ಥ!

ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಬಹುತೇಕ ಜನರಲ್ಲಿ ಲಿವರ್ ಸಂಬಂಧಿತ ಸಮಸ್ಯೆಗಳು ಕಂಡುಬರುತ್ತಿವೆ. ನಿಮ್ಮ...

ಘಟಪ್ರಭಾ : ಬೈಕ್ ಅಪಘಾತ ಸವಾರ ಸ್ಥಳದಲ್ಲೇ ಸಾವು..!

ಘಟಪ್ರಭಾ : ಬೈಕಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಯುವಕ ಸಾವನ್ನಪ್ಪಿದ್ದಾನೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಡಾಣ...
error: Content is protected !!