ವಿವೇಕವಾರ್ತೆ : ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧವು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಪರಿಸ್ಥಿತಿ ನೋಡುತ್ತಿದ್ದರೆ ಕೋಡಿ ಮಠದ ಸ್ವಾಮೀಜಿ ಕಳೆದ ಎರಡು ತಿಂಗಳ ಹಿಂದೆ ನುಡಿದ ಭವಿಷ್ಯ ನಿಜವಾಗುತ್ತಿದೆಯೇ?
ಅದೇನೆಂದರೆ ಜಗತ್ತಿನಲ್ಲಿ ಒಂದು ದೇಶ ಕಣ್ಮರೆಯಾಗಲಿದೆ ಎಂಬ ಭವಿಷ್ಯ ಎರಡು ತಿಂಗಳ ಹಿಂದೆ ಶ್ರೀಗಳು ನುಡಿದಿದ್ದರು.
ಹಾಸನ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು, “ಯುದ್ದಭೀತಿ, ಬಾಂಬ್‌ಗಳು, ಭೂಕಂಪ, ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ. ಜಾಗತಿಕ ಭೂಪಟದಲ್ಲಿ ಒಂದು ದೇಶ ಕಣ್ಮರೆಯಾಗುತ್ತದೆ” ಎಂದು ಭವಿಷ್ಯ ನುಡಿದಿದ್ದರು.
ಆದರೆ, ಈ ಭವಿಷ್ಯ ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ಯುದ್ಧದಲ್ಲಿ ಒಂದು ದೇಶ ಭೂಪಟದಿಂದ ಕಣ್ಮರೆಯಾಗುವ ಭವಿಷ್ಯವನ್ನು ನಿಜ ಮಾಡುವುದೇ ಎಂಬ ಅನುಮಾನ ಮೂಡಿದೆ.
ಕಾಲಜ್ಞಾನದ ಯಾವುದೇ ಭವಿಷ್ಯ ಸುಳ್ಳಾಗಿಲ್ಲವೆಂದು ಆಗಾಗ ಭವಿಷ್ಯ ನುಡಿಯುವ ಸ್ವಾಮೀಜಿ ಅವರು, ಕಳೆದ ಎರಡು ತಿಂಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು.