spot_img
spot_img
spot_img
spot_img
spot_img
spot_img

ಜಮೀನಿಗೆ ಹೋಗುವ ದಾರಿಗೆ ಕಲ್ಲು ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾ.ಪಂ ಮಾಜಿ ಅಧ್ಯಕ್ಷನ ಹತ್ಯೆ

Published on

spot_img

ವಿವೇಕವಾರ್ತೆ: ಜಮೀನಿಗೆ ಹೋಗುವ ದಾರಿಗೆ ಕಲ್ಲು ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾಜಿ ಗ್ರಾಪಂ (Gram Panchayat) ಅಧ್ಯಕ್ಷನನ್ನು ಮಚ್ಚಿನಲ್ಲಿ ಹೊಡೆದು ಹತ್ಯೆಗೈದ ಘಟನೆ ಬೀದರಿನ ಚಿಟ್ಟಗುಪ್ಪದ ನಿರ್ಣಾ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ್ (46) ಕೊಲೆಯಾದ ದುರ್ದೈವಿ ಎಂದು ತಿಳಿದು ಬಂದಿದೆ. ಈ ವೇಳೆ ಅವರ ಮಗನ ಮೇಲೂ ಹಲ್ಲೆ ನಡೆಸಲಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದ ಲಿಂಗರಾಜು, ಕಾಶಿನಾಥ್, ಜಗನಾಥ್ ಸೇರಿದಂತೆ ಒಟ್ಟು 8 ರಿಂದ 9 ಜನ ಸೇರಿ ಮಾರಕಾಸ್ತ್ರಗಳಿಂದ ಮಲ್ಲಿಕಾರ್ಜುನ್ ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಮಲ್ಲಿಕಾರ್ಜುನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.


ಈ ಸಂಬಂಧ ಮನ್ನಾಏಖೇಳಿ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ತಲೆಮರೆಸಿಕೊಂಡಿರುವ ಕೆಲವು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕೃಪೆ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!