spot_img
spot_img
spot_img
spot_img
spot_img
spot_img

ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಬಸ್

Published on

spot_img

ವಿವೇಕವಾರ್ತೆ : ಹರಿಯಾಣದಿಂದ (Haryana) ಬರುತ್ತಿದ್ದ ಬಸ್ (Bus) ನೈನಿತಾಲ್ (Nainital) ಜಿಲ್ಲೆಯಲ್ಲಿ ಕಂದಕಕ್ಕೆ ಉರುಳಿದ ಪರಿಣಾಮ ಐವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 26 ಜನರನ್ನು ರಕ್ಷಿಸಲಾಗಿದ್ದು, ಹೆಚ್ಚಿನ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಸಿವಿಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ನೈನಿತಾಲ್‌ನ ವಿಪತ್ತು ನಿಯಂತ್ರಣಾ ಕೊಠಡಿ ಭಾನುವಾರ 30 ರಿಂದ 33 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಕಾಲಾಧುಂಗಿ ರಸ್ತೆಯ ನಲ್ನಿಯಲ್ಲಿ ಕಂದಕಕ್ಕೆ ಉರುಳಿದೆ ಎಂದು ಎಸ್‌ಡಿಆರ್‌ಎಫ್‌ಗೆ ಮಾಹಿತಿ ನೀಡಿದೆ. ಈ ಮಾಹಿತಿಯ ಮೇರೆಗೆ ಕಮಾಂಡೆಂಟ್ ಎಸ್‌ಡಿಆರ್‌ಎಫ್ ಮಣಿಕಾಂತ್ ಮಿಶ್ರಾ ಅವರ ಸೂಚನೆಯಂತೆ ಪೋಸ್ಟ್ ರುದ್ರಪುರ, ನೈನಿತಾಲ್ ಮತ್ತು ಖೈರ್ನಾದಿಂದ ಎಸ್‌ಡಿಆರ್‌ಎಫ್ ರಕ್ಷಣಾ ತಂಡಗಳು ರಕ್ಷಣೆಗಾಗಿ ಸ್ಥಳಕ್ಕೆ ತೆರಳಿದೆ.

ಬಸ್ ನಿಯಂತ್ರಣ ತಪ್ಪಿ ಸುಮಾರು 200 ಮೀಟರ್ ಆಳದ ಕಂದಕಕ್ಕೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್‌ಡಿಆರ್‌ಎಫ್ ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿ ಎನ್‌ಡಿಆರ್‌ಎಫ್, ಸ್ಥಳೀಯ ಪೊಲೀಸರು ಮತ್ತು ಇತರ ರಕ್ಷಣಾ ಘಟಕಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಬಸ್ಸಿನಲ್ಲಿದ್ದ 26 ಮಂದಿ ಗಾಯಾಳುಗಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕೃಪೆ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!