ಸರಸ್ವತಿ ದೇವಿಯ ಫೋಟೊಗೆ ಕಾಲಿನಿಂದ ಒದ್ದು ಶಿಕ್ಷಕನಿಂದ ಅವಮಾನ; ವಿಡಿಯೋ ವೈರಲ್​

ಇಲ್ಲೊಬ್ಬ ವ್ಯಕ್ತಿ ಸಿಟ್ಟಿನಿಂದ ಬೊಬ್ಬೆ ಹೊಡೆಯುತ್ತಾ, ಸರಸ್ವತಿ ದೇವಿಯ ಫೋಟೊಗೆ ಕಾಲಿನಿಂದ ಒದೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈತ ಗುಜರಾತ್​ನ ಉದಯಪುರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಗುಜರಾತ್‌ನಲ್ಲಿ ಮದ್ಯ ನಿಷೇಧವಾಗಿದ್ದರೂ ಕೆಲವೊಮ್ಮೆ ಸರ್ಕಾರಿ ನೌಕರರು ಮತ್ತು ಕೆಲವೊಮ್ಮೆ ಕುಡಿದು ವೀಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಛೋಟಾ ಉದೇಪುರ್ ಜಿಲ್ಲೆಯ ಕ್ವಾಂತ್ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಕುಡಿದ ಮತ್ತಿನಲ್ಲಿ ಶಿಕ್ಷಕನೊಬ್ಬ ಗಲಾಟೆ ಮಾಡುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ವಿಡಿಯೋದಲ್ಲಿ ಈ ಭೂಪ, ಶಿಕ್ಷಣದ ಅಧಿದೇವತೆಯಾದ ಸರಸ್ವತಿ ಮಾತೆಯ ಚಿತ್ರವನ್ನು ಕುಡಿದು ಒದೆಯುತ್ತಾನೆ.

ವಿಡಿಯೋದಲ್ಲಿ ಪಾನಮತ್ತ ಶಿಕ್ಷಕ ಶಾಲೆಯಲ್ಲಿ ಗಲಾಟೆ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದ್ದು ಈತ ಆಣೆ ಪ್ರಮಾಣ ಮಾಡುತ್ತಾ ವಸ್ತುಗಳನ್ನು ಒಡೆದು ಹಾಕುತ್ತಾನೆ. ಅಲ್ಲಿಗೆ ನಿಲ್ಲದ ಈ ಶಿಕ್ಷಕ, ಸರಸ್ವತಿ ಮಾತೆಯ ಚಿತ್ರವನ್ನೂ ಒದ್ದು ಬಿಡುತ್ತಾನೆ. ಕುಡಿದ ಶಿಕ್ಷಕನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದೇ ತಿಳಿದಿರುವುದಿಲ್ಲ. ಈ ಘಟನೆ ಕೆಲವು ದಿನಗಳ ಹಿಂದಿನದು. ಆದರೆ ಇದೀಗ ವಿಡಿಯೋ ವೈರಲ್ ಆಗಿದೆ. ಈಗ ಈ ಶಿಕ್ಷಕನನ್ನೂ ಗುರುತಿಸಲಾಗಿದ್ದು ಈತನ ಹೆಸರು ಯೋಗೇಶ್ ಎಂದು ತಿಳಿದುಬಂದಿದೆ.

ಈ ಬಗ್ಗೆ ಕರ್ನಾಟಕದ ಜನರು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು ಅನೇಕರು ಕಟುವಾದ ಶಬ್ದಗಳಲ್ಲಿ ಈತನನ್ನು ಖಂಡಿಸಿದ್ದಾರೆ.

error: Content is protected !!