ವಿವೇಕವಾರ್ತೆ :ರಾಜಧಾನಿ ಬೆಂಗಳೂರಿನಲ್ಲಿ ಏಕಕಾಲಕ್ಕೆ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದೆ.
ವಿಜಯನಗರ ಬಿಟಿಎಂ, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿ ನಡೆದಿದ್ದು, ಐಟಿ ಅಧಿಕಾರಿಗಳ 15 ಕ್ಕೂ ಹೆಚ್ಚು ತಂಡಗಳಿಂದ ದಾಳಿ ನಡೆದಿದೆ.
ಚೆನ್ನೈ, ದೆಹಲಿಯಿಂದ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿರೋ ಐಟಿ ಅಧಿಕಾರಿಗಳು, ತೆರಿಗೆ ವಂಚನೆ ಮಾಡಿರೋ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾ ಎನ್ನಲಾಗಿದೆ. ಸದ್ಯ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.