spot_img
spot_img
spot_img
spot_img
spot_img
spot_img

T20 World Cup 2024: ಯಾರಾಗಬಹುದು ಭಾರತದ ವಿಕೆಟ್ ಕೀಪರ್ !?

Published on

spot_img

ಟಿ20 ವಿಶ್ವಕಪ್ ನಲ್ಲಿ ಭಾರತದ ವಿಕೆಟ್ ಕೀಪರ್ ಯಾರಾಗಬಹುದು? ಎಂಬ ಕುತೂಹಲ ಸಾಮಾನ್ಯವಾಗಿ ಮೂಡಿದೆ.

ಭಾರತ ತಂಡದ ಬೆಂಚ್​ ಗಾತ್ರ ದೊಡ್ಡದಿದೆ. ಅದರಲ್ಲಿ ವಿಕೆಟ್​ ಕೀಪರ್​ಗಳೂ ಹಲವರಿದ್ದಾರೆ. ಹೀಗಾಗಿ ಚುಟುಕು ಮಾದರಿಯ ಕ್ರಿಕೆಟ್​ನಲ್ಲಿ ಯಾರು ವಿಕೆಟ್​ಗಳ ಹಿಂದಿನ ಜವಾಬ್ದಾರಿ ವಹಿಸಿಕೊಳ್ಳಬಹುದು ಎಂಬ ಚರ್ಚೆಗಳು ಆರಂಭಗೊಂಡಿವೆ.

ಭಾರತ ತಂಡದಲ್ಲಿರುವ ವಿಕೆಟ್​​ಕೀಪರ್​ಗಳು ಒಬ್ಬರಿಗಿಂತ ಒಬ್ಬರು ಬಲಶಾಲಿಗಳಾಗಿರುವ ಕಾರಣ ಯಾರಿಗೆ ಆಯ್ಕೆ ಮಂಡಳಿ ಮಣೆ ಹಾಕಬಹುದು ಎಂಬುದೇ ಕುತೂಹಲದ ಸಂಗತಿ. ಹಾಗಾದರೆ ಟಿ20 ತಂಡಕ್ಕೆ ಆಯ್ಕೆಯಾಗಬಹುದಾದ ವಿಕೆಟ್​ಕೀಪರ್​ಗಳು ಹಾಗೂ ಅವರ ಸಾಮರ್ಥ್ಯಗಳ ಬಗ್ಗೆ ನೋಡೋಣ.

ಕೇರಳದ ಸ್ಪೋಟಕ ಬ್ಯಾಟ್ಸ್ಮನ್ ಟಿ20 ಐ ತಂಡದ ಉದ್ದೇಶಿತ ಆಟಗಾರ. ಅವರು ಆಗಾಗ ತಮ್ಮ ಪ್ರತಿಭೆ ಪ್ರದರ್ಶಿಸುತ್ತಾರೆ. ಆದರೆ ಅವರ ಬ್ಯಾಟಿಂಗ್​ನಲ್ಲಿ ಸ್ಥಿರತೆಯ ಕೊರತೆಯಿದೆ. ಏಕದಿನ ಪಂದ್ಯಗಳಲ್ಲಿ ಅವರ ಚೊಚ್ಚಲ ಅಂತರರಾಷ್ಟ್ರೀಯ ಶತಕದ ಹಿನ್ನೆಲೆಯಲ್ಲಿ ವಿಶ್ವ ಕಪ್​ಗೆ ಮುಂಚಿತವಾಗಿ ನಡೆದ ಅಫಘಾನಿಸ್ತಾನ ವಿರುದ್ಧದ ಟಿ20ಐ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧದ ತಂಡದಲ್ಲಿ ಅವರ ಮಿಶ್ರ ಪ್ರದರ್ಶನವು ಅವರ ಸ್ಥಾನದ ಬಗ್ಗೆ ಕುತೂಹಲಕ್ಕೆ ಕಾರಣವಾಗಿದೆ.

ವಿದರ್ಭದ ಉದಯೋನ್ಮುಖ ತಾರೆ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ಸ್ಟ್ರೈಕ್ ರೇಟ್ ಮೇಲೆ ಗಮನ ಹರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅವರ ಉಪಯುಕ್ತ ಇನಿಂಗ್ಸ್​ಗಳು ಆಯ್ಕೆಗಾರರ ಕಣ್ಣು ಅವರತ್ತ ನೆಡುವಂತೆ ಮಾಡಿತು. ದಕ್ಷಿಣ ಆಫ್ರಿಕಾ ವಿರುದ್ಧದ ನಿರಾಶಾದಾಯಕ ಪ್ರದರ್ಶನವು ಅಲ್ಪ ಹಿನ್ನಡೆಯಾಗಿದೆ. ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಸರಣಿ ಮತ್ತು ಐಪಿಎಲ್ 2024 ಅವರಿಗೆ ಮತ್ತೊಂದು ನಿರ್ಣಾಯಕ ಪರೀಕ್ಷೆಯಾಗಿದೆ.

ಒಂದು ಕಾಲದಲ್ಲಿ ವಿಕೆಟ್ ಕೀಪರ್ ಜವಾಬ್ದಾರಿಯಲ್ಲಿ ಮುಂಚೂಣಿಯಲ್ಲಿದ್ದ ಯುವ ಆಟಗಾರ ಮಾನಸಿಕ ಆಯಾಸದಿಂದಾಗಿ ವಿರಾಮವನ್ನು ಕೋರಿದ್ದಾರೆ. ಎಡೆಬಿಡದ ವೇಳಾಪಟ್ಟಿ ಮತ್ತು ಅಸಮಂಜಸ ಆಟದ ಸಮಯವು ಅವರ ಮೇಲೆ ಪರಿಣಾಮ ಬೀರಿದೆ ಎಂದು ಕಾಣುತ್ತದೆ. ಅಫ್ಘಾನಿಸ್ತಾನ ತಂಡದಿಂದ ಅವರನ್ನು ಹೊರಗಿಡುವುದು ಯೋಜನೆಯಾಗಿದೆ. ಆದರೆ, ಬಲವಾದ ಐಪಿಎಲ್ ಪ್ರದರ್ಶನವು ಅವರ ಅವಕಾಶಗಳನ್ನು ಹೆಚ್ಚಿಸಬಹುದು.

ಸ್ಫೋಟಕ ವಿಕೆಟ್ ಕೀಪರ್ ಬ್ಯಾಟರ್​​ ಕಳೆದ ವರ್ಷ ಸಂಭವಿಸಿದ ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2024ರ ಸಮಯದಲ್ಲಿ ಮರಳುವ ನಿರೀಕ್ಷೆಯಿದೆ. ಅವರು ಬ್ಯಾಟಿಂಗ್​ನಲ್ಲಿ ಯಶಸ್ವಿ ಋತುವನ್ನು ಹೊಂದಿದ್ದರೆ, ಅವರನ್ನು ವಿಶ್ವಕಪ್ ತಂಡದಲ್ಲಿ ಸೇರಿಸಲು ಕರೆಗಳು ಬರಬಹುದು. ಅವರ ಫಿಟ್ನೆಸ್ ಮತ್ತು ಫಾರ್ಮ್ ಬಗ್ಗೆ ಇನ್ನೂ ಗೊಂದಲಗಳಿವೆ.

ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಟೆಸ್ಟ್ ಫಾರ್ಮ್ ಅನ್ನು ಪರಿಗಣಿಸಿ ಅವರಿಗೆ ವಿಕೆಟ್​ಕೀಪಿಂಗ್​ನಿಂದ ಮುಕ್ತರನ್ನಾಗಿ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಕೆಎಲ್ ರಾಹುಲ್​ಗೆ ಟೆಸ್ಟ್ ಮತ್ತು ಬಹುಶಃ ಟಿ20 ಸ್ವರೂಪದಲ್ಲಿ ತಮ್ಮ ಬ್ಯಾಟಿಂಗ್ ಮೇಲೆ ಮಾತ್ರ ಗಮನ ಹರಿಸಲು ಅವಕಾಶ ಸಿಗುತ್ತದೆ. ಈ ಮೂಲಕವೂ ಅವರು ವಿಕೆಟ್​ಕೀಪಿಂಗ್ ಅವಕಾಶ ಪಡೆಯಬಹುದು.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!