ಶಿಂಧಿಕುರಬೇಟ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಸಾಥ್ ನೀಡಿದ ಎಂಡಿಸಿ

ಘಟಪ್ರಭಾ- ಸಮೀಪದ ಶಿಂಧಿಕುರಬೇಟ ಗ್ರಾಮದಲ್ಲಿ ನಿನ್ನೆ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಮಹಾಂತೇಶ ಕಡಾಡಿ ಅವರ ಪರವಾಗಿ ಯುವನಾಯಕರಾದ ಮಲ್ಲಿಕಾರ್ಜುನ ದುಂಡಪ್ಪಾ ಚೌಕಾಶಿ (ಎಂಡಿಸಿ) ಅವರು ಪ್ರಚಾರ ಮಾಡಿದರು.

ಡಾ.ಮಹಾಂತೇಶ ಕಡಾಡಿ ಹಾಗೂ ಎಂಡಿಸಿ ಆತ್ಮೀಯ ಸ್ನೇಹಿತರು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ, ಹಾಗೂ ಗೋಕಾಕ ಮತಕ್ಷೇತ್ರದಲ್ಲಿ ಚೌಕಾಶಿ ಕುಟುಂಬದ ಹಿಡಿತ ಸಾಕಷ್ಟಿದೆ, ಎಂಡಿಸಿಯವರ ತಂದೆ ಶ್ರೀ ದುಂಡಪ್ಪ ಚೌಕಾಶಿ ಜಿಲ್ಲಾ ಪಂಚಾಯತಿಗೆ ಆಯ್ಕೆಯಾದವರು, ಹಾಗೂ ಅವರ ಚಿಕ್ಕಮ್ಮ ಶ್ರೀಮತಿ ಕುಮಾ ಕಲ್ಲಪ್ಪ ಚೌಕಾಶಿಯವರು ಸಹ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದವರು.

ಹೀಗಾಗಿ ಘಟಪ್ರಭಾ ಸುತ್ತಮುತ್ತಲಿನ ಊರುಗಳಲ್ಲಿ ಚೌಕಾಶಿ ಕುಟುಂಬದ ರಾಜಕೀಯ ಹಿಡಿತ ಇದೆ, ಯುವಕರು ಎಂಡಿಸಿಯ ಬೆಂಬಲಕ್ಕೆ ನಿಂತಿದ್ದಾರೆ, ಸಾರಾಯಿ ಕುಡಿಯವ ಸಾಕಷ್ಟು ಯುವಕರನ್ನ ತಮ್ಮ ಸ್ವಂತ ಖರ್ಚಿನಲ್ಲಿ ನಶಾ ಮುಕ್ತಿ ಕೇಂದ್ರಕ್ಕೆ ಸೇರಿಸಿ ಯುವಕರನ್ನ ಕುಡಿತದ ಚಟದಿಂದ ದೂರ ಮಾಡಿದ್ದಾರೆ, ಇವೆಲ್ಲಾ ಎಂಡಿಸಿಯವರಿಗೆ ಪ್ಲಸ್ ಪಾಯಿಂಟ್ಸ್, ಇನ್ನೂ ಎಂಡಿಸಿಯವರು ಡಾ.ಕಡಾಡಿಯವರ ಬೆಂಬಲಕ್ಕೆ ನಿಂತಿದ್ದಾರೆ ಅಂದ್ರೆ ಘಟಪ್ರಭಾ ಹಾಗೂ ಸುತ್ತಮುತ್ತಲಿನ ಊರಿನ ಓಟು ಹಾಗೂ ಯುವಕರ ಮತಗಳು ಕಾಂಗ್ರೆಸ್ ಜೊಳಿಗೆಗೆ ಬೀಳುವುದು ಖಚಿತ ಎನ್ನುವುದು ರಾಜಕೀಯ ಲೆಕ್ಕಾಚಾರವಾಗಿದೆ..

error: Content is protected !!