ವಿವೇಕ ವಾರ್ತೆ : ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಹಿಂತಿರುಗಿ ಬರುತ್ತಿದ್ದಾಗ ಆಂದ್ರಪ್ರದೇಶದ ಚಿತ್ತೂರು ಬಳಿ ಹುಣಸೂರು ಅಬಕಾರಿ ಡಿಎಸ್‌ಪಿ ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಭೀಕರ (Road Accident) ಅಪಘಾತಕ್ಕೀಡಾಗಿದೆ.
ಹುಣಸೂರು ಅಬಕಾರಿ ಡಿಎಸ್‌ಪಿ ಅವರು ಕುಟುಂಬ ಸಹಿತ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಡಿಎಸ್‌ಪಿ ತೀವ್ರ ಗಾಯಗೊಂಡಿದ್ದು, ಅವರು ತಂದೆ ಮೃತಪಟ್ಟಿದ್ದು, ತಾಯಿ ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಡಿಎಸ್ಪಿ ವಿಜಯ್ ಕುಮಾರ್ ಅವರ ತಂದೆ ಗಿರಿಗೌಡ (80) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಹುಣಸೂರು ಅಬಕಾರಿ ಡಿಎಸ್ಪಿ ವಿಜಯ್ ಕುಮಾರ್ ಮತ್ತವರ ಕುಟುಂಬ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕತ್ತಲಲ್ಲಿ ಕಾಣಿಸದೆ ಅವರಿದ್ದ ಕಾರು ಚಿತ್ತೂರು ಬಳಿಯ ಪಲಮನೇರು ಮಂಡಲದ ಜಗಮರ್ಲ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಅಪಘಾತದಿಂದಾಗಿ ಡಿಎಸ್ಪಿ ವಿಜಯ್ ಕುಮಾರ್ ಅವರ ಕಣ್ಣುಗಳಿಗೆ ಗಾಯವಾಗಿದ್ದು, ಕೋಲಾರದ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರ ತಾಯಿಯ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದ ಅಬಕಾರಿ ಸಿಐ ಲೋಕೇಶ್ ಸಣ್ಣಪುಟ್ಟ ಗಾಯಗಳೊಂದಿಗೆ ಬದುಕುಳಿದಿದ್ದಾರೆ. (ಏಜೇನ್ಸಿಸ್)