spot_img
spot_img
spot_img
spot_img
spot_img

ಗಣರಾಜ್ಯೋತ್ಸವ ಆಚರಣೆಯಲ್ಲಿ ಸ್ತಬ್ಧಚಿತ್ರ ತಿರಸ್ಕಾರ: ಕರ್ನಾಟಕಕ್ಕೆ ಅನ್ಯಾಯ, ಅಪಮಾನವಿದು: ಸಿಎಂ

Published on

spot_img

ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತ ಹೊಸದಿಲ್ಲಿಯಲ್ಲಿ ಜನವರಿ 26ರಂದು ನಡೆಯಲಿರುವ ಪಥ ಸಂಚಲನದಲ್ಲಿ ಭಾಗವಹಿಸಲು ಕರುನಾಡಿನ ಸ್ತಬ್ಧ ಚಿತ್ರಕ್ಕೆ ಅನುಮತಿ ನಿರಾಕರಿಸುವುದಕ್ಕೆ ಸಿಎಂ ಸಿದ್ದರಾಮಯ್ಯ ಕೇಂದ್ರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ..

ನಗರದಲ್ಲಿ ಮಾತನಾಡಿದ ಅವರು,   ಕರ್ನಾಟಕಕ್ಕೆ ಅನ್ಯಾಯ, ಅಪಮಾನವಿದು ಈ ಹಿಂದೆಯೂ ಇದೆ ರೀತಿ ಮಾಡಿದ್ದರು ಈಗಾಗಲೇ ಪತ್ರ ಬರೆದಿದ್ದೇನೆ ಮತ್ತೊಮ್ಮೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರ ‌ನಾಡಿನ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದೆ ಕಳೆದ ವರ್ಷವೂ ಸ್ತಬ್ದಚಿತ್ರಕ್ಕೆ ಅವಕಾಶ ನೀಡಿರಲಿಲ್ಲ.ವಿವಾದ ಸ್ವರೂಪ‌ ಪಡೆದುಕೊಂಡ ಮೇಲೆ ಅನುಮತಿ ನೀಡಿತ್ತು. ಮತ್ತೆ ಕನ್ನಡಿಗರನ್ನ ಅಪಮಾನಿಸುವ ಚಾಳಿ ಮುಂದುವರೆಸಿದೆ ಎಂದರು.

ಪ್ರತಿ ವರ್ಷ ಗಣ ರಾಜ್ಯೋತ್ಸವದ ದಿನ ಹೊಸದಿಲ್ಲಿಯ ರಾಜಪಥ್‌ನಲ್ಲಿ(ಕರ್ತವ್ಯ ಪಥ) ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯುತ್ತದೆ. ಸತತ 14 ವರ್ಷಗಳಿಂದ ಗಣರಾಜೋತ್ಸವ ಪರೇಡ್‌ನಲ್ಲಿ ತನ್ನ ಸ್ತಬ್ಧ ಚಿತ್ರ ಪ್ರದರ್ಶಿಸುತ್ತಾ ಬಂದಿರುವ ಕರ್ನಾಟಕವು 15ನೇ ಬಾರಿಗೆ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಸಜ್ಜಾಗಿತ್ತು. ಆದರೆ, ರಕ್ಷಣಾ ಸಚಿವಾಲಯದ ಉಸ್ತುವಾರಿಯ ಕೇಂದ್ರ ಆಯ್ಕೆ ಸಮಿತಿಯು ಕರುನಾಡಿನ ಸ್ತಬ್ಧ ಚಿತ್ರದ ಪ್ರದರ್ಶನಕ್ಕೆ ಅನುಮತಿ ನಿರಾಕರಿಸುವ ಮೂಲಕ ಕನ್ನಡಿಗರಿಗೆ ನಿರಾಸೆ ಮೂಡಿಸಿದೆ.

ಹಿಂದಿನ ವರ್ಷವೂ ಹಗ್ಗಜಗ್ಗಾಟ
ಕಳೆದ ವರ್ಷವೂ ಆರಂಭದಲ್ಲಿ ರಾಜ್ಯದ ಸ್ತಬ್ಧ ಚಿತ್ರಕ್ಕೆ ಕೇಂದ್ರವು ಅನುಮತಿ ನಿರಾಕರಿಸಿತ್ತು. ಈ ವಿಚಾರ ವಿವಾದದ ಸ್ವರೂಪ ಪಡೆದು ಕೇಂದ್ರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು. ಬಳಿಕ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಮನವೊಲಿಸಿ ರಾಜ್ಯದ ಟ್ಯಾಬ್ಲೊಗೆ ಅವಕಾಶ ಕೊಡಿಸಿದ್ದರು. ಪರೇಡ್‌ಗೆ 10 ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ’ನಾರಿ ಶಕ್ತಿ’ ಪರಿಕಲ್ಪನೆಯ ಸ್ತಬ್ಧ ಚಿತ್ರ ರೂಪಿಸಲಾಗಿತ್ತು.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್

ವಿವೇಕವಾರ್ತೆ : ನಮ್ಮ ದೇಶದಲ್ಲಿ ಆಸ್ತಿಯ ವಿಚಾರಕ್ಕೆ ಬಂದರೆ ಅಲ್ಲಿ ಭಿನ್ನ ಭಿನ್ನವಾದ ವಿಭಾಗಗಳು ಇರುತ್ತವೆ ಹಾಗೂ ಸಾಕಷ್ಟು...

ಅಪ್ಪಿಕೊಳ್ಳೋದ್ರಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಬೆನಿಫಿಟ್ – ಇಲ್ಲಿದೆ ಮಾಹಿತಿ!

ಪ್ರೀತಿ, ಸ್ನೇಹ, ಭರವಸೆ ಮತ್ತು ಬೆಂಬಲವನ್ನು ವ್ಯಕ್ತಪಡಿಸುವ ದೇಹ ಭಾಷೆಯೇ ಅಪ್ಪುಗೆ. ಬನ್ನಿ ಇಂದು ಅಪ್ಪುಗೆಯ ಆರೋಗ್ಯ ಪ್ರಯೋಜನಗಳೇನು ಎಂದು...

ಬೆಡ್ ರೂಂನಲ್ಲಿ ಅತ್ತಿಗೆಯ ಪ್ರಿಯಕರನನ್ನ ಹೊಡೆದು ಕೊಂದ ಮೈದುನ!

ವಿವೇಕವಾರ್ತೆ: ಪ್ರಿಯತಮೆಯ ಭೇಟಿ ಮಾಡಲು ಮನೆಗೆ ನುಗ್ಗಿದ ಪ್ರಿಯಕರನನ್ನು ಆಕೆಯ ಮೈದುನ ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ...

ಮದ್ವೆಯಾದ 2 ವರ್ಷದಿಂದ ಸರಸಕ್ಕೆ ಒಪ್ಪದ ಗಂಡ! ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಪತ್ನಿ

ವಿವೇಕವಾರ್ತೆ : ದೈಹಿಕ ಸಂಬಂಧಕ್ಕೆ ಒಪ್ಪದ ಗಂಡನ ವಿರುದ್ಧ ಆಕ್ರೋಶಗೊಂಡಿರುವ ಮಹಿಳೆಯೊಬ್ಬಳು ಠಾಣೆಯ ಮೆಟ್ಟಿಲೇರಿ ಎಫ್​ಐಆರ್​ ದಾಖಲಿಸಿರುವ ವಿಚಿತ್ರ...
error: Content is protected !!