spot_img
spot_img
spot_img
spot_img
spot_img
spot_img

ಅಪ್ರಾಪ್ತ ಬಾಲಕಿಯನ್ನ ಕೆಡಿಸಿ ಅರೆನಗ್ನ ವಿಡಿಯೋ ಮಾಡಿ ಬ್ಲಾಕ್​ ಮೇಲ್​ ಮಾಡಿದವನಿಗೆ ಕೋರ್ಟ್‌ ಕೋಟ್ಟ ಶಿಕ್ಷೆ ಏನು ಗೊತ್ತಾ..?

Published on

spot_img

ವಿವೇಕವಾರ್ತೆ : ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕಿಯ ಅರೆನಗ್ನ ವಿಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ ಮಾಡಿದ್ದಲ್ಲದೆ, ವಿಡಿಯೋ ವೈರಲ್ ನೆಪದಲ್ಲಿ ರೆಸಾರ್ಟ್, ಲಾಡ್ಜ್ ಗೆ ಕರೆದುಕೊಂಡು ಹೋಗಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ ವೆಸಗಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಅತ್ಯಾಚಾರವೆಸಗಿದ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಜೊತೆ 62 ಸಾವಿರ ದಂಡವನ್ನು ನ್ಯಾಯಾಲಯ ವಿಧಿಸಿದೆ. ಇದನ್ನೂ ಓದಿ ಪೊಲೀಸ್​ ಭದ್ರತೆ ಭೇದಿಸಿ ಸಿಎಂ ಕಡೆ ಧಾವಿಸಿದ ವ್ಯಕ್ತಿ ಪೊಲೀಸ್​ ವಶಕ್ಕೆ!

ಏನಿದು ಬಾಲಕಿಯ ಪ್ರಕರಣ..?

ಬಾಲಕಿ ಬ್ಲಾಕ್​ ಮೇಲ್

ಅತ್ಯಾಚಾರಿ ಆರೋಪಿ ಬಾಲಕಿಯನ್ನು ತನ್ನ ಆಟೋದಲ್ಲಿ ಶಾಲೆಗೆ ಬಿಡುತ್ತಿದ್ದ. ಬಿಡುತ್ತಿದ್ದ ವೇಳೆ‌ಯಲ್ಲಿ ಒತ್ತಾಯ ಪೂರ್ವಕವಾಗಿ ಬಾಲಕಿಯ ಫೋಟೋ, ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬೆದರಿಸುತ್ತಿದ್ದ. ನನ್ನ ಜೊತೆ ಬಂದಲ್ಲಿ ವಿಡಿಯೋ ಡಿಲೀಟ್ ಮಾಡುವುದಾಗಿ ನಂಬಿಸಿದ್ದ. ಅದರಂತೆ ಬಾಲಕಿಯನ್ನು ಲಾಡ್ಜ್, ರೆಸಾರ್ಟ್ ಗೆ ಕರೆದುಕೊಂಡು ಹೋಗಿ ನಿರಂತರ ಅತ್ಯಾಚಾರವೆಸಗಿದ್ದಾನೆ. ಮತ್ತೆ ಕರೆದಾಗ ಬಾಲಕಿ ಹೋಗಲು ನಿರಾಕರಿಸಿದಕ್ಕೆ ಆರೋಪಿ ಅರೆನಗ್ನ ವಿಡಿಯೋವನ್ನು ಆಕೆಯ ತಾಯಿಗೆ ಕಳುಹಿಸಿದ್ದಾನೆ. ಇದನ್ನೂ ಓದಿ :Bigg Boss Kannada: ತುಕಾಲಿ ಮಹಾರಾಜರಿಗೆ ಮನೆಮಂದಿಯೆಲ್ಲ ಸೇವಕರು!

ಬಾಲಕಿಯ ವಿಡಿಯೋ ತಾಯಿಯ ಮೊಬೈಲ್‌ಗೆ ಕಳುಹಿಸಿ ಲಕ್ಷಾಂತರ ರೂಪಾಯಿ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ನೊಂದ ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲಾ ಫೋಕ್ಸೋ ವಿಶೇಷ ನ್ಯಾಯಾಲಯ ಪ್ರಕರಣವನ್ನು ತನಿಖೆ ಮಾಡಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದೆ.

ರಾಜ್ಯದ ಜನರು ಆರೋಪಿಗೆ 20 ವರ್ಷದ ಜೈಲು ಶಿಕ್ಷೆಯ ಬದಲು ಮರಣದಂಡನೆ ಅಥವಾ ಜೀವಾವದಿ ಶಿಕ್ಷೆ ಕೋಡಬೇಕಿತ್ತು ಎಂದು ಮಾತನಾಡುತ್ತಿದ್ದಾರೆ.

 

ಯುವರಾಜ vs ಮಹಾರಾಜನ ರೇಸ್​ ಅಂತ್ಯ.. ಗೆದ್ದು ಬೀಗಿದ್ದು ಯಾರು..?

ಯುವರಾಜ vs ಮಹಾರಾಜನ ನಡುವಿನ ರಣರೋಚಕ ಯುದ್ಧ ಅಂತ್ಯ ಕಂಡಿದೆ. ಪ್ರಿನ್ಸ್​ ಶುಭಮನ್​ಗೆ ಟಕ್ಕರ್​ ಕೊಟ್ಟ ಕಿಂಗ್​ ಕೊಹ್ಲಿ, ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಕಳೆದ ವರ್ಷ ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿಗಿಂತ ಉತ್ತಮ ಪರ್ಫಾಮೆನ್ಸ್​ ನೀಡಿದ್ರೂ ಪ್ರಶಸ್ತಿ ಗಿಲ್​ ಕೈ ತಪ್ಪಿದೆ.

ಪ್ರತಿಷ್ಟಿತ ಗೌರವ ಶುಭ್​ಮನ್​ ಕೈ ತಪ್ಪಿದ್ದು ಹೇಗೆ?

ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ 2023ರ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ಪ್ರಕಟಿಸಿದೆ. ಕಳೆದ ವರ್ಷ ಸಾಲಿಡ್​ ಫಾರ್ಮ್​ನಲ್ಲಿ ಧಮ್​ದಾರ್​ ಪರ್ಫಾಮೆನ್ಸ್​ ನೀಡಿದ ವಿರಾಟ್​ ಕೊಹ್ಲಿ, ಪ್ರತಿಷ್ಟಿತ ಗೌರವಕ್ಕೆ ಪಾತ್ರರಾಗಿದ್ದಾರೆ. 10 ಬಾರಿ ಐಸಿಸಿ ವಾರ್ಷಿಕ ಪ್ರಶಸ್ತಿ ಗೆದ್ದ ಏಕೈಕ ಕ್ರಿಕೆಟಿಗ ಅನ್ನೋ ಗೌರವಕ್ಕೆ ಪಾತ್ರರಾಗಿದ್ದಾರೆ.

ಪ್ರಿನ್ಸ್​ ಶುಭ್​ಮನ್ ಗಿಲ್​​​​ಗೆ ಆಯ್ತಾ ಅನ್ಯಾಯ?

2023ರಲ್ಲಿ ವಿರಾಟ್​ ಕೊಹ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ದಾರೆ ನಿಜ. ಆದರೆ ಕೊಹ್ಲಿಯನ್ನು ಮೀರಿಸುವಂತಹ ಪರ್ಫಾಮೆನ್ಸ್​ ಶುಭ್​ಮನ್​ ಗಿಲ್​ ಬ್ಯಾಟ್​ನಿಂದ ಬಂದಿದೆ. ದೇಶ-ವಿದೇಶಗಳಲ್ಲಿ ಶುಭ್​ಮನ್​ ಗಿಲ್​​ ರನ್​ ಹೊಳೆ ಹರಿಸಿದ್ದಾರೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಪ್ರಶಸ್ತಿಗಾಗಿ ರೇಸ್​ ಏರ್ಪಟ್ಟಿತ್ತು. ಅಂತಿಮವಾಗಿ ವಾರ್ಷಿಕ ಪ್ರಶಸ್ತಿ ಶುಭ್​ಮನ್​ ಗಿಲ್​ ಕೈ ತಪ್ಪಿದೆ. ಇದೇ ಸದ್ಯ ಹೊಸ ಚರ್ಚೆಗೆ ನಾಂದಿ ಹಾಡಿದೆ.

2023ರಲ್ಲಿ ಕೊಹ್ಲಿ -ಗಿಲ್​ ಪ್ರದರ್ಶನ

2023ರಲ್ಲಿ 27 ಏಕದಿನ ಪಂದ್ಯಗಳನ್ನಾಡಿದ ವಿರಾಟ್​ ಕೊಹ್ಲಿ, 1377 ರನ್​ ಗಳಿಸಿದರು. 72.47 ರನ್​ ಕಲೆ ಹಾಕಿದ್ದ ಕೊಹ್ಲಿ, 6 ಸೆಂಚುರಿ, 8 ಅರ್ಧಶತಕದ ಇನ್ನಿಂಗ್ಸ್​ ಕಟ್ಟಿದ್ದರು. 29 ಪಂದ್ಯಗಳನ್ನಾಡಿದ್ದ ಶುಭ್​ಮನ್​ ಗಿಲ್​​ 63.36ರ ಸರಾಸರಿಯಲ್ಲಿ, 5 ಶತಕ, 9 ಅರ್ಧಶತಕ ಸಹಿತ 1584 ರನ್​ ಗಳಿಸಿದರು.

207 ರನ್​ ಹೆಚ್ಚಿದ್ರು ಪ್ರಶಸ್ತಿ ಗಿಲ್​ ತಪ್ಪಿದ್ದು ಏಕೆ?

ರನ್​ಗಳಿಕೆಯ ಲೆಕ್ಕಾಚಾರದಲ್ಲಿ ವಿರಾಟ್​ ಕೊಹ್ಲಿಗಿಂತ ಶುಭ್​ಮನ್​ ಗಿಲ್​ ಮುಂದಿದ್ದಾರೆ. ಕೊಹ್ಲಿ ಕಳೆದ ವರ್ಷ 1377 ರನ್​ಗಳಿಸಿದ್ರೆ ಶುಭ್​ಮನ್​ 1584 ರನ್​ಗಳಿಸಿದ್ದಾರೆ. ಅಂದ್ರೆ ಕೊಹ್ಲಿಗಿಂತ 207 ರನ್​ ಹೆಚ್ಚು ಹೊಡೆದಿದ್ದಾರೆ. ಹಾಗಿದ್ರೂ ಕೊಹ್ಲಿ ವರ್ಷದ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. ಇದಕ್ಕೆಲ್ಲಾ ಕಾರಣ ವಿಶ್ವಕಪ್​ ಮೆಗಾ ಟೂರ್ನಿ.

ಮೆಗಾ ಟೂರ್ನಿಯಲ್ಲಿ ಸಾಮ್ರಾಜ್ಯವನ್ನೇ ಕಟ್ಟಿದ ಕಿಂಗ್

ದ್ವಿಪಕ್ಷೀಯ ಸರಣಿಯಲ್ಲ.. ಅತಿ ಹೆಚ್ಚು ಒತ್ತಡವಿರುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಈ ಬಾರಿ ನಿರಾಯಾಸವಾಗಿ ಬ್ಯಾಟ್​ ಬೀಸಿದರು. ಕಳೆದ ವರ್ಷಗಳಿಸಿದ 1377 ರನ್​​ಗಳ ಪೈಕಿ 765 ರನ್​ಗಳ ವಿಶ್ವಕಪ್​ ಟೂರ್ನಿಯಲ್ಲೇ ಕೊಹ್ಲಿ ಗಳಿಸಿರೋದು. ಆದರೆ ಶುಭ್​​ಮನ್​ ಗಿಲ್​ ಬ್ಯಾಟ್​ ಮೆಗಾ ಟೂರ್ನಿಯಲ್ಲಿ ಅಷ್ಟೇನು ಸದ್ದು ಮಾಡಲಿಲ್ಲ. ವರ್ಷದ ಏಕದಿನ ಪ್ರಶಸ್ತಿ ರೇಸ್​​ನಲ್ಲಿ ಗಿಲ್​​ಗೆ ಹಿನ್ನಡೆಯಾಗಿದ್ದು ಇಲ್ಲೇ.

ಏಕದಿನ ವಿಶ್ವಕಪ್​ ಪ್ರದರ್ಶನ

ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿದ ಕೊಹ್ಲಿ 765 ರನ್​ ಸಿಡಿಸಿದ್ರು. 3 ಶತಕ, 6 ಅರ್ಧಶತಕ ಸಿಡಿಸಿದ ವಿರಾಟ್​, 95.62ರ ಸರಾಸರಿಯಲ್ಲಿ ರನ್​ಗಳಿಸಿದ್ರು. 9 ಪಂದ್ಯಗಳನ್ನಾಡಿದ ಶುಭ್​ಮನ್ ಗಿಲ್​ 44.25ರ ಸರಾಸರಿಯಲ್ಲಿ 4 ಅರ್ಧಶತಕ ಸಹಿತ 354 ರನ್​ ಸಿಡಿಸಿದ್ರು.

ಇದೀಷ್ಟೇ ಅಲ್ಲ.. ವಿರಾಟ್​ ಕೊಹ್ಲಿ ಕಳೆದ ವರ್ಷದಲ್ಲಿ ರನ್​ಗಳಿಸಿದ್ದೆಲ್ಲಾ ಪ್ರತಿಷ್ಟಿತ ಐಸಿಸಿ ಟೂರ್ನಿಯಲ್ಲಿ ಬಲಿಷ್ಟ ತಂಡಗಳ ಎದುರು. ಆದರೆ ಶುಭ್​ಮನ್​ ಗಿಲ್​ ರನ್​ ಗಳಿಸಿದ್ದು, ದ್ವಿಪಕ್ಷೀಯ ಸರಣಿಗಳಲ್ಲಿ ಮತ್ತು 3 ಸೆಂಚುರಿ ಹೊರತು ಪಡಿಸಿದ್ರೆ, 2 ಸೆಂಚುರಿ ಬಂದಿರೋದು ಸಾಧಾರಣ ತಂಡಗಳ ಎದುರು ಹೀಗಾಗಿಯೇ ಪ್ರಶಸ್ತಿ ಶುಭ್​ಮನ್ ಗಿಲ್​ ಕೈ ತಪ್ಪಿದೆ.

ಒಟ್ಟಿನಲ್ಲಿ, ಐಸಿಸಿ ನೀಡುವ ಶ್ರೇಷ್ಟ ಕ್ರಿಕೆಟಿಗ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ವಿರಾಟ್​ ಕೊಹ್ಲಿ ನಾನೇ ಕಿಂಗ್​ ಅನ್ನೋದನ್ನ ಮತ್ತೊಮ್ಮೆ ನಿರೂಪಿಸಿದ್ದಾರೆ. ಇದ್ರ ಜೊತೆಗೆ ಟಫ್​ ಫೈಟ್​ ಕೊಟ್ಟಿರುವ ಪ್ರಿನ್ಸ್ ಶುಭ್​ಮನ್​ ಮುಂದೆ ರಾಜ ಪಟ್ಟಕ್ಕೇರೋ ಸುಳಿವನ್ನ ಕೊಟ್ಟಂತಾಗಿದೆ.

1950ರಲ್ಲಿ ಭಾರತವು ಹೇಗೆ ಗಣರಾಜ್ಯವಾಯ್ತು..? ಜ.26 ರಂದೇ ಸಂವಿಧಾನ ಜಾರಿಗೆ ತರಲು ಇದೆ ವಿಶೇಷ ಕಾರಣ

ಡಾ. ಅಂಬೇಡ್ಕರ್‌

ಜನವರಿ 26 ಭಾರತಕ್ಕೆ ತುಂಬಾನೇ ಮಹತ್ವದ ದಿನ.. ಇದರ ಕಥೆಯು 1950 ರಿಂದ ಪ್ರಾರಂಭವಾಗುತ್ತದೆ. ಭಾರತವು ಜನವರಿ 26, 1950 ರಂದು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಈ ದಿನದಂದೇ ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತರಲಾಯಿತು. ಭಾರತದ ಸಂವಿಧಾನವು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ. ಸ್ವಾತಂತ್ರ್ಯದ ನಂತರ ಭಾರತಕ್ಕೆ ಇದು ಎರಡನೇ ವಿಶೇಷ ಕ್ಷಣ.

ಜನವರಿ 26 ರಂದೇ ಸಂವಿಧಾನ ಜಾರಿಗೆ ತರಲು ವಿಶೇಷ ಕೂಡ ಕಾರಣವಿತ್ತು. ದೇಶವು ಮೊದಲ ಬಾರಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದು ಜನವರಿ 26, 1930 ರಂದು. ಅದರ ಸವಿ ನೆನಪಿಗಾಗಿ ಸಂವಿಧಾನವನ್ನು ಜನವರಿ 26 ರಂದು ಜಾರಿಗೆ ತರಲಾಯಿತು.

ಜನವರಿ 26 ನಮ್ಮ ಹೃದಯದಲ್ಲಿ ಶಾಶ್ವತ
ಡಿಸೆಂಬರ್ 31, 1929 ರಂದು ಜವಾಹರಲಾಲ್ ನೆಹರು ಅಧ್ಯಕ್ಷತೆಯಲ್ಲಿ ಲಾಹೋರ್​​ನಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಿ ನಿರ್ಣಯ ಒಂದನ್ನು ಅಂಗೀಕರಿಸಿತ್ತು. ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಒತ್ತಾಯಿಸುವುದು ಆ ನಿರ್ಣಯದ ಉದ್ದೇಶವಾಗಿತ್ತು. 1930ರ ಜನವರಿ 26 ರೊಳಗೆ ಬ್ರಿಟಿಷರು ಡೊಮಿನಿಯನ್ ಸ್ಟೇಟ್ ಸ್ಥಾನಮಾನ ನೀಡದಿದ್ರೆ ‘ದೇಶವನ್ನು ಸಂಪೂರ್ಣ ಸ್ವತಂತ್ರ’ ಎಂದು ಘೋಷಿಸಲಾಗುವುದು ಎಂದು ನಿರ್ಣಯ ಅಂಗೀಕರಿಸಲಾಗಿತ್ತು. ಅದರಂತೆ ಜನವರಿ 26, 1930 ರಂದು ದೇಶದಲ್ಲಿ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಆಗಸ್ಟ್ 15, 1947 ರಂದು ನಮಗೆ ಸ್ವಾತಂತ್ರ್ಯ ಸಿಕ್ಕರೂ ಜನವರಿ 26 ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿದಿದೆ.

ಹಾಗೆ ನೋಡಿದರೆ 1920ರಲ್ಲಿಯೇ ಭಾರತದಲ್ಲಿ ಗಣರಾಜ್ಯ ಆರಂಭವಾಗಿತ್ತು. 1920ರಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು. ಈ ಚುನಾವಣೆಯಲ್ಲಿ ರಾಷ್ಟ್ರೀಯ ಚುನಾವಣೆಯ ಜೊತೆಗೆ ಪ್ರಾಂತೀಯ ಚುನಾವಣೆಗಳನ್ನೂ ಆಯೋಜಿಸಲಾಗಿತ್ತು. 9 ಫೆಬ್ರವರಿ 1921ರಂದು ದೆಹಲಿಯಲ್ಲಿ ಡ್ಯೂಕ್ ಆಫ್ ಕನ್ನಾಟ್ ಉಪಸ್ಥಿತಿಯಲ್ಲಿ ಸಂಸತ್ತು ಉದ್ಘಾಟನೆ ಆಯಿತು. ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಪಡೆದ ನಂತರವೂ ಬ್ರಿಟಿಷರೊಂದಿಗೆ ಒಡನಾಟ ಮುಂದುವರೆಯಿತು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ನಮ್ಮದು
ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ ರಚಿಸಲು ಸಂವಿಧಾನ ರಚನಾ ಸಭೆ ರಚಿಸಲಾಯಿತು. ಇದರಲ್ಲಿ ಒಟ್ಟು 22 ಸಮಿತಿಗಳಿದ್ದವು. ಅದರಲ್ಲಿ ‘ಕರಡು ಸಮಿತಿ’ಯು ಅತ್ಯಂತ ಪ್ರಮುಖವಾದ ಸಮಿತಿಯಾಗಿದ್ದು, ಇಡೀ ಸಂವಿಧಾನವನ್ನು ಸಿದ್ಧಪಡಿಸುವುದು ಅದರ ಕೆಲಸವಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಆ ಸಮಿತಿಯ ಅಧ್ಯಕ್ಷರಾಗಿದ್ದರು. 2 ವರ್ಷ, 11 ತಿಂಗಳದ 18 ದಿನಗಳ ಕಠಿಣ ಪರಿಶ್ರಮದ ನಂತರ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ ರಚನೆ ಆಯಿತು.

ಡಾ.ಭೀಮರಾವ್ ಅಂಬೇಡ್ಕರ್ ಅವರು 26 ನವೆಂಬರ್, 1949 ರಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್​ಗೆ ಸಿದ್ಧಪಡಿಸಿದ್ದ ಸಂವಿಧಾನವನ್ನು ಹಸ್ತಾಂತರಿಸಿದರು. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಎರಡು ತಿಂಗಳು ವಿಳಂಬವಾಯಿತು. ಎರಡು ತಿಂಗಳ ನಂತರ ಸಂವಿಧಾನವನ್ನು ಜಾರಿಗೆ ತರಲಾಯಿತು. ಗಣರಾಜ್ಯೋತ್ಸವವನ್ನು ನವೆಂಬರ್ 26, 1949 ರ ಬದಲಿಗೆ 26 ಜನವರಿ 1950 ರಂದು ಜಾರಿಗೆ ಬಂತು. 1950ರಿಂದ ಇಂದಿನವರೆಗೆ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!