ಪುಡಿ ಉಪ್ಪಿಗಿಂತ ಕಲ್ಲುಪ್ಪು ಉತ್ತಮ: ಕಲ್ಲುಪ್ಪಿನ ಆರೋಗ್ಯಕರ ಗುಣಗಳು ಇಲ್ಲಿದೆ ನೋಡಿ

ಅನಾದಿಕಾಲದಿಂದಲೂ ಉಪ್ಪು ಬಳಕೆಯಲ್ಲಿದೆ. ಇದರ ಮೊದಲ ಉಪಯೋಗ ಆಹಾರದಲ್ಲಿ. ಪ್ರತಿವ್ಯಕ್ತಿಯೂ ವರ್ಷಕ್ಕೆ 54.5 ಕೆ.ಜಿ.ಯಷ್ಟು ಉಪ್ಪನ್ನು ಸೇವಿಸುತ್ತಾನೆ. ಪುರಾತನ ಕಾಲದಿಂದಲೂ ಉಪ್ಪು ವ್ಯಾಪಾರದ ಪ್ರಧಾನವಸ್ತು. ಇಂದು ಇದನ್ನು ರಾಸಾಯನಿಕ ಕಾರ್ಖಾನೆಗಳಲ್ಲಿ ನೂರಾರು ವಸ್ತುಗಳ ತಯಾರಿಕೆಗೆ ಬಳಸಲಾಗುತ್ತಿದೆ. ಜಾನುವಾರುಗಳ ಆಹಾರ, ಕೃತಕಗೊಬ್ಬರ, ಕೀಟನಾಶಕ, ಕಳೆನಾಶಕ, ಮಣ್ಣು ಸಾರವಸ್ತುಗಳು, ಔಷಧಗಳು, ಬಾಹ್ಯ ಮತ್ತು ಆಂತರಿಕ ನಿರ್ಮಲೀಕರಣಗಳು ಇತ್ಯಾದಿಗಳ ತಯಾರಿಕೆಯಲ್ಲಿ ಉಪ್ಪಿನ ಉಪಯೋಗ ಹೇರಳವಾಗಿದೆ.

ಪ್ರತಿ ವರ್ಷ 77 ರಾಷ್ಟ್ರಗಳು ಸುಮಾರು ೩೫,೫೬೦,೦೦೦ ಮೆಟ್ರಿಕ್ ಟನ್ನುಗಳಷ್ಟು ಉಪ್ಪನ್ನು ಉತ್ಪಾದಿಸುತ್ತವೆ. ಅಮೆರಿಕದ ಸಂಯುಕ್ತಸಂಸ್ಥಾನ, ಬ್ರಿಟನ್, ಚೀನ, ಜರ್ಮನಿ, ಫ್ರಾನ್ಸ್‌ ಮತ್ತು ಭಾರತ ದೇಶಗಳು ೧,೦೧೬,೦೦೦,೦೦೦ ಮೆಟ್ರಿಕ್ ಟನ್ನುಗಳಿಗೂ ಹೆಚ್ಚು ಉಪ್ಪನ್ನು ಉತ್ಪಾದಿಸುತ್ತವೆ. ಕಲ್ಲುಪ್ಪಿನ ಗಣಿಗಳಲ್ಲಿ ಸುರಂಗ ತೋಡಿ ಉಪ್ಪನ್ನು ಹೊರತೆಗೆಯುತ್ತಾರೆ. ಕೆಲವು ವೇಳೆ ಲವಣಸ್ತರಗಳಿಗೆ ನೀರನ್ನು ಹಾಯಿಸಿ ಉಪ್ಪು ಕರಗಿದ ನೀರನ್ನು (ಬ್ರೈನ್) ಭೂಮಿಯ ಮೇಲಕ್ಕೆ ಪಂಪಿನ ಸಹಾಯದಿಂದ ಹೊರತೆಗೆದು ಸಣ್ಣ ಮಡಿಗಳಲ್ಲಿ ಬಿಟ್ಟು ಇಂಗಿಸಿ ಉಪ್ಪನ್ನು ತಯಾರಿಸುವುದೂ ಉಂಟು.

ಕಲ್ಲುಪ್ಪು ನೈಸರ್ಗಿಕವಾದ ಉಪ್ಪು. ಆದರೆ ಅಯೋಡಿನ್ ಭರಿತ ಉಪ್ಪನ್ನೇ ಸೇವಿಸಿ ಘೋಷಣೆಯ ಹೊಡೆತಕ್ಕೆ ಸಿಲುಕಿ ಕಲ್ಲುಪ್ಪು ಕಾಣೆಯಾಗಿದೆ. ಸಕ್ಕರೆಗಿಂತ ಕಲ್ಲು ಸಕ್ಕರೆ ಹೆಚ್ಚು ಆರೋಗ್ಯಕಾರಿಯಾಗಿರುವಂತೆ, ಪುಡಿ ಉಪ್ಪಿಗಿಂತ ಕಲ್ಲುಪ್ಪು ಉತ್ತಮವಾಗಿದೆ. ಇವತ್ತು ನಾವು ಕಲ್ಲುಪ್ಪಿನ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯೋಣ.

ಕಲ್ಲುಪ್ಪಿನ ಪ್ರಯೋಜನಗಳು:
1. ಕಲ್ಲುಪ್ಪಿನಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಅಧಿಕವಾಗಿ ಇರುವುದರಿಂದ ದೇಹವು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಕಾಗುವಷ್ಟು ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ.
2. ಕಲ್ಲುಪ್ಪು ದೇಹದ ಅಂಗಗಳು ಚಟುವಟಿಕೆಯಿಂದ ಕಾರ್ಯನಿರ್ವಯಿಸುವಂತೆ ಮಾಡುತ್ತದೆ.
3. ಕಲ್ಲುಪ್ಪು ಸೇವಿಸಿದರೆ ದೇಹವು ನೀರನ್ನು ಹೀರಿಕೊಂಡು ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಮಾಡುತ್ತದೆ.
4. ನಾನು ಉಸಿರಾಡುವ ಗಾಳಿಯಲ್ಲಿರುವ ಹಾನಿಕಾರಕ ಕಣಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
5. ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರು ಅಡುಗೆಯಲ್ಲಿ ಕಲ್ಲುಪ್ಪು ಬಳಸುವುದು ಒಳ್ಳೆಯದು.
6. ಉಪ್ಪುನಲ್ಲಿರುವ ಖನಿಜಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
7. ಕಲ್ಲುಪ್ಪಿನಲ್ಲಿರುವ ಖನಿಜಾಂಶಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

error: Content is protected !!