Benagaluru,October 21: ಕರ್ನಾಟಕ ರಾಜ್ಯ ಸರ್ಕಾರವು(State Government) ದೀಪಾವಳಿಗೆ (Diwali) ಸಿಹಿ ಸುದ್ದಿ ನೀಡಿದೆ . ದೊಡ್ಡ ಅಕ್ರಮ ನಡೆದ ಬಳಿಕ ಮರು ಪರೀಕ್ಷೆ ನಡೆಸಿದ್ದ 545 ಪಿಎಸ್ಐ (PSI) ಹುದ್ದೆಗಳ ನೇಮಕಾತಿ ಪಟ್ಟಿಯನ್ನು ಸರ್ಕಾರ ಸೋಮವಾರ (October 21) ರಂದು ಬಿಡುಗಡೆ ಮಾಡಿದೆ. ಈ ಮೂಲಕ ಆರೋಪ ಮಾಡುತ್ತಿದ್ದ ವಿಪಕ್ಷಗಳ ಬಾಯಿಗೆ ಬೀಗ ಹಾಕಿದೆ.
ಇದನ್ನೂ ಓದಿ : ನಟ ಸುದೀಪ್ ತಾಯಿ ಸರೋಜಾ ನಿಧನ
ರಾಜ್ಯದಲ್ಲಿ 545 ಪಿಎಸ್ಐ (PSI) ಹುದ್ದೆಗಳ ನೇಮಕಾತಿ ಯಲ್ಲಿ ನಡೆದಿದ್ದ ಅಕ್ರಮವು ಸಂಚಲನ ಸೃಷ್ಟಿಸಿತ್ತು. ಇದರ ನಂತರ ಹೈಕೋರ್ಟ್ ಸೂಚನೆ ಮೇರೆಗೆ ಕರ್ನಾಟಕ (Karnataka) ರಾಜ್ಯ ಸರ್ಕಾರವು ಮತ್ತೆ ಮರು ಪರೀಕ್ಷೆ (Exam) ನಡೆಸಿತ್ತು. ಆದರೆ ಫಲಿತಾಂಶ (Percentage %) ಹೊರ ಬಿಟ್ಟಿತೇ ವಿನಃ ಆಯ್ಕೆ ಪಟ್ಟಿ ಪ್ರಕಟಿಸಿರಲಿಲ್ಲ. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಇದನ್ನೂ ಓದಿ : ಇಡಿ ಕೇವಲ ದಾಖಲೆಗಳನ್ನು ಪರಿಶೀಲಿಸಲು ಬಂದಿರಬಹುದು : ಡಿಕೆ ಶಿವಕುಮಾರ್
ಇದೀಗ ರಾಜ್ಯ ಸರ್ಕಾರ October 21ರಂದು 01-01-2023ರ ಸುತ್ತೋಲೆಯ ಅನ್ವಯ ಪಿಎಸ್ಐ (PSI) ನೇರ ನೇಮಕಾತಿಗಳ ಆಯ್ಕೆ ಪಟ್ಟಿ ತಯಾರಿಸಿ ಪ್ರಕಟಗೊಳಿಸಿದೆ.
ಇದನ್ನೂ ಓದಿ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ದೊರೆಯುತ್ತದೆ- ಸಚಿವೆ ಲಕ್ಷ್ಮಿ ಹೆಬ್ಬಾಳಕರ್
ದಿನಾಂಕ: 06-06-2020 ರ ಸುತ್ತೋಲೆ ಅನ್ವಯ ಆಯ್ಕೆ ಪಟ್ಟಿಯಿಂದ ಹೊರಗುಳಿಯುವ 40 ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗನುಗುಣವಾಗಿ 40 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ ಕಾಯ್ದಿರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಯ್ಕೆಯನ್ನು ಪ್ರಕಟಿಸುವ ಸಂದರ್ಭದಲ್ಲಿ ಈ ಆಯ್ಕೆ ಪಟ್ಟಿಯು ಮಾನ್ಯ ಉಚ್ಚ ನ್ಯಾಯಾಲಯವು (High Court) ರಿಟೊ ಪಿಟಿಷನ್ 20:16343/20240 ಅಂತಿಮ ತೀರ್ಪಿಗೊಳಪಟ್ಟಿದೆ. ಅಲ್ಲದೇ ಈ ಆಯ್ಕೆ ಪಟ್ಟಿಯ ವೃಂದ ಬದಲಾವಣೆ, ಮೀಸಲಾತಿ ಪ್ರಚಾರ ಬದಲಾವಣೆ, ಅರ್ಹತಾ ಸ್ಥಾನ ಮತ್ತು ಘಟಕಗಳ ಬದಲಾವಣೆ ಆಗುವ ಸಾಧ್ಯತೆಗಳಿರುವ ಷರತ್ತುಗಳನ್ನು ವಿಧಿಸುತ್ತದೆ ಎಂದು ಸರ್ಕಾರ ಆಯ್ಕೆ ಪಟ್ಟಿಯಲ್ಲಿ ತಿಳಿಸಿದೆ.