spot_img
spot_img
spot_img
spot_img
spot_img
spot_img

ಮದ್ಯ ಪ್ರಿಯರಿಗೆ ಶಾಕಿಂಗ್​ ನ್ಯೂಸ್​.. ದರ 8 ರಿಂದ 10 ರೂಪಾಯಿ ಹೆಚ್ಚಳಕ್ಕೆ ಪ್ರಸ್ತಾವನೆ!

Published on

spot_img

ಅಬಕಾರಿ ಇಲಾಖೆ ಮತ್ತೆ ಬಿಯರ್ ಮೇಲಿನ ಬೆಲೆ ಏರಿಸಲು ಮುಂದಾಗಿದ್ದು, ಮದ್ಯ ಪ್ರಿಯರಿಗೆ ಈ ವಿಚಾರ ಶಾಕ್​ ನೀಡಿದೆ. ಅಬಕಾರಿ ಇಲಾಖೆಯಂತೂ ನೂತನ ದರ ಏರಿಕೆ ಹೆಚ್ಚಳದ ಮೂಲಕ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಮುಂದಾಗಿದೆ.

650 ML ಬಾಟಲಿನ ಬಿಯರ್ ಗೆ 8ರಿಂದ 10 ರೂಪಾಯಿ ಏರಿಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯಪತ್ರದಲ್ಲಿ ಕರ್ನಾಟಕ ಅಬಕಾರಿ (ಸುಂಕಗಳು ಮತ್ತು ಶುಲ್ಕಗಳು) ನಿಯಮಕ್ಕೆ ತಿದ್ದುಪಡಿ 2024ರ ಕರಡನ್ನು ಹೊರಡಿಸಿದೆ. ಬಸ್‌ ಪ್ರಯಾಣದ ಖುಷಿ ಹೆಚ್ಚಿಸಿತು ಹೊಸ ಸೌಲಭ್ಯ!

ಮದ್ಯ ಪ್ರಿಯರ ಫೇವರಿಟ್ ಬ್ರ್ಯಾಂಡ್’ಗಳ ದರ ಹೆಚ್ಚಳ

ಮದ್ಯ ಪ್ರಿಯ

ಮದ್ಯ ಪ್ರಿಯರಿಗೆ ಹೊಸ ವರುಷದ ಹೊಸ್ತಿಲಲ್ಲಿ ದರ ಏರಿಕೆಯ ಬಿಸಿ‌ ತಟ್ಟಿದೆ.ಮಧ್ಯಮ ವರ್ಗದ ಫೇವರೆಟ್ ಮದ್ಯಗಳ ಬೆಲೆ ಹೆಚ್ಚಾಗಿದ್ದು,  ಹೊಸ ವರ್ಷಕ್ಜೆ ಕಂಠ ಪೂರ್ತಿ ಕುಡಿದು ಕುಪ್ಪಳಿಸಿದ ಜನರು ಈಗ ಎಣ್ಣೆ ಖರೀದಿಸಲು ಯೋಚಿಸುವಂತಾಗಿದೆ. ಎಣ್ಣೆನು ಸೋಡನು ಒಳ್ಳೆ ಫ್ರೆಂಡ್ಸ್, ಸಾರಾಯಿ ಅಂಗಡಿಯೆ ರಾಜಧಾನಿ , ಅಂತ ಕಂಠಪೂರ್ತಿ ಕುಡಿದು ಹೊಸ ವರ್ಷವನ್ನು ವೆಲ್ ಕಮ್ ಮಾಡಿದವರಿಗೆ ಈಗ ಒಂದೇ ಸಲ ತಲೆ ಗಿರ ಗಿರ ತಿರುಗುವಂತಾಗಿದೆ.

 ಹೌದು ಹೊಸ ವರ್ಷದಂದು ಬರೋಬ್ಬರಿ 193 ಕೋಟಿ ಆದಾಯ ಗಳಿಸಿ ಮಂದಹಾಸ ಬೀರಿದ್ದ ಅಬಕಾರಿ ಇಲಾಖೆ ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿದೆ. ಇಂದಿನಿಂದ ಮದ್ಯಮ ವರ್ಗದವರು ಕುಡಿಯುವ ಮದ್ಯದ ದರದಲ್ಲಿ ಏರಿಕೆಯಾಗಿದೆ. ಹೊಸ ವರ್ಷಕ್ಕೆ ಕಂಠ ಪೂರ್ತಿ ಕುಡಿದು ಕುಪ್ಪಳಿಸಿದ್ದ ಬಡವರು ಈಗ ಎಣ್ಣೆ ಖರೀದಿಸಲು ಯೋಚಿಸುವಂತಾಗಿದೆ.

ಅಂದಹಾಗೆ ದರ ಏರಿಕೆ ಆಗಿರುವ ಬ್ರ್ಯಾಂಡ್ ಯಾವುದು ಹಾಗೂ ಎಷ್ಟು ಅನ್ನೋದನ್ನ ನೋಡೋದಾದರೆ

  •  ಓಟಿ (180 ಎಂಎಲ್): ಈ ಹಿಂದೆ 90 ರುಪಾಯಿ, ಇಂದಿನಿಂದ 111ರುಪಾಯಿ.
  •  ಬಿಪಿ (180 ಎಂಎಲ್):ಹಿಂದೆ110 ರುಪಾಯಿ, ಇಂದಿನಿಂದ 145 ರುಪಾಯಿ.
  •  8ಪಿಎಂ (180 ಎಂಎಲ್):ಹಿಂದೆ 90ರುಪಾಯಿ,ಇಂದಿನ ದರ 111ರುಪಾಯಿ.

ಅಂದಹಾಗೆ ಇಲ್ಲಿ ಮದ್ಯದ ದರವನ್ನ ಏಕಾ ಏಕಿ ಏರಿಸಿರುವುದು ಮದ್ಯ ತಯಾರಕ ಕಂಪನಿಗಳು. ಮದ್ಯ ಉತ್ಪಾದನಾ ಕಂಪನಿಗಳು ಕ್ವಾಟರ್ ಗೆ 20 ರಿಂದ 30 ರುಪಾಯಿ ಏರಿಸಿವೆ. ಈಗಾಗಲೇ ಮದ್ಯ ತಯಾರಿಕ ಕಂಪನಿಗಳು ಬಾರ್ ಮಾಲೀಕರಿಗೆ ಹಾಗೂ ಅಬಕಾರಿ ಇಲಾಖೆಗೆ ದರ ಏರಿಕೆಯ ಕುರಿತು ಸಂದೇಶ ಕಳುಹಿಸಿವೆ. ರಾಜ್ಯದ ಮದ್ಯಮ ಮತ್ತು ಕೆಳ ವರ್ಗದ ಜನ ಸೇವಿಸುವ ಬ್ರ್ಯಾಂಡ್ ಗಳ ದರ ಏರಿಕೆಯಾದರೆ ಮದ್ಯ ಮಾರಾಟದಲ್ಲಿ ಕುಸಿತವಾಗಬಹುದು ಎಂದು,

ಬಾರ್ ಮಾಲೀಕರ ಆಸೋಸಿಯೇಷನದ ಆಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಆದರೆ ಉತ್ಪಾದನಾ ವೆಚ್ಚ ಅಧಿಕವಾಗಿರಿವುದರಿಂದ ದರ ಏರಿಸದೆ ಇರಲು ಆಗುವುದಿಲ್ಲ ಎನ್ನುವುದು ಉತ್ಪಾದಕರ ಮಾತು. ತಮ್ಮ ನೆಚ್ಚಿನ ಬ್ರ್ಯಾಂಡ್ ಗಳ ದರ ಏರಿಕೆಗೆ ಮದ್ಯ ಪ್ರಿಯರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗ ಕೈಗೆಟುಕುವ ದರದಲ್ಲಿ ಎಣ್ಣೆ ಪಾದವೆ ಗತಿ ಎಂದು ಬೇರೆ ಬ್ರ್ಯಾಂಡ್ ಗೆ ಶಿಫ್ಟ್ ಆಗುವವರೆ ಹೆಚ್ಚು ಎಂದು ಹೇಳಲಾಗ್ತಿದೆ.

ಬಿಯರ್ ಮೇಲಿನ ಅಬಕಾರಿ ತೆರಿಗೆ ಮೂಲ ದರದ ಶೇಕಡಾ 185 ರಿಂದ ಶೇಕಡಾ 195 ಕ್ಕೆ ಏರಿಕೆ ಮಾಡಲು ಮುಂದಾಗಿದ್ದು, ಕರಡು ಪ್ರತಿಗೆ ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಅದರ ಜೊತೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ರಾಜ್ಯ ಅಬಕಾರಿ ಇಲಾಖೆಯ ಅಧಿಕೃತ ಜಾಲತಾಣ

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

ಮನೆ ಲೀಜ್ ಪಡೆಯೋ ಗ್ರಾಹಕರೇ ಎಚ್ಚರ -ಬ್ಯಾಂಕಿನವರು ಬೀದಿಗೆ ತಳ್ಳಬಹುದು ಹುಷಾರ್ !

ವಿವೇಕವಾರ್ತೆ: ಅವ್ರು ತಿಂಗಳ ಬಾಡಿಗೆ ಸಹವಾಸ ಬೇಡ ಎಂದು ಲಕ್ಷ ಲಕ್ಷ ಹಣ ಪಾವತಿಸಿ ಅಪಾರ್ಟ್ಮೆಂಟ್ ನಲ್ಲಿ ಪ್ಲಾಟ್...

ಕ್ಯಾನ್ಸರ್‌ಗೆ ಕೊನೆಗೂ ಬಂತು ಮಾತ್ರೆ : ಒಂದು ಮಾತ್ರೆಯ ಬೆಲೆ ಎಷ್ಟು ಗೊತ್ತಾ?

ಜಗತ್ತನ್ನು ಕಾಡುತ್ತಿರುವ ಮಾರಕ ರೋಗಗಳಲ್ಲಿ ಕ್ಯಾನ್ಸರ್ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆಯಾಗಿದೆ. ಇದರ ಹೆಸರು ಕೇಳಿದ್ರೆನೆ ಎದೆಯಲ್ಲಿ...

Caste Census Report: ಸಿಎಂ ಸಿದ್ದರಾಮಯ್ಯಗೆ ಜಾತಿಗಣತಿ ವರದಿ ಸಲ್ಲಿಸಿದ ಜಯಪ್ರಕಾಶ್ ಹೆಗ್ಡೆ: ಏನೇನಿದೆ?

ಬೆಂಗಳೂರು- ಹಲವರ ವಿರೋಧದ ನಡುವೆಯೂ ರಾಜ್ಯ ಸರಕಾರ ನಡೆಸಿದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಗಣತಿಯ...

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್: ಸಿಹಿ ಸುದ್ದಿ ತಿಳಿಸಿದ ರಣವೀರ್ ಸಿಂಗ್

ಕನ್ನಡದ ಹುಡುಗಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ....
error: Content is protected !!