spot_img
spot_img
spot_img
spot_img
spot_img
spot_img

Promise Day 2024: ನಿಮ್ಮ ಸಂಗಾತಿಗೆ ಹೀಗೆ ಪ್ರಾಮಿಸ್ ಮಾಡಿ ಇಂಪ್ರೆಸ್ ಮಾಡಿ..! ಇಲ್ಲಿದೆ ಟಿಪ್ಸ್

Published on

spot_img

ಪ್ರೇಮಿಗಳಿಗೆ ಇದು ಪ್ರಮುಖವಾದ ದಿನ ಎಲ್ಲದಕ್ಕೂ ಸಾಕ್ಷಿಯಾಗುವುದು ಈ ದಿನವಾಗಿದೆ. ಅಂದರೆ ಪ್ರಾಮಿಸ್ ಡೇ. ಇಂದು ನಿಮ್ಮ ಸಂಗಾತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರ ಜೊತೆಗೆ ಒಂದು ಭರವಸೆ ತುಂಬಿದ ಪ್ರಾಮಿಸ್​ ಒಂದನ್ನೂ ಮಾಡುವ ದಿನ. ಜೀವನದ ಪ್ರತಿ ಏರಿಳಿತಗಳಲ್ಲಿಯೂ ಅವರನ್ನು ಬೆಂಬಲಿಸುವ ಭರವಸೆಯನ್ನು ನೀಡುವ ದಿನ. ನಿಮ್ಮ ಸಂಗಾತಿಗೆ ನಿಮ್ಮ ಮನದಾಳದ ಮಾತುಗಳನ್ನು ಹೇಳಬೇಕು ಎಂದು ಭಾವಿಸುತ್ತೀರಿ. ಆದರೆ, ಮುಕ್ತವಾಗಿ ಹೇಳಿಕೊಳ್ಳಲು ಕಷ್ಟವಾಗುತ್ತಿದೆಯಾ?

ಅದಕ್ಕಾಗಿಯೇ ಈ ದಿನ ಸೂಕ್ತವಾಗಿದೆ. ನಿಮ್ಮ ಹೃದಯ ಮಾತನಾಡುವ ಸಮಯ. ‘ನಾನು ನಿನಗೆ ಸದಾ ಬೆಂಬಲವಾಗಿರುತ್ತೇನೆ’ ಇಂದು ‘ನಾನು ನಿನ್ನನ್ನು ಎಂದಿಗೂ ನೋಯಿಸುವುದಿಲ್ಲ’ ಎನ್ನುವವರೆಗೆ ನಿಮ್ಮ ಸಂಗಾತಿಗೆ ನೀವು ಭರವಸೆಗಳನ್ನು ನೀಡಬಹುದು. ಈ ದಿನವನ್ನು ತುಂಬಾ ಸ್ಪೆಷಲ್​ ಆಗಿ, ಸ್ಮರಣೀಯವಾಗಿ ಮಾಡುವ ಆಸೆ ನಿಮ್ಮಲ್ಲಿದೆ. ಆದರೆ, ಯಾವ ರೀತಿ ಮಾಡಬೇಕು ಎನ್ನುವ ಯೋಚನೆ ನಿಮ್ಮದಾಗಿದ್ದರೆ, ನೀವು ಪ್ರಯತ್ನಿಸಬೇಕಾದ ಕೆಲವು ವಿಚಾರಗಳು ಇಲ್ಲಿವೆ.

ಪ್ರಾಮಿಸ್ ಡೇ: ಇದು ಭರವಸೆಗಳನ್ನು ಆಚರಿಸುವ ದಿನ. ಅಂದರೆ ಈ ದಿನ ನೀವು ಒಂದು ಅಥವಾ ಹೆಚ್ಚಿನ ಭರವಸೆಗಳನ್ನು ನಿಮ್ಮ ಸಂಗಾತಿಗೆ ಮಾಡಬಹುದು. ಆದರೆ, ಈ ಭರವಸೆಗಳು ಸರಳ ಮತ್ತು ಅರ್ಥಪೂರ್ಣವಾಗಿರಬೇಕು. ಅದು ನಿಜವಾಗಿಯೂ ನಿಮ್ಮ ಸಂಗಾತಿಗೆ ಬಹಳಷ್ಟು ಅರ್ಥಪೂರ್ಣವಾಗಿರಬೇಕು. ಉದಾಹರಣೆಗೆ, ಪ್ರಾಮಿಸ್ ಡೇ ದಿನದಂದು, ನಿಮ್ಮ ಸಂಗಾತಿಯ ಅನುಮತಿ ಪಡೆಯುವ, ಮನೆಕೆಲಸಗಳಲ್ಲಿ ನಿಮ್ಮ ಸಂಗಾತಿಗೆ ಸಹಾಯ ಮಾಡುವ ಅಥವಾ ಅವರ ನೆಚ್ಚಿನ ಚಲನಚಿತ್ರವನ್ನು ಜೊತೆ ಕುಳಿತು ವೀಕ್ಷಿಸುವ ಭರವಸೆ ನೀಡಬಹುದು. ಇವು ಸರಳ ಮತ್ತು ಅರ್ಥಪೂರ್ಣವಾದ ಭರವಸೆಗಳಾಗಿವೆ. ಇದು ನಿಜವಾಗಿಯೂ ಅವರಿಗೆ ಬಹಳಷ್ಟು ಇಷ್ಟವಾಗುತ್ತದೆ.

ಪ್ರಾಮಿಸ್ ರಿಂಗ್: ನೀವು ಪ್ರಾಮಿಸ್ ರಿಂಗ್ ಖರೀದಿಸಬಹುದು ಮತ್ತು ನಿಮ್ಮ ಸಂಗಾತಿಯ ಹೃದಯವನ್ನು ಸಂಪೂರ್ಣವಾಗಿ ಗೆಲ್ಲಬಹುದು. ಈ ಉಂಗುರಗಳು ಉತ್ತಮ ರೋಮ್ಯಾಂಟಿಕ್ ಹೇಳಿಕೆಯನ್ನು ನೀಡುತ್ತವೆ. ನಿಮ್ಮ ಸಂಗಾತಿಯನ್ನು ನೀವು ಎಷ್ಟು ಪ್ರೀತಿಸುತ್ತೀರಿ ಎಂಬುದನ್ನೂ ಹೇಳುತ್ತದೆ. ಇದು ಅರ್ಥಪೂರ್ಣ ಮತ್ತು ಗಂಭೀರ ಗೆಸ್ಚರ್ ಅನ್ನು ತೋರಿಸುತ್ತದೆ. ನೀವಿಬ್ಬರೂ ಮೊದಲ ಬಾರಿಗೆ ಭೇಟಿಯಾದ ದಿನಾಂಕವನ್ನು ಉಂಗುರದಲ್ಲಿ ಅಚ್ಚೊತ್ತಿಸಬಹುದು. ನಿಮ್ಮ ಸಂಗಾತಿಗೆ ಆ ಉಂಗುರವನ್ನು ಉಡುಗೊರೆಯಾಗಿ ನೀಡುವಾಗ ಅದರ ಜೊತೆಗೆ ಸುಂದರವಾದ ಪ್ರೇಮಸಂದೇಶವಿರುವ ಪತ್ರವನ್ನೂ ಲಗತ್ತಿಸಿ. ನಿಮ್ಮ ಪ್ರೀತಿಯನ್ನು ಅದರೊಳಗೆ ತುಂಬಿ ಕೊಡಿ.

ಮ್ಯಾಚಿಂಗ್ ಟ್ಯಾಟೂ: ನೀವಿಬ್ಬರೂ ಮದುವೆಯಾಗುವುದು ಖಚಿತವಾಗಿದ್ದರೆ, ನೀವು ಹೊಂದಿಕೆಯಾಗುವ ಟ್ಯಾಟೂವನ್ನು ನೀವೇ ಮಾಡಿಕೊಳ್ಳಬಹುದು. ಪ್ರೀತಿ ಮತ್ತು ಸ್ವಲ್ಪ ನೋವು ಒಳಗೊಂಡಿರುವ ಇದು ಖಂಡಿತವಾಗಿಯೂ ಉತ್ತಮ ಕಲ್ಪನೆಯಾಗಿದೆ. ಹೊಂದಾಣಿಕೆಯ ಟ್ಯಾಟೂ ವಿಶೇಷವಾದದ್ದನ್ನು ಸೂಚಿಸುತ್ತದೆ. ಬಹುಶಃ ಪದ, ಚಿಹ್ನೆ ಅಥವಾ ದಿನಾಂಕವನ್ನು ಟ್ಯಾಟೂನಲ್ಲಿ ಹಾಕಿಕೊಳ್ಳಬಹುದು. ಇಬ್ಬರೂ ಒಪ್ಪಿದರೆ ಮಾತ್ರ ಇದನ್ನು ಮಾಡಿ. ಇದು ನಿಮ್ಮಿಬ್ಬರಿಗೂ ಸ್ಮರಣೀಯ ಅನುಭವವಾಗಿರಬೇಕು.

ಪ್ರೀತಿಯ ಸಂದೇಶವಿರುವ ವಿಡಿಯೋ ರಚಿಸಿ: ನಿಮ್ಮ ಜೀವನದಲ್ಲಿ ಈ ವ್ಯಕ್ತಿಯನ್ನು ನೀವು ನಿಜವಾಗಿಯೂ ಎಷ್ಟು ಗೌರವಿಸುತ್ತೀರಿ ಎಂಬುದನ್ನು ನೀವು ಹೇಗೆ ತೋರಿಸಬಹುದು? ನೀವು ವೀಡಿಯೊ ಸಂಯೋಜನೆ ಮಾಡಬಹುದು. ನಿಮ್ಮ ಸಂಗಾತಿಯೊಂದಿಗಿನ ಎಲ್ಲ ವಿಶೇಷ ಸಮಯಗಳ ಕೆಲವು ಹುಳಿ – ಸಿಹಿ ನೆನಪುಗಳ ಫೋಟೋಗಳೊಂದಿಗೆ ವಿಡಿಯೋ ಮಾಡಿ. ಪ್ರತಿ ಕ್ಷಣವನ್ನು ನಿರೂಪಿಸಲು ನೀವು ಕೆಲವು ರೊಮ್ಯಾಂಟಿಕ್ ಸಂಗೀತ ಅಥವಾ ವಾಯ್ಸ್‌ಓವರ್ ಅನ್ನು ಕೂಡ ಸೇರಿಸಬಹುದು. ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ನಿಮ್ಮ ಸಂಗಾತಿಯ ಹೃದಯವನ್ನು ಸ್ಪರ್ಶಿಸುತ್ತವೆ.

ಹೂವುಗಳು: ಕೊನೆಯದು ಆದರೆ ಕಡಿಮೆಯೇನಲ್ಲ. ಹೂವುಗಳು ಸರಳವಾಗಿ ಕಾಣಿಸಬಹುದು, ಆದರೆ ಅವು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಬಹಳಷ್ಟು ಬಾರಿ ಹೂವುಗಳೇ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಸಂಗಾತಿಯು ಇಷ್ಟಪಡುವ ಹೂವುಗಳ ಪುಷ್ಪಗುಚ್ಛವನ್ನು ಮಾಡಿ ಮತ್ತು ಪ್ರತಿ ಹೂವು ಪ್ರತಿನಿಧಿಸುವ ಭರವಸೆಯನ್ನು ವಿವರಿಸುವ ಸಣ್ಣ ಟಿಪ್ಪಣಿಯನ್ನು ಸೇರಿಸಿ. ಹೂವುಗಳ ಸುಂದರ ಸುವಾಸನೆ, ಸಂದೇಶಗಳಲ್ಲಿ ನಿಮ್ಮ ಬದ್ಧತೆಯ ಮಾತುಗಳು ಮತ್ತು ಚಿಂತನಶೀಲ ಕ್ರಿಯೆಗಳು ನಿಮ್ಮ ಸಂಗಾತಿಯನ್ನು ನಿಮ್ಮೊಂದಿಗೆ ಹೆಚ್ಚು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!