spot_img
spot_img
spot_img
spot_img
spot_img
spot_img

ಗರ್ಭಿಣಿ ಮಹಿಳೆಯರೇ ಎಚ್ಚರ.. ಯಾವುದೇ ಕಾರಣಕ್ಕೂ ಇದರ ಸೇವನೆ ಬೇಡವೇ ಬೇಡ

Published on

spot_img

ಗರ್ಭಾವಸ್ಥೆಯಲ್ಲಿ ಎದೆಯುರಿ ಒಂದು ಸಾಮಾನ್ಯ ಸಮಸ್ಯೆ. ಹೆಚ್ಚಾಗಿ ನೀರು ಕುಡಿದ ನಂತರ ಇದು ಸಂಭವಿಸುತ್ತೆ. ಇದಲ್ಲದೆ, ಹಾರ್ಮೋನುಗಳ ಬದಲಾವಣೆಗಳಿಂದಾಗಿ, ಎದೆಯಲ್ಲಿ ಉರಿ ಸಮಸ್ಯೆ ಕಂಡು ಬರಬಹುದು. ತಜ್ಞರ ಪ್ರಕಾರ, ಒಂದು ವೇಳೆ ನೀವು ಗರ್ಭವತಿಯಾಗಿದ್ದು ಧೂಮಪಾನಿಯೂ ಆಗಿದ್ದರೆ ಕೆಲವು ಸುರಕ್ಷತಾ ವಿಧಾನಗಳನ್ನು ನೀವು ಅನಿವಾರ್ಯವಾಗಿ ಅನುಸರಿಸಲೇಬೇಕಾಗುತ್ತದೆ.

ಏಕೆಂದರೆ ಈ ಸಮಯದಲ್ಲಿ ನಿಮ್ಮ ಧೂಮಪಾನ ನಿಮ್ಮ ಗರ್ಭದಲ್ಲಿರುವ ಕಂದನ ಆರೋಗ್ಯಕ್ಕೆ ಅತಿ ಹೆಚ್ಚು ಹಾನಿಯುಂಟುಮಾಡಬಹುದು. ಗರ್ಭವತಿ ಸೇವಿಸುವ ಅಹಾರ, ಪಾನೀಯಗಳು, ಔಷಧಿಗಳು ಮೊದಲಾದವು ಗರ್ಭದಲ್ಲಿರುವ ಕಂದನ ಆರೋಗ್ಯದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳನ್ನುಂಟು ಮಾಡಬಹುದು.

ಉದಾಹರಣೆಗೆ ಒಂದು ವೇಳೆ ಗರ್ಭವತಿ ವೈದ್ಯರು ಸೂಚಿಸಿದ ಆಹಾರವನ್ನು ಸಂತುಲಿತ ಪ್ರಮಾಣದಲ್ಲಿ ಸೇವಿಸಿದಾಗ ಮತ್ತು ವೈದ್ಯರು ಬೇಡವೆಂದ ಯಾವುದೇ ಆಹಾರ, ಔಷಧ ಅಥವಾ ವ್ಯಸನಗಳನ್ನು ಸ್ವೀಕರಿಸದೇ ಇದ್ದಾಗ ಕಂದನ ಆರೋಗ್ಯವೂ ಉತ್ತಮವಾಗಿರುತ್ತದೆ.

 

ಆದರೆ ಗರ್ಭವತಿ ತನ್ನ ಆಲಸಿ ಮತ್ತು ಅನಾರೋಗ್ಯಕರ ಜೀವನಕ್ರಮವನ್ನು ಗರ್ಭವತಿಯಾದ ಬಳಿಕವೂ ಬದಲಿಸಿಕೊಳ್ಳದೇ ಧೂಮಪಾನದಂತಹ ಕೆಟ್ಟ ಚಟಗಳನ್ನು ಮುಂದುವರೆಸಿದರೆ ಮಾತ್ರ ಮಗುವಿನ ಆರೋಗ್ಯ ಬಾಧೆಗೊಳಗಾಗುವುದು ಖಚಿತ. ಈ ವಿಷಯವನ್ನು ವಿಜ್ಞಾನವೇ ಪುರಸ್ಕರಿಸಿದೆ. ಆದ್ದರಿಂದ ಬರಲಿರುವ ಪುಟ್ಟ ಕಂದನ ಆರೋಗ್ಯಕ್ಕಾಗಿಯಾದರೂ ನೀವು ಈ ಕೆಟ್ಟ ಚಟವನ್ನು ಬಿಡಲೇಬೇಕು. ಇದರಿಂದ ನಿಮಗೆ ತೊಂದರೆಯಾದರೂ ಸಹಾ!

ಒಂದು ವೇಳೆ ನೀವು ಹಠ ಹಿಡಿದು ಧೂಮಪಾನವನ್ನು ಮುಂದುವರೆಸಿದರೆ ನಿಮ್ಮ ಕಂದನ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮವುಂಟಾಗುತ್ತದೆ ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ನಿಮಗೆ ಮಾನಸಿಕವಾಗಿ ದೃಢನಿಶ್ಚಯ ತಾಳಲು ನೆರವಾಗುತ್ತದೆ…

ನಿಮ್ಮ ಧೂಮಪಾನದಿಂದ ಏನಾಗುತ್ತದೆ?

ಧೂಮಪಾನದಿಂದ ಮೊತ್ತ ಮೊದಲನೆಯದಾಗಿ ಶ್ವಾಸಕೋಶಗಳ ಮೇಲೆ ದುಷ್ಟರಿಣಾಮವುಂಟಾಗುತ್ತದೆ. ರಕ್ತದಲ್ಲಿ ನಿಕೋಟಿನ್ ಬೆರೆಯುವ ಮೂಲಕ ಹತ್ತು ಹಲವು ತೊಂದರೆಗಳು ಎದುರಾಗುತ್ತವೆ. ಇವು ಇತರರಿಗೆ ಎಷ್ಟು ಹಾನಿಕಾರವೋ ಅದಕ್ಕಿಂತಲೂ ಹೆಚ್ಚು ಗರ್ಭವತಿಗೆ ಹಾನಿಕಾರಕವಾಗಿದೆ.

ಧೂಮಪಾನದ ಹೊಗೆಯಲ್ಲಿ ಏನೇನಿದೆ?

 ಈ ಹೊಗೆಯಲ್ಲಿ ಪ್ರಮುಖವಾಗಿ ವಿಷಕಾರಕವಾದ ಟಾರಿನಂತಹ ಗಾಢವಾದ ದ್ರವ ನಿಕೋಟಿನ್ ಇದೆ. ಹೆಚ್ಚೂ ಕಡಿಮೆ ಬೆಲ್ಲದ ನೀರಿನಷ್ಟು ಗಾಢವಾಗಿರುವ ಈ ದ್ರವ ರಕ್ತನಾಳಗಳ ಒಳಗೆ ಸುಲಭವಾಗಿ ಅಂಟಿಕೊಳ್ಳುತ್ತದೆ. ಶ್ವಾಸನಾಳಗಳ ಒಳಭಾಗದಲ್ಲಿಯೂ ಅಂಟಿಕೊಂಡು ಗಟ್ಟಿಯಾಗಿಬಿಡುತ್ತದೆ.

ಧೂಮಪಾನ ಮತ್ತು ಮಗುವಿನ ಮೂತ್ರಪಿಂಡಗಳ ವೈಫಲ್ಯ

ಇತ್ತೀಚಿನ ಒಂದು ಸಂಶೋಧನೆಯಲ್ಲಿ ಕಂಡುಬಂದಿರುವಂತೆ ಗರ್ಭಾವಸ್ಥೆಯಲ್ಲಿ ಮಹಿಳೆ ಅತಿ ಹೆಚ್ಚಾಗಿ ಧೂಮಪಾನ ಮಾಡಿದರೆ ಇವರ ಗರ್ಭದಲ್ಲಿರುವ ಮಗುವಿನ ಮೂತ್ರಪಿಂಡಗಳಲ್ಲಿ ತೊಂದರೆ ಕಂಡುಬಂದಿರುತ್ತದೆ.

Source link

spot_img
spot_img
Vivek Kudarimath, Journalist with 8 years of experience. worked In Pepper Media ( Zee Kannada Project ) Worked In BP9 News ( Now it is Newsfirst)

Latest articles

Thief Arrest: ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ: ಸಿಕ್ಕಿಬಿದ್ದಿದ್ದೆ ರೋಚಕ !

ಬೆಂಗಳೂರು:  ಮಾಡಿದ್ದ ಸಾಲ ತೀರಿಸಲು ಕಳ್ಳತನದ ದಾರಿ ಹಿಡಿದಿರುವ ಕಳ್ಳ ಹಾಗೆ  ರಸ್ತೆ ಬದಿ ನಿಲ್ಲಿಸಿದ್ದ ಕಾಂಕ್ರಿಟ್ ಮಿಕ್ಸರ್...

ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ವಾಟ್ಸಪ್ ಅಲ್ಲಿ ಲೀಕ್..!?

12 ನೇ ತರಗತಿಯ ಬೋರ್ಡ್‌ ಪರೀಕ್ಷೆ ಪ್ರಾರಂಭವಾದ ಒಂದು ತಾಸಿಗೂ ಮುಂಚೆನೇ ಪ್ರಶ್ನೆಪತ್ರಿಕೆ ವಾಟ್ಸಪ್‌ ಮೂಲಕ ಸೋರಿಕೆಯಾಗಿರುವ (Question...

Gruha Lakshmi Scheme: ಗೃಹಲಕ್ಷ್ಮೀ ಯೋಜನೆಯ 7ನೇ ಕಂತು ಹಣ ಯಾವಾಗ ಬರುತ್ತೆ.? ಕೊನೆಗೂ ಸಿಕ್ತು ಉತ್ತರ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಯೋಜನೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ...

ಪೊಲೀಸರು ಇನ್ಮುಂದೆ ಅಸ್ತಿ ಖರೀದಿ ಅಥವಾ ಮಾರಾಟ ಮಾಡಲು ಅನುಮತಿ ಕಡ್ಡಾಯ

ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ...
error: Content is protected !!