ಗೋಕಾಕ ಮತಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ಒಳ ಒಪ್ಪಂದ : ಕಾಂಗ್ರೆಸ್ ಮುಖಂಡನ ಗಂಭೀರ ಆರೋಪ

ಗೋಕಾಕ ಮತಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ಒಳ ಒಪ್ಪಂದ : ಕಾಂಗ್ರೆಸ್ ಮುಖಂಡನ ಗಂಭೀರ ಆರೋಪ

ಘಟಪ್ರಭಾ- ಕಾಂಗ್ರೆಸ್ ನಾಯಕ ಅಶೋಕ ಪೂಜಾರಿ ಅವರಿಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಗರಂ ಆಗಿದ್ದಾರೆ, ಘಟಪ್ರಭಾ ಕಾಂಗ್ರೆಸ್ ನ ಮುಖಂಡ ಪ್ರಕಾಶ ಕರಿಗಾರ ಅವರು ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಗಂಭೀರ ಆರೋಪ ಮಾಡಿದ್ದು ಅಶೋಕ ಪೂಜಾರಿ ಅವರಿಗೆ ಟಿಕೆಟ್ ತಪ್ಪಲು ಅವರೇ ನೇರ ಕಾರಣ ಎಂದು ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಸಾಹುಕಾರರ ಆರ್ಭಟಕ್ಕೆ ಹೆದರಿ ಗೋಕಾಕ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಡಮ್ಮಿ ಅಭ್ಯರ್ಥಿಯನ್ನ ಹಾಕಿದ್ದಾರೆ ಎಂದು ಹೇಳಿದರು, ಅಷ್ಟೇ ಅಲ್ಲದೇ ಪ್ರತಿ ದಿನ ಗೋಕಾಕ ಕ್ಷೇತ್ರದಿಂದ ಹತ್ತು ಸಾವಿರ ಜನರು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕರೆ ಮಾಡಿ ಅಶೋಕ ಪೂಜಾರಿ ಅವರಿಗೆ ಯಾಕೆ ಟಿಕೆಟ್ ಕೊಟ್ಟಿಲ್ಲ ಎಂದು ಕೇಳಿದಾಗ, ನನಗೆನು ಗೊತ್ತು ಸತೀಶ ಜಾರಕಿಹೊಳಿ ಅವರಿಗೆ ಕೇಳಿ ಹೈಕಮಾಂಡಗೆ ಕೇಳಿ ಎಂದು ಊಡಾಫೆಯಾಗಿ ಮಾತನಾಡಿದರು ಎಂದು ಪ್ರಕಾಶ ಕರಿಗಾರ ಆರೋಪಿಸಿದರು.

ಹಾಗೂ ಒಂದು ವೇಳೆ ಅಶೋಕ ಪೂಜಾರಿ ಅವರಿಗೆ ಟಿಕೆಟ್ ಕೊಡದಿದ್ದರೆ ಸೋಮವಾರ ಗೋಕಾಕಿನ ಬಸವೇಶ್ವರ ವೃತ್ತದಲ್ಲಿ ವಿಷ ಸೇವಿಸುತ್ತೇವೆ ಎಂದು ಹೇಳಿದ್ದಾರೆ.

error: Content is protected !!