ಅಂಚೆ ಇಲಾಖೆಯಿಂದ 60,544 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, 10ನೇ ತರಗತಿ ಪಾಸಾದವರೂ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೌದು, ಭಾರತೀಯ ಅಂಚೆ ವೃತ್ತ ಭಾರತ ಸರ್ಕಾರದ ಸಂವಹನ ಇಲಾಖೆ ನವದೆಹಲಿಯು ಇತ್ತೀಚಿನ ಉದ್ಯೋಗಗಳ ಅಧಿಸೂಚನೆಯನ್ನು ಘೋಷಿಸಿದ್ದು, 60,544 ಮೇಲ್ ಗಾರ್ಡ್, ಪೋಸ್ಟ್‌ಮ್ಯಾನ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುತ್ತದೆ. 10ನೇ ತರಗತಿ ಪಾಸಾಗಿರುವ ಅಭ್ಯರ್ಥಿಗಳು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೇಂದ್ರ ಸರ್ಕಾರಿ ಹುದ್ದೆ ಹುಡುಕುತ್ತಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಹತೆ, ಪರೀಕ್ಷೆಯ ದಿನಾಂಕ, ಅರ್ಜಿ ಸಲ್ಲಿಸುವುದು ಹೇಗೆ?, ವಯಸ್ಸಿನ ಮಿತಿ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು, ಪ್ರವೇಶ ಕಾರ್ಡ್, ಫಲಿತಾಂಶ, ಪಠ್ಯಕ್ರಮ, ಉತ್ತರ ಕೀ ಮತ್ತು ಹೆಚ್ಚಿನ ಇತರ ವಿವರಗಳಿಗಾಗಿ ನಿಮ್ಮ ಅಧಿಕೃತ ವೆಬ್‌ಸೈಟ್:www.appost.in ಪರಿಶೀಲಿಸಿ!.