ಸುಲಿಗೆ ಪ್ರಕರಣ : ಖಾಕಿ ತೊಟ್ಟು ವಸೂಲಿಗಿಳಿದಿದ್ದ ಕಾನ್ಸ್​ಟೇಬಲ್ ಅಂದರ್….

ಕಳ್ಳರನ್ನು ಹಿಡಿಯಬೇಕಿದ್ದ ಪೇದೆಯೇ ಸುಲಿಗೆಗೆ ಇಳಿದಿದ್ದನು. ವಸೂಲಿಗಿಳಿದಿದ್ದ ಕಾನ್ಸ್​ಟೇಬಲ್​​​​ ಅರೆಸ್ಟ್ ಮಾಡಲಾಗಿದೆ. ಗೋವಿಂದರಾಜನಗರ ಠಾಣೆ ಪೇದೆ ಆನಂದ್​ ಅಮಾನತುಗೊಳಿಸಲಾಗಿದೆ.

ಸುಲಿಗೆ ಪ್ರಕರಣದಲ್ಲಿ ಹಲಸೂರುಗೇಟ್ ಪೊಲೀಸರ ಕೈಗೆ ಆನಂದ್​ ಸಿಕ್ಕಿಬಿದ್ದಿದ್ದು.

ಆನಂದ ಮ್ಯಾಚ್ ಬೆಟ್ಟಿಂಗ್​​ನಲ್ಲಿ ಕೋಟಿ ಕೋಟಿ ಸೋತಿದ್ದು, ಅಕೌಂಟ್ ಝೀರೋ ಆಯ್ತು ಅಂತ ಸುಲಿಗೆಗೆ ಇಳಿದಿದ್ದನು. ಮ್ಯಾಚ್​ ಬುಕ್ಕಿಗಳನ್ನೇ ಬುಟ್ಟಿಗೆ ಹಾಕ್ಕೊಂಡು ಹಣ ಸುಲಿಗೆ ಮಾಡ್ತಿದ್ದನು. ಕಾನ್ಸ್​ಟೇಬಲ್​​ ದೋ ನಂಬರ್ ಅಡ್ಡೆ​ ಟಾರ್ಗೆಟ್ ಮಾಡಿ ರೇಡ್ ಮಾಡ್ತಿದ್ದನು.

ಆನಂದ ಕಾನ್ಸ್​ಟೇಬಲ್​​​​​ ಐಡಿ ಕಾರ್ಡ್​ ತೋರಿಸಿ ಸುಲಿಗೆ ಮಾಡುತ್ತಿದ್ದನು, ಆನಂದನ ಸುಲಿಗೆ ಅವತಾರ ಡಿಸೆಂಬರ್​​​ 7ರಂದು ಬಯಲಾಗಿತ್ತು. ಆನಂದ ಸುಣಕಲ್​​ ಪೇಟೆ ಬಳಿ ರಾಜು ಎಂಬಾತನ ಸುಲಿಗೆ ಮಾಡಿದ್ದನು. ಹವಾಲಾ ಹಣ ಸಾಗಿಸ್ತಿದ್ದೀಯ ಅಂತಾ ಬೆದರಿಸಿ ಅಕೌಂಟ್​ಗೆ 2 ಲಕ್ಷ ಹಾಕಿಸಿಕೊಂಡಿದ್ದ, ರಾಜು ಮುಖೇಶ್​ ಎಂಬಾತನ ಅಕೌಂಟ್​ಗೆ ಹಣ ಹಾಕ್ತಿದ್ದಂತೆ ಎಸ್ಕೇಪ್​ ಆಗಿದ್ದನು. ರಾಜು ಈ ಸಂಬಂಧ ಹಲಸೂರು ಠಾಣೆಗೆ ದೂರು ನೀಡಿದ್ದನು. ಹಲಸೂರು ಗೇಟ್​ ಪೊಲೀಸರು ಕಾನ್ಸ್​ಟೇಬಲ್​​​ ಆನಂದ್​ನನ್ನು ಬಂಧಿಸಿದ್ದಾರೆ. ಡಿಸಿಪಿ ಲಕ್ಷ್ಮಣ್​​​​ ನಿಂಬರಗಿ ಆನಂದ್​ ಸಸ್ಪೆಂಡ್​ ಮಾಡಿ ಆದೇಶ ಹೊರಡಿಸಿದ್ದಾರೆ.

error: Content is protected !!