ಪಿಎಂ ಆವಾಸ್ ಯೋಜನೆ (PMAY) 2024 ಆನ್‌ಲೈನ್ ಅರ್ಜಿ ನಮೂನೆ! ಮನೆ ಇಲ್ಲದವರಿಗೆ ಉಚಿತ ಮನೆ! ಈ ಯೋಜನೆಯಡಿ ಅರ್ಜಿ ಸಲ್ಲಿಸಿ..!

WhatsApp Group Join Now
Telegram Group Join Now
Instagram Account Follow Now

ಈ ಪಿಎಂ ಆವಾಸ ಯೋಜನೆಯನ್ನು ಕೇಂದ್ರ ಸರ್ಕಾರವು ಬಡ ಕುಟುಂಬಗಳಿಗೆ ವಸತಿಗಳನ್ನು ಒದಗಿಸುವ ಗುರಿಯಿಂದ ಆರಂಭಿಸಿತು. 2015 ಜೂನ್ 1 ರಂದು ಈ ಯೋಜನೆಯನ್ನು ಮೊದಲ ಬಾರಿಗೆ ಆರಂಭಿಸಲಾಯಿತು. ಈ ಯೋಜನೆ ಅಡಿಯಲ್ಲಿ ಹಲವಾರು ಬಡ ಕುಟುಂಬಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಉಚಿತವಾಗಿ ವಸತಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಮತ್ತೆ ಇದೀಗ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

PM Aavas Yojana ಗೆ ಅಗತ್ಯವಿರುವ ದಾಖಲೆಗಳು

1. ಆಧಾರ್ ಕಾರ್ಡ್

2. ಮತದಾರರ ಗುರುತಿನ ಚೀಟಿ

3. ಪ್ಯಾನ್ ಕಾರ್ಡ್

4. ಡ್ರೈವಿಂಗ್ ಲೈಸನ್ಸ್

5. ಜಾತಿ ಪ್ರಮಾಣ ಪತ್ರ

6. ಆದಾಯ ಪ್ರಮಾಣ ಪತ್ರ

7. ಆಸ್ತಿ ಮೌಲ್ಯಮಾಪನ ಪ್ರಮಾಣ ಪತ್ರ

8. ಬ್ಯಾಂಕ್ ಖಾತೆಯ ವಿವರ

9. ಅರ್ಜಿದಾರರು ‘ಪಕ್ಕಾ’ ಮನೆ ಹೊಂದಿಲ್ಲ ಎಂಬುದಕ್ಕೆ ಪುರಾವೆ

10. ಅರ್ಜಿದಾರರು ಈ ಯೋಜನೆಯಡಿಯಲ್ಲಿ ಮನೆಯನ್ನು ನಿರ್ಮಿಸುತ್ತಿದ್ದಾರೆ ಎಂಬುದಕ್ಕೆ ಪುರಾವೆ

PM Aavas Yojana ಗೆ ಅರ್ಜಿ ಸಲ್ಲಿಸುವುದು ಹೇಗೆ?

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಿರುವ ಹಂತಗಳನ್ನು ನೋಡಿ.

ಹಂತ: 1 – PMAY ವೆಬ್‌ಸೈಟ್ pmaymis.gov.in ಗೆ ಲಾಗಿನ್ ಮಾಡಿ.

ಹಂತ: 2 – ‘ ನಾಗರಿಕರ ಮೌಲ್ಯಮಾಪನ ‘ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಅನ್ವಯಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ: ” ಕೊಳೆಗೇರಿ ನಿವಾಸಿಗಳಿಗೆ ” ಅಥವಾ ” ಇತರ 3 ಘಟಕಗಳ ಅಡಿಯಲ್ಲಿ ಪ್ರಯೋಜನಗಳು”.

ಹಂತ: 3 – ನಿಮ್ಮ ಆಧಾರ್ ಕಾರ್ಡ್ ವಿವರವನ್ನು ನಮೂದಿಸಬೇಕು.

ಹಂತ: 4 – ಇದಾದ ನಂತರ ನಿಮಗೆ ಒಂದು ಹೊಸ ಪುಟ ತೆಗೆಯುತ್ತದೆ ಅಲ್ಲಿ ನೀವು ಎಲ್ಲ ಇವರಗಳನ್ನು ಭರ್ತಿ ಮಾಡಬೇಕು.

ಹಂತ: 5 – ಅಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್ , ಇತರ ವೈಯಕ್ತಿಕ ವಿವರಗಳನ್ನು , ಬ್ಯಾಂಕ್ ಖಾತೆ ಮತ್ತು ಆದಾಯ ವಿವರಗಳು ನಮ್ಮೂಧಿಸಬೇಕು.

ಹಂತ: 6 – ಇದನ್ನು ಮಾಡಿದ ನಂತರ, ‘ಉಳಿಸು’ ಆಯ್ಕೆಯನ್ನು ಆರಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಎಂಟರ್ ಮಾಡಬೇಕು.

ಹಂತ: 7 – ಮುಂದೆ ಉಳಿಸು ‘ ಬಟನ್ ಮೇಲೆ ಕ್ಲಿಕ್ ಮಾಡಿ . ಈಗ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.

1 ಲಕ್ಷ ಹಣ ಪಡೆಯುವ ಯೋಜನೆಗೆ ಅರ್ಜಿ ಆಹ್ವಾನ! ನಿಮ್ಮಲ್ಲಿ ಈ ದಾಖಲೆಗಳು ಇದ್ದರೆ ತಕ್ಷಣ ಅಪ್ಲೈ ಮಾಡಿ..!

WhatsApp Group Join Now
Telegram Group Join Now
Instagram Account Follow Now

Vivek Kudarimath, Journalist With a Work Experience of 8 years in media Field, Working with vivekvarthe since 15-08-2015

Leave a Comment