Saturday, September 30, 2023

PM Narendra Modi Horoscope: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಜಾತಕ ವಿಶ್ಲೇಷಣೆ

ವಿವೇಕವಾರ್ತೆ : 2028ರ ಜೂನ್ ವೇಳೆಗೆ ನರೇಂದ್ರ ಮೋದಿ ಅವರ ಜನ್ಮ ಜಾತಕದ ಪ್ರಕಾರ ಕುಜ-ರಾಹು ಸಂಧಿ ಕಾಲ (ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವ ಕಾಲ). ಇದು ಮೋದಿಯವರು ಪ್ರಧಾನ ಮಂತ್ರಿ ಹುದ್ದೆಯನ್ನು ಬಿಟ್ಟು ಕೆಳಗೆ ಇಳಿಯಬಹುದಾದ ಕಾಲವಾಗಿರಲಿಕ್ಕೂ ಸಾಕು ಎಂದು ವಿಶ್ಲೇಷಿಸಿದ್ದಾರೆ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ.

ಇಂದು, ಅಂದರೆ ಸೆಪ್ಟೆಂಬರ್ 17ನೇ ತಾರೀಕಿನಂದು ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರ ಜನ್ಮದಿನ. 73 ವರ್ಷ ಪೂರ್ತಿ ಆಗುತ್ತದೆ. ಜನ್ಮದಿನದ ಹಿನ್ನೆಲೆಯಲ್ಲಿ ಅವರ ಜನ್ಮ ಜಾತಕವನ್ನು ವಿಶ್ಲೇಷಣೆ (Horoscope analysis) ಮಾಡಿ, ಮುಂದಿನ ಕೆಲವು ವರ್ಷಗಳು ಹೇಗಿರುತ್ತವೆ ಎಂಬುದನ್ನು ಇಲ್ಲಿ ವಿಶ್ಲೇಷಿಸಿದ್ದೇನೆ. ಇದು ಈ ವರೆಗಿನ ವಿಶ್ಲೇಷಣೆಗಿಂತ ಭಿನ್ನ ಮತ್ತು ನಿರ್ಣಾಯಕವಾದಂಥದ್ದು. ಏಕೆಂದರೆ, ಸ್ವತಃ ನಾನೇ ಹಲವು ಸಲ ಹೇಳಿದ್ದ ಭವಿಷ್ಯ ಹೆಚ್ಚು- ಕಡಿಮೆ 2026ನೇ ಇಸವಿಯ ತನಕ ಮಾತ್ರ ಇದೆ. ಆದರೆ ಈಗ ಹೇಳಲು ಹೊರಟಿರುವುದು ಅದರ ಆಚೆಗೆ ಹಾಗೂ ಇನ್ನು ಮುಂದೆ ಹೇಗೆಲ್ಲ ಇರಲಿದೆ ಎಂಬುದರ ಭವಿಷ್ಯ ವಿಶ್ಲೇಷಣೆ.

ನರೇಂದ್ರ ಮೋದಿ ಅವರು ಈ ಅವಧಿಯಲ್ಲಿ ಮಾಡುವ ಸಾಧನೆ ಅಮೋಘವಾಗಿ ಇರುತ್ತದೆ. ಆದರೆ ಅದೇ ಸಮಯದಲ್ಲಿ ನಿಂದೆಗಳನ್ನೂ ಕೇಳಬೇಕಾಗುತ್ತದೆ. ‘ಶ್ರೇಯಾಂಸಿ ಬಹು ವಿಘ್ನಾನಿ’ ಎಂಬುದು ನಿಂದನೆ ಎಂದು ಮೋದಿಯವರನ್ನು ಇಷ್ಟಪಡುವವರು ತಿಳಿದುಕೊಳ್ಳಲಿ. ಈ ಅವಧಿಯಲ್ಲಿ ಕೋಪ-ತಾಪ ಕೂಡದು.

2025ನೇ ಇಸವಿಯ ಮಾರ್ಚ್ ನಂತರ 2027ನೇ ಇಸವಿಯ ಜೂನ್ ತನಕ ಮೋದಿಯವರಿಗೆ ಅಪವಾದ ಭಯ, ಮಾನಸಿಕ ಹಿಂಸೆ, ಕೆಲ ಅಪಾಯಗಳು ಎದುರಾಗಬಹುದು. ಇದೂ ಸಾಲದು ಎಂಬಂತೆ 2025ನೇ ಇಸವಿಯ ಏಪ್ರಿಲ್ ನಿಂದ 2026ನೇ ಇಸವಿಯ ಏಪ್ರಿಲ್ ತನಕ ಕುಜ ದಶೆಯಲ್ಲಿ ಬುಧ ಭುಕ್ತಿಯೂ ನಡೆಯುವುದರಿಂದ ಒಂದೆಡೆ ವಿದೇಶದಲ್ಲಿ ಉನ್ನತ ಗೌರವಾದರ, ಸ್ಥಾನ- ಮಾನಗಳೂ ದೇಶದ ಒಳಗೆ ಶತ್ರುಗಳ ಪೀಡೆಯೂ ಹೆಚ್ಚಾಗಲಿದೆ. ಖರದ್ರೇಕ್ಕಾಣಾಧಿಪತಿ ಬುಧನ ಭುಕ್ತಿಯೂ ಕುಜನ ಶತ್ರುವೂ ಆಗಿರೋದು ಉತ್ತಮವಲ್ಲ. ಈ ಸನ್ನಿವೇಶದಲ್ಲಿ ಮೋದಿಯವರು ಅಭಿಮಾನದಿಂದ ನೋಡುವವರಿಗೆ ಸಹಜವಾಗಿ ನೋವಾಗುತ್ತದೆ. ಆದರೆ ಮೋದಿಯವರ ಜಾತಕ ವಿಶ್ಲೇಷಣೆ ಮಾಡಿದರೆ ಈ ಜೀವಕ್ಕೆ ನೋವು- ನಲಿವುಗಳು ಅಂಟಿಕೊಳ್ಳುವುದಿಲ್ಲ. ಆ ವ್ಯಕ್ತಿ ಸ್ಥಿತಪ್ರಜ್ಞ. ಆದ್ದರಿಂದ ಅವರಲ್ಲೇನೂ ಆತಂಕ ಇರುವುದಿಲ್ಲ.

ಆದರೂ ಬುಧ ಭುಕ್ತಿ ಕಾಲದಲ್ಲಿ ಅವರ ದೇಹದಲ್ಲಿ ಕ್ಯಾಲ್ಷಿಯಂ ಪ್ರಮಾಣ ಕಡಿಮೆಯಾಗಿ ನರಗಳ ದುರ್ಬಲತೆ ಕಾಣಿಸಬಹುದು. ಆದರೆ ಇದೆಲ್ಲ ದೊಡ್ಡ ವಿಚಾರವೇನಲ್ಲ. ವೈದ್ಯಕೀಯ ಚಿಕಿತ್ಸೆಗಳಿವೆ. ಗಟ್ಟಿಯಾಗಿ ಹೇಳಬಹುದಾದ್ದು ಏನೆಂದರೆ, ಆಯಸ್ಸಿಗೆ ಯಾವ ತೊಂದರೆಯೂ ಇಲ್ಲ. 2028ರ ಜೂನ್ ವೇಳೆಗೆ ನರೇಂದ್ರ ಮೋದಿ ಅವರ ಜನ್ಮ ಜಾತಕದ ಪ್ರಕಾರ ಕುಜ-ರಾಹು ಸಂಧಿ ಕಾಲ (ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವ ಕಾಲ). ಇದು ಮೋದಿಯವರು ಪ್ರಧಾನ ಮಂತ್ರಿ ಹುದ್ದೆಯನ್ನು ಬಿಟ್ಟು ಕೆಳಗೆ ಇಳಿಯಬಹುದಾದ ಕಾಲವಾಗಿರಲಿಕ್ಕೂ ಸಾಕು.

ಆ ನಂತರದ ರಾಜಕಾರಣವೇ ಬೇರೆ ಆಗುತ್ತದೆ. ಗೋಚಾರ ರೀತಿಯಾಗಿ ನೋಡಿದರೂ ಇಡೀ ಜಗತ್ತೇ ಕಲಹಗಳನ್ನು ಎದುರಿಸಲಿದೆ ಎಂಬುದು ಕಂಡುಬರುತ್ತದೆ. ಮ್ಲೇಂಚ್ಛಾಂತಕರಿಗೆ ಅಂತ್ಯವಾಗುವ ಕಾಲ. ಮ್ಲೇಂಚ್ಛರಿಗೆ ಅವರ ತತ್ವ ಮತಕ್ಕೆ ವಿರುದ್ಧವಾದವರು ಅಂತ್ಯ ಮಾಡಲು ಎದುರಾದಾರು. ಇದು ಭಾರತದಲ್ಲೂ ನಡೆಯಬಹುದು. ಆಗಲೇ ಯೋಗಿ ಆದಿತ್ಯನಾಥ್ ರಂಥ ವ್ಯಕ್ತಿ ಪ್ರಧಾನಿಯಾಗಿ ಅಂಥವರನ್ನು ಹತೋಟಿಗೆ ತರುವರು. ನರೇಂದ್ರ ಮೋದಿಯವರು ಇಡೀ ವಿಶ್ವಕ್ಕೆ ಅತ್ಯಂತ ಬೇಕಾದ ವ್ಯಕ್ತಿಯಾಗಿ, ರಾಜ ಸನ್ಯಾಸಿಯಂತೆ ಬಹುದೊಡ್ಡ ಜವಾಬ್ದಾರಿಯ ಸ್ಥಾನಕ್ಕೆ ಏರಬಹುದು.

ಇನ್ನು ಈ ಬಾರಿ ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ವಿಶೇಷ ಏನೆಂದರೆ, ಅವರ ಜನ್ಮ ನಕ್ಷತ್ರದ ತಿಕೋಣ ನಕ್ಷತ್ರದಲ್ಲೇ ಬರುತ್ತದೆ. ರಾಶಿಯೂ ತ್ರಿಕೋಣ ಕರ್ಕ ವೃಶ್ಚಿಕ ಕರ್ಕ ಮೀನ ತ್ರಿಕೋಣ ರಾಶಿಯೂ ಪುಷ್ಯಾ ಅನೂರಾಧಾ, ಉತ್ತರಾಭಾದ್ರಾ ಶನಿಯ ತಿಕೋಣ ನಕ್ಷತ್ರ. ಸೆಪ್ಟೆಂಬರ್ 17ನೇ ತಾರೀಕಿನಂದು ಪುಷ್ಯಾ ನಕ್ಷತ್ರ ಇದೆ.

ಒಟ್ಟಿನಲ್ಲಿ ಮೋದಿಯವ ಅಖಂಡ ಸಾಮ್ರಾಜ್ಯ ಯೋಗವು ಜಗತ್ತನ್ನೇ ಆಳಲಿದೆ. ಆದರೆ ಇದು ಹೆದರಿಸಿ, ಬೆದರಿಸಿ ಅಥವಾ ಕ್ರೌರ್ಯದಿಂದಲ್ಲ. ಪ್ರಜಾಪ್ರೀತಿ ಸಂಪಾದಿಸಿಯೇ ಆಯ್ಕೆಯಾಗೋದು. ಮುಂದಿನ ಸಲದ ಲೋಕಸಭೆಯಲ್ಲಿ ಬಿಜೆಪಿ ಯಾರ ಹಂಗೂ ಇಲ್ಲದೆ ಅಧಿಕಾರಕ್ಕೆ ಬರುತ್ತದೆ. ಜತೆಗೆ ದೇಶದ ಕೀರ್ತಿಯು ವಿಶ್ವದಾದ್ಯಂತ ಹರಡಲಿದೆ.

ಜ್ಯೋತಿಷ್ಯ ರೀತಿಯಲ್ಲೇ ಖಾತ್ರಿಯಾಗಿ ಹೇಳಬಹುದಾದ್ದು ಏನೆಂದರೆ, ನರೇಂದ್ರ ಮೋದಿ ಅವರ ಹೆಸರು ಇತಿಹಾಸದಲ್ಲಿ ತುಂಬ ಎತ್ತರದ ವ್ಯಕ್ತಿತ್ವವಾಗಿ ದಾಖಲಾಗುತ್ತದೆ. ಈ ಮುನಷ್ಯ ಶತ್ರುಗಳು ಸಹ ಮೆಚ್ಚುವಂಥ, ಒಪ್ಪುವಂಥ ಕೆಲಸ ಮಾಡಿಯೇ ಮಾಡುತ್ತಾರೆ. ರಾಜಕೀಯ ದ್ವೇಷಗಳು ಹಾಗೂ ಅಸೂಯೆಯ ಆಚೆಗೆ ಎಲ್ಲರೂ ಒಪ್ಪುವಂಥ ಕೆಲಸಗಳು ಆಗುತ್ತವೆ. ನಮ್ಮ ಮುಂದಿನ ತಲೆಮಾರುಗಳು ಸ್ಮರಣೆ ಮಾಡುವಂಥ ವ್ಯಕ್ತಿ ನರೇಂದ್ರ ಮೋದಿ ಆಗುತ್ತಾರೆ.

ಕೃಪೆ- ಟಿವಿ9 ಕನ್ನಡ

RELATED ARTICLES

ಸಂಕ್ರಾಂತಿ ವೇಳೆಗೆ ರಾಜ್ಯದಲ್ಲಿ ಕೆಲ ಅವಘಢ ; ದೇಶದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ : ಕೋಡಿಮಠ ಶ್ರೀ.!

ವಿವೇಕ ವಾರ್ತೆ : ಲೋಕಸಭಾ ಚುನಾವಣೆ ಬಗ್ಗೆ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರಮುಖ ಭವಿಷ್ಯವೊಂದನ್ನು ನುಡಿದಿದ್ದಾರೆ. https://youtu.be/u6lq_pUsNkA?si=YWlDzZ4FEqGXLL4M ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ. ಅಮಾವಾಸ್ಯೆಯ ಬಳಿಕ ಕರ್ನಾಟಕದಲ್ಲಿ ಭಾರೀ...

ಶನಿವಾರದ ದಿನ ಅಪ್ಪಿತಪ್ಪಿಯೂ ಈ 5 ಕೆಲಸಗಳನ್ನು ಮಾಡಬೇಡಿ..!

ವಿವೇಕವಾರ್ತೆ :  ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ವಾರದ ಏಳು ದಿನಕ್ಕೂ ಒಬ್ಬ ದೇವರಿಗೆ ಮೀಸಲಿಡಲಾಗುತ್ತದೆ. ಅದರಂತೆ ಶನಿವಾರ ಶನೇಶ್ವರ (ಶನೀಶ್ವರ) ದಿನ. ಈ ಶನಿವಾರದ ಸ್ವಭಾವವು ಭೀಕರವಾಗಿದೆ. ಧರ್ಮಗ್ರಂಥಗಳ ಪ್ರಕಾರ ಶನಿವಾರವನ್ನು...

ಇದೇ ದಿನ ಗಣೇಶ ಚೌತಿ ಹಬ್ಬ…! ಇಲ್ಲಿದೆ ಸಂಪೂರ್ಣ ಕ್ಲಾರಿಟಿ..!

ವಿವೇಕವಾರ್ತೆ : ಈ ಬಾರಿ ಗಣೇಶನ ಹಬ್ಬವನ್ನು ಸೋಮವಾರ ಆಚರಿಸಬೇಕೆ ಅಥವಾ ಮಂಗಳವಾರ ಆಚರಿಸಬೇಕಾ ಅನ್ನುವ ಗೊಂದಲವಿದೆ. ದೃಕ್ ಪಂಚಾಂಗವನ್ನು ಅನುಸರಿಸುವವರು ಸೆ.19 (ಮಂಗಳವಾರ) ಹಬ್ಬ ಆಚರಿಸುತ್ತಾರೆ. ಸೂರ್ಯ ಸಿದ್ಧಾಂತದ ಪಂಚಾಂಗವನ್ನು ಫಾಲೋ...
- Advertisment -

Most Popular

ಲೋಕಸಭೆ ಬಿಜೆಪಿ ಟಿಕೆಟ್ ಸಿಗುವ ಭರವಸೆ ಇದೆ – ರಮೇಶ್ ಕತ್ತಿ

ವಿವೇಕವಾರ್ತೆ : ಈ ಬಾರಿ ಲೋಕಸಭೆ ಚುನಾವಣೆಗೆ ತಮಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ. ಅವರು ಇಂದು ಚಿಕ್ಕೋಡಿಯ ನಂದಗಾಂವ ಗ್ರಾಮದಲ್ಲಿ...

ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಸರ್ಕಾರಿ ಆಸ್ಪತ್ರೆಯ ಅರವಳಿಕೆ ತಜ್ಞ ವೈದ್ಯೆ.!

ವಿವೇಕವಾರ್ತೆ : ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯಯೊಬ್ಬರು ಅನುಮಾನಸ್ಪದವಾಗಿ ಸಾವನಪ್ಪಿದ ಘಟನೆ ಇಂದು (ಸೆ.29) ನಡೆದಿದೆ. ಕೊಳ್ಳೆಗಾಲ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾI ಸಿಂದುಜಾ (28)...

ರೀಲ್ಸ್ ಮಾಡಿ ಟ್ರೋಲ್ ಆದ ಮಹಿಳಾ ಪೊಲೀಸ್ ; ವಿಡಿಯೋ ವೈರಲ್.!

ವಿವೇಕವಾರ್ತೆ : ಮಹಿಳೆ ಪೊಲೀಸ್​​​ ರೀಲ್ಸ್​​ ಮಾಡಲು ಹೋಗಿ ಇಲಾಖೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಲಾದ ಘಟನೆಯೊಂದು ಪಂಜಾಬನಲ್ಲಿ ನಡೆದಿದೆ. ಪೊಲೀಸರು ರೀಲ್ಸ್​​ ಮಾಡಬಾರದು ಎಂದು ಇಲ್ಲಾ, ಆದರೆ ಅವರು ಸಮಾಜದ ಒಳಿತನ್ನು ಕಾಪಾಡುವ...

ಗುರುವಿನ ಸಹಾಯದಿಂದ ಬುಗುರಿಯಂತೆ ತಿರುಗುತ್ತಿರುವ ತುಂಬು ಗರ್ಭಿಣಿ : ವಿಡಿಯೋ ವೈರಲ್.!

ವಿವೇಕವಾರ್ತೆ : ಇಲ್ಲೊಬ್ಬಳು ತುಂಬು ಗರ್ಭಿಣಿಯಾಗಿರುವ ಮಹಿಳೆ ತನ್ನ ಗುರುವಿನ ಸಹಾಯದಿಂದ ಬುಗುರಿಯಂತೆ ಸುತ್ತಲೂ ಸುತ್ತುತ್ತಿರುವ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿ ತುಂಬಾ ವೈರಲ್ ಆಗಿದೆ. ಪ್ರತಿ ಕುಟುಂಬದಲ್ಲಿಯೂ ಗರ್ಭಿಣಿಯಾದ ಮಹಿಳೆಯ ಬಗ್ಗೆ...
error: Content is protected !!