ವಿವೇಕವಾರ್ತೆ : ಓರ್ವ ವ್ಯಕ್ತಿ ಒಂದೇ ಬೈಕ್ನಲ್ಲಿ ಏಳು ಜನರೊಂದಿಗೆ ಎರಡು ನಾಯಿ ಮತ್ತು ಕೋಳಿ ಜೊತೆಗೆ ಕೆಲ ಸಾಮಾನುಗಳನ್ನು ಕುರಿಸಿಕೊಂಡು ಸವಾರಿ ಮಾಡುವ ವಿಡಿಯೋ ಸದ್ಯ ವೈರಲ್ ಆಗಿದೆ.
ವೈರಲ್ ಆಗಿರೋ ವಿಡಿಯೋದಲ್ಲಿ ಇಡೀ ಕುಟುಂಬವೇ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದೆ ಎಂದು ಭಾಸವಾಗುತ್ತದೆ. ವಿಡಿಯೋದಲ್ಲಿ ಬೈಕ್ ಸವಾರನ ಹಿಂದೆ ಆತನ ಪತ್ನಿ, ಅವಳ ಮೇಲೆ ಒಂದು ಮಗು, ಮಗುವಿನ ನಂತರ ಮತ್ತೆ ಎರಡು ಮಕ್ಕಳು. ಇನ್ನು ಸವಾರನ ಮುಂದೆ ಮುಂದೆ ಇಬ್ಬರು ಮಕ್ಕಳು ಕುಳಿತಿದ್ದಾರೆ.
ಸಾಲದಕ್ಕೆ ಈ ಏಳು ಜನರೊಂದಿಗೆ ಎರಡು ನಾಯಿಮರಿಗಳು ಮತ್ತು ಕೋಳಿಗಳಿವೆ. ಇಷ್ಟೆ ಅಲ್ಲಾ ಮಾರಾಯರೇ, ಇದಲ್ಲದೇ ಬೈಕ್ ಮೇಲೆ ಲಗೇಜ್ ಕೂಡ ಇರುವುದನ್ನು ನಾವು ನೋಡಬಹುದಾಗಿದೆ.
ರಸ್ತೆಯಲ್ಲಿ ಸಂಚರಿಸುತ್ತಿದ್ದ ಈ ಬೈಕ್ ಸವಾರನನ್ನು ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಮತ್ತೊಬ್ಬ ಬೈಕ್ ಸವಾರ ಗಮನಿಸಿ ವಿಡಿಯೋ ಮಾಡಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ವೈರಲ್ ಆದ ಈ ವಿಡಿಯೋ ನೋಡಿದ ಅನೇಕ ನೆಟಿಜನ್‌ಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
Purvanchal 15 ಎಂಬ ಇನ್ಸ್ಟಾಗ್ರಾಂದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾದಿದೆ. ವಿಡಿಯೋ ನೋಡಿದ ಕೆಲವರು ಸವಾರನಿಗೆ ಛೀಮಾರಿ ಹಾಕುತ್ತಿದ್ದರೆ, ಇನ್ನು ಕೆಲವರು ತಮಾಷೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ದೊಡ್ಡ ಸಾಹಸವೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬರಂತು ಆ ಬೈಕ್ ಓಡಿಸಿದ ವ್ಯಕ್ತಿಗೆ ನಮಸ್ಕಾರಗಳು ಎಂದು ಉದ್ಘಾರ ತೆಗೆದಿದ್ದಾರೆ. ಇನ್ನು ಕೆಲವರು ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಬುದ್ದಿ ಹೇಳಿ ಕಾಮೆಂಟ್ ಮಾಡಿದ್ದಾರೆ. ಹೀಗೆ ಅನೇಕರು ತಮ್ಮದೇ ಆದ ಭಾವದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನ ವೈರಲ್ ಆಗಿರೋ ಈ ವಿಡಿಯೋ ಎಲ್ಲಿ ಯಾವಾಗ ಮಾಡಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಕ್ಲಿಪ್ ನೋಡಿದ ನೆಟ್ಟಿಗರು ಆತಂಕಕ್ಕೆ ಒಳಗಾಗಿದ್ದಾರೆ.
https://www.instagram.com/reel/CyNY_hmOCFT/?utm_source=ig_web_copy_link